ಮೋದಿ ಅಘೋಷಿತ ತುರ್ತು ಪರಿಸ್ಥಿತಿ ಅಪಾಯಕಾರಿ: ಬಸವರಾಜ ಹೇಳಿಕೆ

| Published : Jun 29 2024, 12:36 AM IST

ಮೋದಿ ಅಘೋಷಿತ ತುರ್ತು ಪರಿಸ್ಥಿತಿ ಅಪಾಯಕಾರಿ: ಬಸವರಾಜ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಘೋಷಿತ ತುರ್ತು ಪರಿಸ್ಥಿತಿ ಬಡವರ ಪಾಲಿನ ಸುವರ್ಣ ಕಾಲವಾಗಿದ್ದರೆ, ಈಗಿನ ಬಿಜೆಪಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವಧಿ ಅಘೋಷಿತ ತುರ್ತು ಪರಿಸ್ಥಿತಿ ಅಪಾಯಕಾರಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಹೇಳಿದ್ದಾರೆ.

ದಾವಣಗೆರೆ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಘೋಷಿತ ತುರ್ತು ಪರಿಸ್ಥಿತಿ ಬಡವರ ಪಾಲಿನ ಸುವರ್ಣ ಕಾಲವಾಗಿದ್ದರೆ, ಈಗಿನ ಬಿಜೆಪಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವಧಿ ಅಘೋಷಿತ ತುರ್ತು ಪರಿಸ್ಥಿತಿ ಅಪಾಯಕಾರಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಹೇಳಿದ್ದಾರೆ.

ದೇಶದಲ್ಲಿ 25.6.1975ಕ್ಕೆ ತುರ್ತು ಪರಿಸ್ಥಿತಿಯನ್ನು ಇಂದಿರಾ ಗಾಂಧಿ ಜಾರಿಗೊಳಿಸಿ, 21.3.1977ಕ್ಕೆ ಮುಕ್ತಾಯಗೊಳಿಸಿದ್ದರು. ಇಂದಿರಾಗಾಂಧಿ ಜಾರಿಗೆ ತಂದ ತುರ್ತು ಪರಿಸ್ಥಿತಿಯಿಂದ ಇಂದಿರಾ ರಾಜಕೀಯ ವಿರೋಧಿಗಳಿಗೆ ತೊಂದರೆಯಾಗಿತ್ತು. ಆದರೆ, ದೇಶದ ಜನ ಸಾಮಾನ್ಯರಿಗೆ ಯಾವುದೇ ತೊಂದರೆಯಾಗಿರಲಿಲ್ಲ ಎಂದಿದ್ದಾರೆ.

ಬಡವರು ಸಾಲ ಮಾಡಿ, ತಮ್ಮ ಆಸ್ತಿ, ಪಾಸ್ತಿಗಳನ್ನು ಲೇವಾದೇವಿಗಾರರಿಗೆ ಸಾಲಕ್ಕಾಗಿ ಅಡ ಇಟ್ಟಿದ್ದರು. ತುರ್ತು ಪರಿಸ್ಥಿತಿ ಜಾರಿ ಪರಿಣಾಮ ವಸ್ತುಗಳನ್ನು ಉಚಿತವಾಗಿ ವಾಪಾಸ್ ಪಡೆದರು. 20 ಅಂಖಸಗಳ ಕಾರ್ಯಕ್ರಮಗಳ ಪರಿಣಾಮಕಾರಿಯಾಗಿ ಜಾರಿಗೆ ಬಂದಿತು. ದೇಶದ ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆ, ರಫ್ತು, ವಿದೇಶಿ ಹೂಡಿಕೆಯಲ್ಲಿ ಹೆಚ್ಚಳ ಕಂಡು ಬಂದಿತು. ಹಿಂದು-ಮುಸ್ಲಿಂ ಕೋಮು ಸೌಹಾರ್ದತೆಗೆ ಒತ್ತು ನೀಡಿದ್ದರು ಎಂದರು.

ತುರ್ತು ಪರಿಸ್ಥಿತಿ ಹೇರಿದ್ದರಿಂದ ಇಂದಿರಾ ಗಾಂಧಿ ಅಂದು ಅಧಿಕಾರ ಕಳೆದುಕೊಂಡು, ಬೆಲೆ ತೆತ್ತಿದ್ದರು. ಆದರೆ, 3ನೇ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದಾರೆ. ಕಳೆದೊಂದು ದಶಕದಿಂದ ಅದು ಹೆಚ್ಚಾಗುತ್ತಲೇ ಇದೆ. ಆದರೆ, ಮೋದಿಗೆ ಇದಕ್ಕಾಗಿ ಜನರು ಸೂಕ್ತ ಶಿಕ್ಷೆ ನೀಡಲಿಲ್ಲ. ಮೊನ್ನೆ ಲೋಕಸಭೆ ಚುನಾವಣೆಯಲ್ಲಿ ಕೇವಲ 240 ಕ್ಷೇತ್ರದಲ್ಲಷ್ಟೇ ಗೆಲ್ಲಿಸಿ, ಸ್ವಲ್ಪ ಮಟ್ಟಿಗೆ ಎಚ್ಚರಿಸಿದ್ದಾರೆ. ಇಂದಿರಾರ ಘೋಷಿತ ತುರ್ತು ಪರಿಸ್ಥಿತಿಗಿಂತ ಮೋದಿಯವರ ಅಘೋಷಿತ ತುರ್ತು ಪರಿಸ್ಥಿತಿ ದೇಶಕ್ಕೆ ಅತ್ಯಂತ ಅಪಾಯಕಾರಿ ಎಂದು ಡಿ.ಬಸವರಾಜ ಆತಂಕ ವ್ಯಕ್ತಪಡಿಸಿದ್ದಾರೆ.

- - - (-ಫೋಟೋ: ಡಿ.ಬಸವರಾಜ)