ಜಾತಿ, ಧರ್ಮ ನೋಡದೇ ಯೋಜನೆ ರೂಪಿಸಿದ ಮೋದಿ: ಎನ್.ಎಸ್. ಹೆಗಡೆ

| Published : Mar 29 2024, 12:47 AM IST

ಜಾತಿ, ಧರ್ಮ ನೋಡದೇ ಯೋಜನೆ ರೂಪಿಸಿದ ಮೋದಿ: ಎನ್.ಎಸ್. ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿಪಡಿಸಿ ಜನತೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಭಟ್ಕಳ: ಮೋದಿಯವರು ಯಾವುದೇ ಜಾತಿ, ಧರ್ಮ ನೋಡದೇ ಯೋಜನೆ ರೂಪಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಿಂದ ಎಲ್ಲರಿಗೂ ಸದುಪಯೋಗವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ ತಿಳಿಸಿದರು.ಪಟ್ಟಣದ ಮಣ್ಕುಳಿಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ಸರ್ಕಾರದ ಯೋಜನೆ ಮನೆಮನೆಗೆ ತಲುಪಬೇಕು. ಪ್ರತಿ ಮನೆಯ ತಾಯಂದಿರನ್ನೂ ಕಾರ್ಯಕರ್ತರು ಭೇಟಿ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ದಾಖಲೆ ಮತಗಳಿಂದ ಗೆಲ್ಲುವಂತೆ ಮಾಡಬೇಕೆಂದರು.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿಪಡಿಸಿ ಜನತೆಗೆ ಸಾಕಷ್ಟು ಯೋಜನೆಗಳನ್ನು ಜ್ಯಾರಿಗೆ ತಂದಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿ ಆಗುವುದಕ್ಕಿಂತ ಮೊದಲು ದೇಶವನ್ನು‌ ತುಚ್ಛವಾಗಿ ನೋಡಲಾಗುತ್ತಿತ್ತು. ಆದರೆ ಮೋದಿ ಪ್ರಧಾನಿ‌ ಆದ ಮೇಲೆ ದೇಶವು ವಿಶ್ವದಲ್ಲಿಯೇ ಹೆಸರು ಮಾಡಿದೆ ಎಂದರು.2004ರಿಂದ 2014ರ ವರೆಗೆ 10 ವರ್ಷ ಎಲ್ಲ ರೀತಿಯಲ್ಲೂ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ 2014ರ ಬಳಿಕ ಹೆಸರೇ ಇಲ್ಲದಂತಾಗಿದೆ ಎಂದ ಅವರು, ಕಾಂಗ್ರೆಸ್ ಪಕ್ಷ ಗ್ಯಾರಂಟಿ ಮುಂದಿಟ್ಟುಕೊಂಡು ಮತ ಯಾಚಿಸುತ್ತಿದೆ. ನಮಗೆ ಮೋದಿಯೇ ಗ್ಯಾರಂಟಿ. ಪ್ರಧಾನಿ ಮೋದಿ ನೀಡಿದ ಯೋಜನೆಯ ಗ್ಯಾರೆಂಟಿ ಮಹಿಳೆಯರನ್ನು ತಲುಪಬೇಕು ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ನಮ್ಮ ದೇಶ ಮುನ್ನಡೆಸುವವರ ಜತೆಗೆ ಎಲ್ಲರೂ ದುಡಿಯಬೇಕು, ಕೆಲಸ ಮಾಡಬೇಕು ಎಂಬ ಆಶಯ ಪ್ರಧಾನ ಮೋದಿ ಅವರದ್ದು. ಬಿಜೆಪಿ ಶಾಲು ಧರಿಸಿದರೆ ನಮ್ಮಲ್ಲಿ ಧೈರ್ಯ ಹೆಚ್ಚಾಗಲಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಲು ಮಹಿಳಾ ಕಾರ್ಯಕರ್ತರು ಮುಂದಾಗಬೇಕು. ಆ ನಿಟ್ಟಿನಲ್ಲಿ ಪ್ರತಿ ಬೂತ್ ನಲ್ಲೂ ಮಹಿಳಾ ಕಾರ್ಯಕರ್ತರು ಕ್ರಿಯಾಶೀಲರಾಗಿ ಪಕ್ಷವನ್ನು ಗೆಲ್ಲಿಸಬೇಕು ಎಂದರು. ಪ್ರಾಸ್ತಾವಿಕವಾಗಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ ಮಾತನಾಡಿ, ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಮಹಿಳೆಯರು ಎನ್ನುವುದು ಒಂದು ಶಕ್ತಿ. ಎಲ್ಲರೂ ಒಗ್ಗಟ್ಟಾಗಿ ದೇಶಕ್ಕೆ ಅವಶ್ಯಕವಾದ ಬಿಜೆಪಿ ಪರ ಕೆಲಸ ಮಾಡಲೇಬೇಕು. ಮಹಿಳೆಯರ ಪಾತ್ರ ರಾಜಕೀಯದಲ್ಲಿ ಪ್ರಮುಖವಾಗಿದೆ. ಅಪವಾದ, ನಿಂದನೆಯನ್ನು ಮೆಟ್ಟಿ ನಿಂತು ಉತ್ತಮ ಸ್ಥಾನವನ್ನು ಅಲಂಕರಿಸಬೇಕು. ಮಹಿಳೆಯರಿಗೆ ಹೆಚ್ಚಿನ ಗೌರವಿಸುವ ಪಕ್ಷ ಬಿಜೆಪಿ ಆಗಿದೆ. ನಾರಿ ಶಕ್ತಿಯ ಅನುಭವ ದೇಶಕ್ಕೆ ತಿಳಿಸಬೇಕು ಎಂದರು.ವೇದಿಕೆಯಲ್ಲಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಸಂಚಾಲಕ ಗೋವಿಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಭಟ್ಕಳ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಭಟ್ಕಳ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಿತಾ ಹೇರೂರ್ಕರ್, ಭಟ್ಕಳ ಮಂಡಲ ನಿಕಟಪೂರ್ವ ಅಧ್ಯಕ್ಷ ಸುಬ್ರಾಯ ದೇವಾಡಿಗ ಮುಂತಾದವರಿದ್ದರು.