ಮೋದಿ ಆಶೀರ್ವಾದ ಸಿಕ್ಕಿದ್ದು ನನ್ನ ಗೆಲುವಿನ ದಿಕ್ಸೂಚಿ: ಗಾಯತ್ರಿ

| Published : Mar 19 2024, 12:48 AM IST

ಮೋದಿ ಆಶೀರ್ವಾದ ಸಿಕ್ಕಿದ್ದು ನನ್ನ ಗೆಲುವಿನ ದಿಕ್ಸೂಚಿ: ಗಾಯತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ಸಬಲೀಕರಣದ ಬಗ್ಗೆ ನರೇಂದ್ರ ಮೋದಿಯವರು ಕೇವಲ ಬಾಯಿ ಮಾತಿನಲ್ಲಿ ಹೇಳುವುದಿಲ್ಲ. ಅದನ್ನು ಕಾರ್ಯ ರೂಪಕ್ಕೆ ತಂದು ತೋರಿಸಿದ್ದಾರೆ. ಮಹಿಳಾ ಕೋಟಾದಲ್ಲಿ ನನಗೆ ದಾವಣಗೆರೆ ಲೋಕಸಭಾ ಕ್ಷೇತ್ರ ಟಿಕೆಟ್ ಕೊಟ್ಟಿದ್ದಾರೆ. ಅಂತಹ ಮಹಾನ್ ನಾಯಕರ ಜೊತೆಗೆ ನಿಂತು, ರ್‍ಯಾಲಿಯಲ್ಲಿ ಭಾಗವಹಿಸಲು ತಮಗೆ ಅವಕಾಶ ಕಲ್ಪಿಸುವ ಮೂಲಕ ಲಕ್ಷಾಂತರ ಮಹಿಳೆಯರಿಗೆ ಮೋದಿ ಗೌರವ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಶಿವಮೊಗ್ಗದ ಲೋಕಸಭೆ ಚುನಾವಣಾ ಪ್ರಚಾರ ಸಭೆ ವೇಳೆ ತೆರೆದ ವಾಹನದಲ್ಲಿ ಹೋಗಿದ್ದು ನನ್ನ ಪುಣ್ಯವಾಗಿದ್ದು, ಈ ಮೂಲಕ ನನ್ನ ಗೆಲುವಿಗೆ ಸ್ವತಃ ಮೋದಿ ಆಶೀರ್ವಾದ ಮಾಡಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದ್ದಾರೆ.

ತಮ್ಮ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿ ಪ್ರಚಾರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತೆರೆದ ವಾಹನದಲ್ಲಿ ಸಮಾರಂಭದ ವೇದಿಕೆಗೆ ತಲುಪಿದ್ದು, ಲಕ್ಷಾಂತರ ಜನರ ಮಧ್ಯೆ ವಿಶ್ವ ನಾಯಕ ನರೇಂದ್ರ ಮೋದಿಯವರ ಜೊತೆಗೆ ಹೋಗಲು ಅವಕಾಶ ಸಿಕ್ಕಿರುವುದು ನನ್ನ ಗೆಲುವಿಗೆ ದಿಕ್ಸೂಚಿ ಎಂದರು.

ಮಹಿಳಾ ಸಬಲೀಕರಣದ ಬಗ್ಗೆ ನರೇಂದ್ರ ಮೋದಿಯವರು ಕೇವಲ ಬಾಯಿ ಮಾತಿನಲ್ಲಿ ಹೇಳುವುದಿಲ್ಲ. ಅದನ್ನು ಕಾರ್ಯ ರೂಪಕ್ಕೆ ತಂದು ತೋರಿಸಿದ್ದಾರೆ. ಮಹಿಳಾ ಕೋಟಾದಲ್ಲಿ ನನಗೆ ದಾವಣಗೆರೆ ಲೋಕಸಭಾ ಕ್ಷೇತ್ರ ಟಿಕೆಟ್ ಕೊಟ್ಟಿದ್ದಾರೆ. ಅಂತಹ ಮಹಾನ್ ನಾಯಕರ ಜೊತೆಗೆ ನಿಂತು, ರ್‍ಯಾಲಿಯಲ್ಲಿ ಭಾಗವಹಿಸಲು ತಮಗೆ ಅವಕಾಶ ಕಲ್ಪಿಸುವ ಮೂಲಕ ಲಕ್ಷಾಂತರ ಮಹಿಳೆಯರಿಗೆ ಮೋದಿ ಗೌರವ ಸೂಚಿಸಿದ್ದಾರೆ ಎಂದು ತಿಳಿಸಿದರು.

ಮತ್ತೆ ನರೇಂದ್ರ ಮೋದಿಯವರ ಪ್ರಧಾನಿಯಾಗಿ ಮಾಡಲು ಅಹೋರಾತ್ರಿ ಶ್ರಮಿಸುತ್ತೇವೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಭದ್ರಕೋಟೆ. ಅದನ್ನು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ನಮ್ಮ ಮತದಾರರು ಸಾಬೀತುಪಡಿಸಲಿದ್ದಾರೆ. ಈ ಸಲವೂ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಲೆ ಜೋರಾಗಿಯೇ ಇದೆ. ಕಳೆದ 28 ವರ್ಷದಿಂದಲೂ ನಮ್ಮ ಕ್ಷೇತ್ರದ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಸಲವೂ ಮತದಾರರು ಬಿಜೆಪಿ ಅಭ್ಯರ್ಥಿಯಾದ ತಮಗೆ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ್, ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ ಇತರರಿದ್ದರು.

ಸುರಕ್ಷಿತ ಕೈಗಳಿಗೆ ಆಡಳಿತ

ಕಮಲದ ಹೂವು ಮುಡಿದು ನಾನು ದೆಹಲಿಗೆ ಹೋಗಲು ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಸಮಸ್ತ ಮತದಾರರು ಆಶೀರ್ವಾದ ಮಾಡಲಿದ್ದಾರೆ. ಇಡೀ ದೇಶ ಸುಭದ್ರ, ಸುಭಿಕ್ಷವಾಗಿರಬೇಕು. ಇದು ಆಗಬೇಕೆಂದರೆ ಮತ್ತೊಮ್ಮೆ ನರೇಂದ್ರ ಮೋದಿಯವರ ಸುರಕ್ಷಿತ ಕೈಗಳಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿಯಬೇಕು. ಎಲ್ಲಾ ವರ್ಗದ ಜನರೂ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನೇ ಕಾಯುತ್ತಿದ್ದಾರೆ.

ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ