ಸಾರಾಂಶ
ಮೋದಿ ಅವರ ಭಾವಚಿತ್ರ ಹಿಡಿದು ಸಿಹಿ ಹಂಚಿ , 101 ಈಡುಗಾಯಿ ಹೊಡೆದರು. ಆನಂತರ ನಗರದ ಹಳೇ ಬಸ್ ನಿಲ್ದಾಣದ ಕೆಂಗಲ್ ಹನುಮಂತಯ್ಯ ವೃತ್ತದ ಬಳಿ ಸಾರ್ವಜನಿಕರಿಗೆ ಗಿಡ ವಿತರಣೆ ಮಾಡಿದರು.
ರಾಮನಗರ:
ಪ್ರಧಾನಮಂತ್ರಿ ನರೇಂದ್ರ ಮೋದಿರವರ ಜನ್ಮದಿನದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರಲ್ಲದೆ ಈಡುಗಾಯಿ ಹೊಡೆದು ಸಿಹಿ ಹಂಚಿ ಸಂಭ್ರಮಿಸಿದರು.ಬಿಜೆಪಿ ಯುವ ಮೋರ್ಚಾ ಮತ್ತು ನಗರ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮೋದಿ ಅವರ ಭಾವಚಿತ್ರ ಹಿಡಿದು ಸಿಹಿ ಹಂಚಿ , 101 ಈಡುಗಾಯಿ ಹೊಡೆದರು. ಆನಂತರ ನಗರದ ಹಳೇ ಬಸ್ ನಿಲ್ದಾಣದ ಕೆಂಗಲ್ ಹನುಮಂತಯ್ಯ ವೃತ್ತದ ಬಳಿ ಸಾರ್ವಜನಿಕರಿಗೆ ಗಿಡ ವಿತರಣೆ ಮಾಡಿದರು.
ರೇಷ್ಮೆ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಗೌತಮ್‌ಗೌಡ ಮಾತನಾಡಿ, ಪ್ರಧಾನಿ ಮೋದಿರವರ ಆಡಳಿತದಿಂದಾಗಿ ದೇಶ ಇಂದು ಪ್ರಗತಿಯತ್ತ ಹೆಜ್ಜೆ ಇಟ್ಟಿದೆ. ಅವರ ದಕ್ಷ ಆಡಳಿತದಿಂದ ಮತ್ತಷ್ಟು ಮಗದಷ್ಟು ಶಕ್ತಿ ಬಂದಿದೆ ಎಂದು ಹೇಳಿದರು.ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಪಿ.ಎಸ್. ಜಗದೀಶ್ ಮಾತನಾಡಿ, ವಿಶ್ವ ಕಂಡ ಅದ್ಭುತ ನಾಯಕ ನರೇಂದ್ರ ಮೋದಿ ಅವರನ್ನು ಇಡೀ ಜಗತ್ತು ಹೊಗಳುತ್ತಿದೆ. ಭಾರತವನ್ನು ವಿಶ್ವವೇ ತಿರುಗಿ ನೋಡುವಂತೆ ಮಾಡಿ ನವ ಭಾರತ ನಿರ್ಮಾಣಕ್ಕೆ ಮುನ್ನಡಿ ಬರೆದ ನರೇಂದ್ರ ಮೋದಿ ಅಪರೂಪದ ನಾಯಕ ಎಂದು ಬಣ್ಣಿಸಿದರು.ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಆರ್. ನಾಗರಾಜು, ಬಿಜೆಪಿ ರಾಜ್ಯ ವಕ್ತಾರ ರುದ್ರದೇವರು, ನಗರ ಘಟಕ ಅಧ್ಯಕ್ಷ ದರ್ಶನ್‌ರೆಡ್ಡಿ, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ, ಪ್ರಧಾನ ಕಾರ್ಯದರ್ಶಿ ಕಾಳಯ್ಯ, ಗ್ರಾ. ಕಾರ್ಯದರ್ಶಿಗಳಾದ ಮಹದೇವ್, ಕಿಶನ್, ಮುಖಂಡರಾದ ಜಿ.ವಿ. ಪದ್ಮನಾಭ್, ಬಿ. ನಾಗೇಶ್, ಚಂದ್ರಶೇಖರೆಡ್ಡಿ, ಪುಷ್ಪಲತ, ಅಂಜನಾಪುರ ವಾಸು, ಕೃಷ್ಣ, ಮಂಜುನಾಥ್, ಜೈಕುಮಾರ್, ಕೆಂಪರಾಜು, ಚಂದ್ರಶೇಖರ್, ದೇವುರಾವ್ ಜಾಧವ್, ಚಂದನ್‌ಮೋರೆ, ಚನ್ನಪ್ಪ, ರಾಘವೇಂದ್ರ, ಸಿದ್ದಲಿಂಗಮೂರ್ತಿ ಹಾಜರಿದ್ದರು.17ಕೆಆರ್ ಎಂಎನ್ 6.ಜೆಪಿಜಿ
ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ಈಡುಗಾಯಿ ಹೊಡೆದರು.