ಮೋದಿ ಹುಟ್ಟುಹಬ್ಬ: ಪರಿಸರ ಸ್ವಚ್ಚತಾ ಕಾರ್ಯಕ್ರಮ

| Published : Sep 23 2025, 01:06 AM IST

ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿ ೭೫ನೇ ಜನ್ಮದಿನದ ಅಂಗವಾಗಿ ಬಿಜೆಪಿ ಸೇವಾ ಪಾಕ್ಷಿಕವಾಗಿ ಅ.೨ರ ತನಕ ವಿವಿಧ ಸೇವಾ ಚಟುವಟಿಕೆ ನಡೆಯುತ್ತಿದ್ದು ಶನಿವಾರ ಪುತ್ತೂರಿನ ಕಲ್ಲೇಗ ದೈವಸ್ಥಾನದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಪ್ರಧಾನಮಂತ್ರಿ ನರೇಂದ್ರ ಮೋದಿ ೭೫ನೇ ಜನ್ಮದಿನದ ಅಂಗವಾಗಿ ಬಿಜೆಪಿ ಸೇವಾ ಪಾಕ್ಷಿಕವಾಗಿ ಅ.೨ರ ತನಕ ವಿವಿಧ ಸೇವಾ ಚಟುವಟಿಕೆ ನಡೆಯುತ್ತಿದ್ದು ಶನಿವಾರ ಪುತ್ತೂರಿನ ಕಲ್ಲೇಗ ದೈವಸ್ಥಾನದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ಸೇವಾ ಪಾಕ್ಷಿಕ ಕಾರ್ಯಕ್ರಮ ೧೪ ದಿವಸ ನಿರಂತರ ಕಾರ್ಯಕ್ರಮ ನಡೆಯಲಿದೆ. ಸಮಾಜದ ದೀನ ದಲಿತ, ದುರ್ಬಲ ಅನಾರೋಗ್ಯ ಪೀಡಿತರಿಗೆ ನೆರವು, ಸಾರ್ವಜನಿಕ ಪರಿಸರದ ಬಗ್ಗೆ ಕಾಳಜಿ ವಹಿಸಿ ಹತ್ತಾರು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ, ವಸಂತಲಕ್ಷ್ಮೀ, ಸತೀಶ್ ನಾಯ್ಕ್‌ ಕಾರ್ಯದರ್ಶಿ ಶಶಿಧರ್ ನಾಯಕ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ ಶಗ್ರಿತ್ತಾಯ, ಆಶಾ ಭಗವಾನ್, ಯುವ ಮೋರ್ಚಾ ಅಧ್ಯಕ್ಷ ನಿತೇಶ್ ಕಲ್ಲೇಗ, ನಗರಸಭಾ ಸದಸ್ಯರಾದ ಗೌರಿ ಬನ್ನೂರು, ಕೆ.ಜೀವಂಧರ್ ಜೈನ್, ಶಕ್ತಿ ಕೇಂದ್ರದ ಪ್ರಮುಖ್ ನಾಗೇಂದ್ರ ಬಾಳಿಗ, ಪ್ರಮುಖರಾದ ನಿರಂಜನ್, ಪುತ್ತೂರು ಕೋ ಓಪರೇಟಿವ್ ಬ್ಯಾಂಕ್‌ನ ನಿರ್ದೇಶಕ ಶ್ರೀಧರ ಪಟ್ಲ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ದಯಾನಂದ ಕರ್ಮಲ ಮತ್ತಿರರುಇದ್ದರು.