ಧಣಿವರಿಯದೇ ದೇಶದ ಅಭಿವೃದ್ಧಿ, ದೇಶದ ಸುರಕ್ಷತೆಗೆ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಆಡಳಿತವು ಭಾರತದ ಹೆಮ್ಮೆಯನ್ನು ಮರುಸ್ಥಾಪಿಸಿದ ಅವಧಿಯಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಬಣ್ಣಿಸಿದ್ದಾರೆ.
- ಧಣಿವರಿಯದೇ 4399 ದಿನ ಪೂರೈಸಿದ ಪ್ರಧಾನಿ: ಯಶವಂತ ರಾವ್ ಹರ್ಷ । ದೊಡ್ಡಪೇಟೆ ಶ್ರೀ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಧಣಿವರಿಯದೇ ದೇಶದ ಅಭಿವೃದ್ಧಿ, ದೇಶದ ಸುರಕ್ಷತೆಗೆ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಆಡಳಿತವು ಭಾರತದ ಹೆಮ್ಮೆಯನ್ನು ಮರುಸ್ಥಾಪಿಸಿದ ಅವಧಿಯಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಬಣ್ಣಿಸಿದ್ದಾರೆ.
ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ದೊಡ್ಡಪೇಟೆ ಶ್ರೀ ಗಣೇಶ ದೇವಸ್ಥಾನದಲ್ಲಿ ಬುಧವಾರ ನರೇಂದ್ರ ಮೋದಿ 4399 ದಿನಗಳ ಆಡಳಿತ ನೀಡುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದ ಹಿನ್ನೆಲೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ನಂತರ ಅವರು ಮಾತನಾಡಿದರು. ಸುಧೀರ್ಘ ಅವದಿಗೆ ಪ್ರಧಾನಿಯಾಗಿ ಮೋದಿ ಆಡಳಿತ ನಡೆಸಿದ ಹಿನ್ನೆಲೆಯಲ್ಲಿ ವಿಘ್ನ ನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು.ನರೇಂದ್ರ ಮೋದಿ ಪ್ರಧಾನಿಯಾಗಿ 4399 ದಿನಗಳನ್ನು ಪೂರೈಸಿದ್ದು, ಇದರೊಂದಿಗೆ ಆಡಳಿತದ ಐತಿಹಾಸಿಕ ಮೈಲುಗಲ್ಲು ಸ್ಥಾಪಿದ್ದಾರೆ. ಅತಿ ದೀರ್ಘಾವಧಿ ಚುನಾಯಿತ ಪ್ರಧಾನಿಯೆಂಬ ಹೆಗ್ಗಳಿಕೆ ಮೋದಿಯವರ ಪಾಲಾಗಿದೆ. ದೇಶದ ಅಭಿವೃದ್ಧಿ, ಆಂತರಿಕ ಮತ್ತು ಬಾಹ್ಯ ಭದ್ರತೆಗಾಗಿ ಇನ್ನೂ ಹಲವಾರು ವರ್ಷಗಳ ಕಾಲ ಮೋದಿಯವರೇ ದೇಶನ್ನು ಮುನ್ನಡೆಸಬೇಕಾಗಿದೆ ಎಂದು ತಿಳಿಸಿದರು.
ದೇಶದಲ್ಲಿ 26.5.2014ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಸತತ 4399 ದಿನಗಳ ಕಾಲ ಸೇವೆ ಸಲ್ಲಿಸುವ ಮೂಲಕ ಭಾರತದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ ದಾಖಲೆ ಅಳಿಸಿ ಹಾಕಿದ್ದಾರೆ. ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಅತಿ ದೊಡ್ಡ ಅಳತೆಗೋಲು. ನಮ್ರತೆ, ಸಮರ್ಪಣಾ ಭಾವ ಮತ್ತು ಕರ್ತವ್ಯಪ್ರಜ್ಞೆಯಿಂದ ದಣಿವರಿಯದೇ ದುಡಿಯುವ ವ್ಯಕ್ತಿ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ ಎಂದು ಮೋದಿ ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.ದಾಸ್ಯದ ಮನಸ್ಥಿತಿಯಿಂದ ದೇಶವನ್ನು ಮೋದಿ ಆಡಳಿತ ಹೊರತಂದಿದೆ. ಆತ್ಮನಿರ್ಭರ, ಮಹಿಳಾ ಸಬಲೀಕರಣ, ಮೇಕ್ ಇನ್ ಇಂಡಿಯಾ ಹೀಗೆ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಕಟಿಬದ್ಧರಾಗಿ ಶ್ರಮಿಸುತ್ತಿರುವ ಮಹಾನ್ ನಾಯಕ ನರೇಂದ್ರ ಮೋದಿ. ದೇಶವು ಇಡೀ ವಿಶ್ವದಲ್ಲೇ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಸಾಗುತ್ತಿದೆ. ಜಾಗತಿಕ ಶಕ್ತಿಯಾಗಿ ಭಾರತ ಇಂದು ಗಮನ ಸೆಳೆಯುತ್ತಿದ್ದರೆ ಅದಕ್ಕೆ ಮೋದಿ ದಕ್ಷ, ಪ್ರಾಮಾಣಿಕ ನಾಯಕತ್ವ ಕಾರಣ ಎಂದು ಯಶವಂತ ರಾವ್ ತಿಳಿಸಿದರು.
ಪಾಲಿಕೆ ಮಾಜಿ ಸದಸ್ಯರಾದ ಬಿ.ರಮೇಶ ನಾಯ್ಕ, ಶಿವನಗೌಡ ಟಿ. ಪಾಟೀಲ, ಆನೆಕೊಂಡ ಪುಟ್ಟಣ್ಣ, ರಾಕೇಶ ಬಜರಂಗಿ, ಗೋವಿಂದರಾಜ, ಮಾಲತೇಶ, ಕಿಶೋರಕುಮಾರ, ರಾಜು ನೀಲಗುಂದ, ಹರೀಶ, ಹೊನ್ನೂರು ರವಿ, ಎರ್ರಿಸ್ವಾಮಿ, ಟಿಂಕರ್ ಮಂಜಣ್ಣ, ಗುರುಶಾಂತ ಸೋಗಿ, ಎಚ್.ಬಿ.ನವೀನಕುಮಾರ, ಎಚ್.ಎನ್.ಜಗದೀಶ, ಶ್ರೀನಿವಾಸ ಪಿಸಾಳೆ, ಶಂಕರ, ಬಸವರಾಜ, ಕುಮಾರ, ಮಹಿಳಾ ಮೋರ್ಚಾದ ಭಾಗ್ಯ ಪಿಸಾಳೆ, ಪುಷ್ಪಾ ಬಿ. ವಾಲಿ, ಮಂಜುಳಾ ಇಟಗಿ ಇತರರು ಇದ್ದರು.- - -
(ಬಾಕ್ಸ್) * ಜಾಗತಿಕ ಬಿಕ್ಕಟ್ಟಿನಿಂದ ದೇಶ ರಕ್ಷಿಸುವ ಶಕ್ತಿ ಮೋದಿಗಿದೆ: ಶಿವಕುಮಾರದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಮಾತನಾಡಿ, ದೇಶ ಮೊದಲು ಎಂಬ ತತ್ವದಡಿ ಮುನ್ನಡೆದಿರುವ, ದಣಿವರಿಯದ ಕರ್ಮಯೋಗಿ ಮೋದಿ. ಆತ್ಮನಿರ್ಭರ, ವಿಕಸಿತ ಭಾರತ ಆಗುವಲ್ಲಿ ನರೇಂದ್ರ ಮೋದಿ ಅವಶ್ಯಕತೆ ಬಹಳ ಇದೆ. ಜಾಗತಿಕ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ತೊಂದರೆ ಆಗದಂತೆ ಮುನ್ನಡೆಸುವ ಶಕ್ತಿ ಮೋದಿಯವರಿಗೆ ಮಾತ್ರ ಇದೆ. ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ಮೋದಿ ದೇಶ ಕಂಡ ಅಪ್ರತಿಮ ನಾಯಕರಾಗಿದ್ದಾರೆ ಎಂದು ಬಣ್ಣಿಸಿದರು. ಸುದೀರ್ಘ ರಾಜಕೀಯ ಜೀವನದಲ್ಲಿ ಭಾರತದ ಪ್ರಧಾನಿಯಾಗಿ 12 ವರ್ಷ ಪೂರೈಸಿದ್ದಾರೆ. ಜನರ ಪರ ರಾಜಕಾರಣ ಮಾಡಿ ಜನರ ಹಿತಕ್ಕಾಗಿ ದಿನಕ್ಕೆ 18 ತಾಸು ಕೆಲಸ ಮಾಡಿದ್ದಾರೆ. ನಿರಂತರ 3ನೇ ಸಲ ಪ್ರಧಾನಿಯಗಿದ್ದಾರೆ. ಮೋದಿ ಮಾಡಿರುವ ಹಲವಾರು ಯೋಜನೆಗಳು ಭಾರತವನ್ನು ವಿಶ್ವದಲ್ಲಿಯೇ ಮೂರನೇ ಆರ್ಥಿಕ ಶಕ್ತಿಯಾಗಿ ತೆಗೆದುಕೊಂಡು ಹೋಗಿದೆ. ಅತ್ಯಂತ ಕೆಳ ವರ್ಗದವರಿಗೂ ಅದರ ಲಾಭ ತಲುಪುವಂತೆ ಮಾಡಿದ್ದಾರೆ. ಹಾಗಾಗಿಯೇ ಪ್ರಥಮವಾಗಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಕಾರ್ಯವಾಗಿದೆ ಎಂದು ಹೇಳಿದರು.- - -
-10ಕೆಡಿವಿಜಿ1, 2.ಜೆಪಿಜಿ:ದಾವಣಗೆರೆ ದೊಡ್ಡಪೇಟೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ 4399 ದಿನಗಳ ಹೊಸ ಮೈಲುಗಲ್ಲನ್ನು ಸ್ಥಾಪಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.