ಸಾರಾಂಶ
2047ರ ಹೊತ್ತಿಗೆ ವಿಕಸಿತ ಭಾರತವಾಗುವ ಗುರಿಯನ್ನು ನಾವು ಹೊಂದಿದ್ದೇವೆ. ಈಗಾಗಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಿ ದಾಪುಗಾಲು ಇಟ್ಟಾಗಿದೆ
ಗದಗ: ಪ್ರಧಾನಿ ಮೋದಿ ಅವರ ದಿಟ್ಟ ನಾಯಕತ್ವಕ್ಕೆ ಯಾವತ್ತೂ ಜನಮತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಪಕ್ಷದ ಸೇವಾ ಪಾಕ್ಷಿಕ ಅಭಿಯಾನದಡಿ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ ಇನ್ನಷ್ಟು ಕಾಲ ಏಕೆ ಮುಂದುವರಿಯಬೇಕು ಎನ್ನುವುದಕ್ಕೆ ಹಲವು ಕಾರಣಗಳು ಸಿಗುತ್ತವೆ ಎಂದು ಹೇಳಿದರು.ಮೋದಿ ಅವರು 25ಕ್ಕೂ ಹೆಚ್ಚು ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಅದರಲ್ಲೂ ನಿರ್ಣಾಯಕ ಹುದ್ದೆಯಲ್ಲಿ ಇದ್ದರೂ ಅವರ ಜನಪ್ರಿಯತೆ ಕುಗ್ಗಿಲ್ಲ. ಚಾರಿತ್ರ್ಯಕ್ಕೆ ಕಳಂಕ ಬಂದಿಲ್ಲ. ಭ್ರಷ್ಟಾಚಾರ ಸನಿಹ ಸುಳಿದಿಲ್ಲ. ವಿದೇಶ ಪ್ರವಾಸಕ್ಕೆ ಹೋಗಿ ದಿನವಿಡೀ ಶೃಂಗಸಭೆ, ವಿದೇಶಿ ಗಣ್ಯರ ಜತೆ ಮಾತುಕತೆ ನಡೆಸಿ, ರಾತ್ರಿ ಪ್ರಯಾಣಿಸಿ ಮರುದಿನ ಬೆಳಗ್ಗೆ ನಾಲ್ಕು ರಾಜ್ಯಗಳಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ತುಂಬಿದ ಸಭೆಯಲ್ಲಿ ಮಾತನಾಡುವ ಹುರುಪು ಮೋದಿ ಅವರದ್ದು. ಪಾಕಿಸ್ತಾನ ವಿರುದ್ಧದ ಕಾರ್ಯಾಚರಣೆಯ ವೇಳೆ ಅಪರಾತ್ರಿಯಲ್ಲೂ ಭದ್ರತಾ ಸಲಹೆಗಾರ, ರಕ್ಷಣಾ ಮಂತ್ರಿಯ ಜತೆ ಕುಳಿತು ಕ್ಷಣ ಕ್ಷಣದ ಮಾಹಿತಿಯನ್ನು ಪ್ರಧಾನಿ ಅವರು ಪಡೆಯುತ್ತಿದ್ದರು ಎಂದು ಕೇಳಿದಾಗ ಹೆಮ್ಮೆ ಎನಿಸುತ್ತದೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪುರ ಮಾತನಾಡಿ, 2047ರ ಹೊತ್ತಿಗೆ ವಿಕಸಿತ ಭಾರತವಾಗುವ ಗುರಿಯನ್ನು ನಾವು ಹೊಂದಿದ್ದೇವೆ. ಈಗಾಗಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಿ ದಾಪುಗಾಲು ಇಟ್ಟಾಗಿದೆ. ಅತಿದೊಡ್ಡ ಪ್ರಜಾಪ್ರಭುತ್ವ ದೇಶವಷ್ಟೆ ಅಲ್ಲದೇ ಅತಿದೊಡ್ಡ ಉತ್ಪಾದಕ ದೇಶವಾಗುವ, ಜಾಗತಿಕ ಪೂರೈಕೆ ಜಾಲದಲ್ಲಿ ನಿರ್ಣಾಯಕ ಕೊಂಡಿಯಾಗುವ, ರಕ್ಷಣಾ ವಲಯಲದಲ್ಲಿ ಸ್ವಾವಲಂಬನೆ ಸಾಧಿಸುವ, ಬಡತನದ ರೇಖೆಯಿಂದ ಪುಟಿಯುವ ಗುರಿ ಎದುರಾಗಿದೆ ಎಂದರು.
ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಸ್. ಕರೀಗೌಡ್ರ, ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಮಾತನಾಡಿದರು. ಪ್ರಮುಖರಾದ ಜಗನ್ನಾಥಸಾ ಭಾಂಡಗೆ, ಬಿ.ಎಚ್. ಲದ್ವಾ, ಎಂ.ಎಂ. ಹಿರೇಮಠ, ಸಿದ್ದು ಪಲ್ಲೇದ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಚಂದ್ರು ತಡಸದ, ನಿರ್ಮಲಾ ಕೊಳ್ಳಿ, ಮಂಜುನಾಥ ಮುಳಗುಂದ, ಮುತ್ತು ಮುಶಿಗೇರಿ, ಶಶಿಧರ ದಿಂಡೂರ, ವಿನಾಯಕ ಮಾನ್ವಿ, ನಾಗರಾಜ ತಳವಾರ, ಅಮರನಾಥ ಗಡಗಿ, ವಿದ್ಯಾವತಿ ಗಡಗಿ, ಲಕ್ಷ್ಮೀ ಕಾಕಿ, ವಿಜಯಲಕ್ಷ್ಮೀ ಮಾನ್ವಿ, ಮಂಜುನಾಥ ಶಾಂತಗೇರಿ, ರಾಚಯ್ಯ ಹೊಸಮಠ, ದೇವೇಂದ್ರಪ್ಪ ಹೂಗಾರ, ಗಂಗಾಧ ಮೇಲಗಿರಿ, ಲಕ್ಷ್ಮಣ ದೊಡ್ಮನಿ, ಜಯಶ್ರೀ ಉಗಲಾಟದ, ಶಾರದಾ ಸಜ್ಜನ, ವಂದನಾ ವರ್ಣೇಕರ್, ಕಮಲಾಕ್ಷೀ ಗೊಂದಿ, ಪಾರ್ವತಿ ಪಟ್ಟಣಶೆಟ್ಟಿ, ಸ್ವಾತಿ ಅಕ್ಕಿ, ರೇಖಾ ಬಂಗಾರಶೆಟ್ಟರ, ಯೋಗೇಶ್ವರಿ ಭಾವಿಕಟ್ಟಿ, ಕವಿತಾ ಬಂಗಾರಿ, ಪ್ರೀತಿ ಶಿವಪ್ಪನಮಠ, ಅಕ್ಕಮ್ಮ ವಸ್ತ್ರದ, ರಮೇಶ ಸಜ್ಜಗಾರ, ವಿಶ್ವನಾಥ ಹಳ್ಳಿಕೇರಿ ಇದ್ದರು. ಶಂಕರ ಕಾಕಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಚಿತ್ತರಗಿ ವಂದಿಸಿದರು.