ಸಾರಾಂಶ
ದೇಶ ಇನ್ನಷ್ಟು ಅಭಿವೃದ್ಧಿ ಪಥದತ್ತ ಮುನ್ನಡೆಯಲು ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿರುವುದು ಅಗತ್ಯ. ಭಾರತವನ್ನು ವಿಶ್ವಗುರುವಾಗಿಸುವ ದಿವ್ಯ ಸಂಕಲ್ಪವನ್ನು ಹೊತ್ತು ಕೆಲಸ ಮಾಡಬೇಕು.
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಗುರುಮಠಕಲ್ ತಾಲೂಕಿನ ಇಂದಿರಾನಗರ (ಕ್ಯಾತನಾಳ), ಸಂಗ್ವಾರ, ಕೊಂಡಾಪುರ, ಗುಡೂರ್ ಗ್ರಾಮಗಳಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಚಲೋ ಅಭಿಯಾನ ಮಂಡಲ ಸಂಚಾಲಕ ಭೀಮರಾಯ ಶೇಖಶಿಂದಿ ನೇತೃತ್ವದಲ್ಲಿ 2024ಕ್ಕೆ ಮತ್ತೊಮ್ಮೆ ಮೋದಿ ಸರಕಾರ ಗೋಡೆ ಬರಹ ಹಾಗೂ ಮೋದಿ ಅವರ ಸಾಧನೆ ಕರಪತ್ರ ಮನೆ ಮನೆಗೆ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಕಾರ್ಯದರ್ಶಿ ಲಲಿತಾ ಅನಪುರ, ದೇಶ ಇನ್ನಷ್ಟು ಅಭಿವೃದ್ಧಿ ಪಥದತ್ತ ಮುನ್ನಡೆಯಲು ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿರುವುದು ಅಗತ್ಯ. ಭಾರತವನ್ನು ವಿಶ್ವಗುರುವಾಗಿಸುವ ದಿವ್ಯ ಸಂಕಲ್ಪವನ್ನು ಹೊತ್ತು ಕೆಲಸ ಮಾಡಬೇಕು ಎಂದರು.
ವಿಕಸಿತ ಭಾರತ ಸಂಕಲ್ಪದ ಮೂಲಕ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಗುರುಮಠಕಲ್ ಮಂಡಲದ ಪ್ರತಿ ಗ್ರಾಮಗಳಿಗೆ ತಲುಪಿಸುತ್ತೇವೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅಪಾರವಿದೆ. ಅಭಿವೃದ್ಧಿ ಪಥದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಅವರು ಮಾಡಿದ ಸಾಧನೆ ಅಪಾರ. ಪ್ರಧಾನಿಗಳ ಮೇಲಿನ ಗೌರವದಿಂದ ಅತ್ಯಂತ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ನಮ್ಮ ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ ಎಂದು ಗ್ರಾಮಚಲೋ ಅಭಿಯಾನ ಮಂಡಲ ಸಂಚಾಲಕ ಭೀಮರಾಯ ಶೇಖಶಿಂದಿ ಹೇಳಿದರು.ಗುರುಮಠಕಲ್ ಮಂಡಲ ಪ್ರಧಾನ ಕಾರ್ಯದರ್ಶಿ, ಭೀಮಣ್ಣ ಮಡಿವಾಳ್ಕರ್, ಅಂಬರೇಶ್ ನಾಯಕ, ನಾಗಪ್ಪ ಗಚ್ಚಿನಮನಿ, ರವಿ ಕೋರೆ, ಗುರು ಬಡಿಯಾಳ್, ಮರೀಲಿಂಗಪ್ಪ, ನಿಂಗಪ್ಪ ಸಂಗ್ವಾರ್, ದೇವು ಮುನಗಲ್, ಬಾಬು ಚಂದ್ರಕಾಂತ್ ಪಾಟೀಲ್ ಕೊಂಡಾಪುರ, ಮಲ್ಲು ಗುಡೂರ ಇತರರಿದ್ದರು.