ಸನಾತನ ಧರ್ಮದ ಏಳ್ಗೆಗೆ ಮೋದಿ ಗೆಲ್ಲಿಸಿ

| Published : Apr 20 2024, 01:09 AM IST

ಸನಾತನ ಧರ್ಮದ ಏಳ್ಗೆಗೆ ಮೋದಿ ಗೆಲ್ಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಸನಾತನ ಧರ್ಮ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿಜಿ ಪ್ರಧಾನಮಂತ್ರಿ ಮಾಡಲು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸಿ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.

ಕನ್ನಡಪ್ರಭ ವಾರ್ತೆ ಚಡಚಣ

ದೇಶದಲ್ಲಿ ಸನಾತನ ಧರ್ಮ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿಜಿ ಪ್ರಧಾನಮಂತ್ರಿ ಮಾಡಲು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸಿ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರದ 50 ವರ್ಷದ ದುರಾಡಳಿತದಲ್ಲಿ ಮಾಡಿರುವ ಅಭಿವೃದ್ಧಿ ಶೂನ್ಯ. ಕೇವಲ ಮೋದಿ ಅವರ ಬಿಜೆಪಿ ಸರ್ಕಾರ ಕೇವಲ 10 ವರ್ಷದಲ್ಲಿ ವಿಶ್ವವೇ ಕಣ್ಣು ತೆರೆದು ನೋಡುವಂತಾಗಿದೆ. 50 ವರ್ಷದಲ್ಲಿದ್ದ ಐಐಟಿ, ವಿಮಾನ ನಿಲ್ದಾಣಗಳು, ವೈದ್ಯಕೀಯ ಕಾಲೇಜು, ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಿದೆ. ತ್ರಿವಳಿ ತಲಾಕ್‌, ಬೇಟಿ ಪಡಾವೋ, ಬೇಟಿ ಬಚಾವೋ, ಹರ್‌ಘರ್‌ ಜಲಜೀವನ ಯೋಜನೆ, ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಡಿಯಲ್ಲಿ ಪ್ರತಿ ರೈತರಿಗೆ ಪ್ರತಿವರ್ಷ 6 ಸಾವಿರ ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ. ಸರ್ವ ಸಮುದಾಯಕ್ಕೂ ಮೋದಿಯ ಯೋಜನೆಗಳು ಅವರ ಮನೆ ಹಾಗೂ ಮನಗಳಿಗೆ ತಲುಪಿದ್ದರಿಂದ ಈ ಬಾರಿ ದೇಶದಲ್ಲಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುವುದರ ಜೊತೆಗೆ ಮೋದಿಜಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಸಂಸದ ರಮೇಶ ಜಿಗಜಿಣಗಿ ಅವರು ಒಂದೂವರೆ ಲಕ್ಷ ಕೋಟಿ ಅನುದಾನ ತರುವ ಮೂಲಕ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಕೂಡಗಿ ಎನ್‌ಟಿಪಿಸಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಪೊಳ್ಳು ಭರವಸೆ ಹೆಸರಲ್ಲಿ ರಾಜ್ಯ ಲೂಟಿ ಹೊಡೆಯುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಂತಹ ಕೆಟ್ಟ ಸರ್ಕಾರ ಬೇಕಾ ಎಂದು ಕೇಳಿದ ಅವರು, ಕಾರ್ಯಕರ್ತರು ಮೋದಿಜಿ ಅವರ ಜನಪರ ಯೋಜನೆಗಳು ಮನೆ ಮನೆಗೆ ತಲುಪಿಸಿ ಜಿಗಜಿಣಗಿ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.

ನಾಗಠಾಣ ಮತಕ್ಷೇತ್ರದ ಚುನಾವಣಾ ಸಂಚಾಲಕ ಚಿದಾನಂದ ಚಲವಾದಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಂವಿದಾನ ಬದಲಾವಣೆ ಮಾಡುತ್ತಾರೆ ಎಂಬುದು ಶುದ್ಧ ಸುಳ್ಳು. ಕಾಂಗ್ರೆಸಿಗರ ಸೋಲು ಖಚಿತ ಎಂಬ ಸಂದೇಶದಿಂದ ಹತಾಶರಾಗಿ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸುವುದರಿಂದ ಹಿಡಿದು ಇಲ್ಲಿಯವರೆಗೆ ಕಾಂಗ್ರೆಸ್ ಅವಮಾನಿಸುತ್ತಾ ಬಂದಿದೆ. ಅವರು ಮೃತರಾದ ಬಳಿಕ ಅವರ ಶವಸಂಸ್ಕಾರಕ್ಕೂ ಒಂದಿಂಚು ನಿವೇಶನ ನೀಡದೇ ಅವಮಾನಿಸಿದ್ದಾರೆ. ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಡಾ.ಬಿ.ಆರ್ ಅಂಬೇಡ್ಕರ್‌ ಅವರ ಸಾಧನೆಗಳ ಮಟ್ಟಿಲುಗಳುನ್ನು ಗುರುತಿಸಿ ಆ ಸ್ಥಳಗಳನ್ನು ಪ್ರೇಕ್ಷಣೀಯ ಸ್ಥಳಗಳನ್ನಾಗಿ ಮೇಲ್ದೇರ್ಜೆಗೇರಿಸಿದ ಎಂದು ಹೇಳಿದರು.

ಮುಖಂಡ ಶಿವಾನಂದ ಮಕಣಾಪುರ ಮಾತನಾಡಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭೀಮುಗೌಡ ಬಿರಾದಾರ, ಚಡಚಣ ಮಂಡಲ ಅಧ್ಯಕ್ಷ ಕಾಂತೂಗೌಡ ಪಾಟೀಲ, ನಾಗಠಾಣ ಮಂಡಲ ಅಧ್ಯಕ್ಷ ಸಿದಗೊಂಡ ಬಿರಾದಾರ, ಮುಖಂಡರಾದ ಬಾಪೂರಾಯ ಪಾಟೀಲ, ಎಚ್.ಆರ್ ಉಟಗಿ, ಮಹಾದೇವ ಯಂಕಂಚಿ, ಶ್ರೀಶೈಲ ಅಂಜುಟಗಿ, ಸಿದ್ದು ಬಗಲಿ, ರಮೇಶ ಜಿತ್ತಿ, ಗಡದೇವರ ಮಠ, ಪ್ರಮೋದ ಮಠ, ಮಲ್ಲು ದೋತ್ರೆ, ಕೇಡಾರಿ ಸಾಳುಂಖೆ, ರಾಹುಲ್‌ ಲೋಖಂಡೆ, ಅನಿಲ ಸಾಳುಂಖೆ, ವಿಕಾಸ ಮಲ್ಲಾಡಿ, ಮನೋಜ ಪಾಟೀಲ, ಕೇದಾರಿ ವಾಳಿಖಿಂಡಿ, ಸಂಗಮೆಶ ಬಡಗೇರ ಸೇರಿದಂತೆ ಇತರರು ಇದ್ದರು.