ಸಾರಾಂಶ
ಮೋಹಿತ್ 50 ಮೀಟರ್ ಬಟರ್‌ಫ್ಲೈ ಈಜಿನಲ್ಲಿ ಬೆಳ್ಳಿ ಪದಕ, 50 ಮೀಟರ್ ಬ್ಯಾಕ್‌ಸ್ಟ್ರೋಕ್ ಈಜಿನಲ್ಲಿ ಮತ್ತೊಂದು ಬೆಳ್ಳಿ ಪದಕ ಹಾಗೂ 4×50 ಮೀಟರ್ ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಬಂಗಾರ ಪದಕವನ್ನು ಗೆದ್ದು ಶಾಲೆಗೆ ಗೌರವ ತಂದಿದ್ದಾರೆ.
ಮಂಡ್ಯ: ನಗರದ ಕಲ್ಲಹಳ್ಳಿ ಬಡಾವಣೆಯ ಮಾಂಡವ್ಯ ಹಿರಿಯ ಪ್ರಾಥಮಿಕ ಶಾಲೆ (ಆಂಗ್ಲ ಮಾಧ್ಯಮ)ಯ ಐದನೇ ತರಗತಿ ವಿದ್ಯಾರ್ಥಿ ಮೋಹಿತ್ ಪಿ.ಶೆಟ್ಟಿ ಜೂನ್ 29 ರಂದು ಮೈಸೂರು ವಿಜಯನಗರದ ಮಾರ್ಲಿನ್ ಅಕ್ವಾಟಿಕ್ ಸೆಂಟರ್‌ನಲ್ಲಿ ನಡೆದ ರಾಜ್ಯಮಟ್ಟದ ನಾನ್ ಮೆಡಲಿಸ್ಟ್ ಇನ್‌ವಿಟೇಶನಲ್ ಈಜು ಸ್ಪರ್ಧೆಯಲ್ಲಿ ಶ್ಲಾಘನೀಯ ಸಾಧನೆ ಮಾಡಿದ್ದಾರೆ. ಮೋಹಿತ್ 50 ಮೀಟರ್ ಬಟರ್‌ಫ್ಲೈ ಈಜಿನಲ್ಲಿ ಬೆಳ್ಳಿ ಪದಕ, 50 ಮೀಟರ್ ಬ್ಯಾಕ್‌ಸ್ಟ್ರೋಕ್ ಈಜಿನಲ್ಲಿ ಮತ್ತೊಂದು ಬೆಳ್ಳಿ ಪದಕ ಹಾಗೂ 4×50 ಮೀಟರ್ ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಬಂಗಾರ ಪದಕವನ್ನು ಗೆದ್ದು ಶಾಲೆಗೆ ಗೌರವ ತಂದಿದ್ದಾರೆ. ಈ ಸಾಧನೆ ಕುರಿತು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಮೀರಾ ಶಿವಲಿಂಗಯ್ಯ ಅವರು ಮೋಹಿತ್‌ರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯ, ಸಹ ಶಿಕ್ಷಕಿ ಸ್ಟೆಲ್ಲಾ ಮತ್ತು ಇತರರು ಉಪಸ್ಥಿತರಿದ್ದು, ವಿದ್ಯಾರ್ಥಿಯ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು.