ಬಸವಣ್ಣನ ವಚನ ಕಾಯಕಕ್ಕೆ ಮೋದಿ ಗೌರವ, ನಮ್ಮ ಹೆಮ್ಮೆ: ಖೂಬಾ
KannadaprabhaNewsNetwork | Published : Oct 30 2023, 12:31 AM IST
ಬಸವಣ್ಣನ ವಚನ ಕಾಯಕಕ್ಕೆ ಮೋದಿ ಗೌರವ, ನಮ್ಮ ಹೆಮ್ಮೆ: ಖೂಬಾ
ಸಾರಾಂಶ
22ನೇ ಕಲ್ಯಾಣ ಪರ್ವದಲ್ಲಿ 2ನೇ ದಿನದ ಧರ್ಮ ಚಿಂತನ ಗೋಷ್ಠಿ ಉದ್ಘಾಟಿಸಿ ಕೇಂದ್ರ ಸಚಿವ ಅಭಿಮತ
ಬಸವಕಲ್ಯಾಣ: 12ನೇ ಶತಮಾನದಲ್ಲಿನ ಬಸವಣ್ಣವರ ವಚನ ಸಂದೇಶಗಳು ಮತ್ತು ಅವರು ಮಾಡಿದ ಕಾಯಕ ತತ್ವಗಳನ್ನು ಮಾತೆ ಮಹಾದೇವಿಯವರು ನಾಡಿನ ಉದ್ದಗಲಕ್ಕು ಬೆಳೆಸಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ಇಲ್ಲಿನ ಹೊರವಲಯದಲ್ಲಿರುವ ಬಸವ ಮಹಾಮನೆ ಆವರಣದಲ್ಲಿ 22ನೇ ಕಲ್ಯಾಣ ಪರ್ವದ ಭಾನುವಾರ ನಡೆದ ಎರಡನೆ ದಿನದ ಧರ್ಮ ಚಿಂತನ ಗೋಷ್ಠಿ-2 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾತೆ ಮಹಾದೇವಿಯವರು ಅನೇಕ ಅಪಮಾನಗಳು ಅಡೆ ತಡೆಗಳು ಬಂದರು ಸಹಿತ ಅಂಜದೆ ಬಸವ ತತ್ವಗಳನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಶ್ಲಾಘಿಸಿದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ನಿಜವಾಗಿ ವಿಶ್ವಗುರು ಬಸವಣ್ಣವರ ವಚನ ಕಾಯಕ ಸಂದೇಶಗಳನ್ನು ಅರ್ಥಮಾಡಿಕೊಂಡು ನೆನಪಿಸಿ ಗೌರವಿಸುತ್ತಿದ್ದಾರೆ. ಇದು ನಮಗೆ ಹಮ್ಮೆಯ ವಿಷಯವಾಗಿದೆ ಎಂದರು. ಬೀದರ್ ನಗರಾಭಿವೃಧ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಶರಣರ ನಾಡು ಎಂದು ಪ್ರಖ್ಯಾತಿ ಪಡೆದಿರುವ ಬಸವಕಲ್ಯಾಣವು ಎಲ್ಲಾ ಶರಣರ ಗವಿಗಳು ಟೂರಿಜಂ ಕಾರಿಡಾರ್ ಅಭಿವೃದ್ಧಿ ಮಾಡಲು ಪ್ರಧಾನಿ ಮೋದಿಯವರಿಗೆ ಶಿಫಾರಸ್ಸು ಮಾಡಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮನವಿ ಮಾಡಿದರು. ಕೂಡಲ ಸಂಗಮ ಬಸವಧರ್ಮ ಪೀಠದ ಅಧ್ಯಕ್ಷ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿಯವರು ಸಾನ್ನಿಧ್ಯ ವಹಿಸಿ ಮಾತನಾಡಿ, ಬೆಂಗಳೂರಿನಲ್ಲಿರುವ ಮೆಟ್ರೋ ರೈಲು ನಿಲ್ದಾಣಕ್ಕೆ ಬಸವೇಶ್ವರ ಹೆಸರು ನಾಮಕರಣ ಮಾಡಬೇಕು, ವಿಜಯಪುರ ಜಿಲ್ಲೆಯನ್ನು ಬಸವೇಶ್ವರ ಜಿಲ್ಲೆಯಂದು ನಾಮಕರಣ ಮಾಡಬೇಕು, ಅಲ್ಲದೆ ಬಸವಕಲ್ಯಾಣಕ್ಕೆ ರೈಲು ಸಂಪರ್ಕ ಸೇವೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೇಲೇಂದ್ರ ಬೆಲ್ದಾಳೆ ಮಾತನಾಡಿದರು. ಕೂಡಲಸಂಗಮದ ಸದ್ಗುರು ಮಾದೇಶ್ವರ ಸ್ವಾಮಿ, ಅನುಭವ ಮಂಟಪದ ಸಂಚಾಲಕರಾದ ಶಿವಾನಂದ ದೇವರು, ಬೇಲೂರ ವಿರಕ್ತಮಠದ ಶಿವಕುಮಾರ ಸ್ವಾಮಿ, ಬಸವನ ಭಾಗೇವಾಡಿ ವಿರತಿಶಾನಂದ ಸ್ವಾಮಿ, ಬೇಲೂರಿನ ಪಂಚಾಕ್ಷರಿ ಸ್ವಾಮಿ, ರಾಜೇಂದ್ರಕುಮಾರ ಗಂದಗೆ, ಆರ.ಜಿ. ಶಟಕಾರ, ಕುಶಾಲರಾವ ಪಾಟೀಲ್ ಬೀದರ, ವಿಜಯಪುರ ಡಾ. ಜೆ.ಎಸ್. ಪಾಟೀಲ್, ವಿವೇಕಾನಂದ ಎಚ್ ಕೆ, ಹುಮನಾಬಾದ ಶಾಸಕ ಡಾ. ಸಿದ್ಧಲಿಂಗಪ್ಪ ಪಾಟೀಲ್ ,ತೆಲಂಗಾಣದ ಅನೀಲ್ ಪಾಟೀಲ್, ಪತ್ರಕರ್ತ ಸಂಗಮೇಶ ಎಸ್. ಜವಾದಿ, ರವಿ ಕೊಳಕೂರ ಉಪಸ್ಥಿತರಿದ್ದರು.