ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ: ಲೋಕೇಶ್ವರ

| Published : Sep 18 2025, 01:10 AM IST

ಸಾರಾಂಶ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಬಿಜೆಪಿ ಮುಖಂಡ ಲೋಕೇಶ್ವರ ನೇತೃತ್ವದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಹಾಲು ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಬಿಜೆಪಿ ಮುಖಂಡ ಲೋಕೇಶ್ವರ ನೇತೃತ್ವದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಹಾಲು ಹಾಗೂ ಹಣ್ಣುಗಳನ್ನು ವಿತರಿಸಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಲೋಕೇಶ್ವರ, ಮೂರನೇ ಬಾರಿ ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಭಾರತದ ಹಿರಿಮೆಯನ್ನು ಪ್ರಪಂಚದ ಪ್ರತಿಯೊಂದು ಭಾಗಕ್ಕೂ ಪಸರಿಸಿರುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮ ದಿನಾಚರಣೆ ಪ್ರಯುಕ್ತ ಮೋದಿ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ನರೇಂದ್ರ ಮೋದಿ ನಾಲ್ಕನೇ ಬಾರಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಬೇಕು. ಭಾರತವನ್ನು ವಿಶ್ವಗುರುವನ್ನಾಗಿಸಲು ಅವರಿಂದ ಮಾತ್ರ ಸಾಧ್ಯ. ದಿನದಲ್ಲಿ 22 ಗಂಟೆಗಳ ಕೆಲಸ ಕೇವಲ ಎರಡು ಗಂಟೆ ಮಾತ್ರ ನಿದ್ದೆ ಮಾಡುವ ಮೂಲಕ ದೇಶದ ಹಿತಕ್ಕಾಗಿ ಶ್ರಮಿಸುತ್ತಿರುವ ಮೋದಿಯವರಿಗೆ ದೇವರು ಮತ್ತಷ್ಟು ಆರೋಗ್ಯ, ಆಯುಸ್ಸು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸೊಪ್ಪುಗಣೇಶ್, ರಾಮ್‌ಮೋಹನ್, ಭಾರತಿ ಮಂಜುನಾಥ್, ಶಶಿಕಿರಣ್, ರೋಟರಿ ಅಧ್ಯಕ್ಷೆ ವನಿತಾಪ್ರಸನ್ನ, ಮುಖಂಡರಾದ ತರಕಾರಿ ಹರೀಶ್, ಮಡೇನೂರು ವಿನಯ್, ರೇಣು, ಸಾರ್ಥವಳ್ಳಿ ಶಿವಕುಮಾರ್, ರೇಣುಪಟೇಲ್, ಹರೀಶ್, ಫೋಟೋ ಲೋಕೇಶ್, ತಿಮ್ಮೇಗೌಡ ಮತ್ತಿತರರಿದ್ದರು.