ಸಾರಾಂಶ
80 ಮಂದಿಯ ರಕ್ತ ಪರೀಕ್ಷೆ । 2 ಪಾಜಿಟಿವ್ ಪ್ರಕರಣಗಳು ಪತ್ತೆ । ಕಳೆದ ವರ್ಷ 4 ಮಂದಿ ಮೃತಪಟ್ಟಿದ್ದರು,
ಆರ್.ತಾರಾನಾಥ್ ಅಟೋಕರ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕಾಫಿನಾಡಿನಲ್ಲಿ ಮಂಗನಕಾಯಿಲೆ (ಕೆಎಫ್‌ಡಿ) ಮಹಾಮಾರಿ ಈ ವರ್ಷವೂ ರೀ ಎಂಟ್ರಿ ಕೊಟ್ಟಿದೆ.ಹಿಂದಿನ ಒಂದು ದಶಕಗಳ ಕಾಲ ನೆರೆಯ ಶಿವಮೊಗ್ಗ ಜಿಲ್ಲೆಯಲ್ಲಿ ರುದ್ರಾ ನರ್ತನ ಮಾಡುತ್ತಿದ್ದ ಕೆಎಫ್‌ಡಿ ಚಿಕ್ಕಮಗಳೂರು ಜಿಲ್ಲೆಯತ್ತ ಮುಖ ಮಾಡಿರಲಿಲ್ಲ. ಆದರೆ, ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಆತಂಕ ಮೂಡಿಸಿತ್ತು. 132 ಮಂದಿಯಲ್ಲಿ ಮಂಗನ ಕಾಯಿಲೆಯ ಸೋಂಕಿರುವುದು ಪತ್ತೆಯಾಗಿತ್ತು. 4 ಮಂದಿ ಮೃತಪಟ್ಟಿದ್ದರು.
ಇದೀಗ ವರ್ಷದ ಆರಂಭದಲ್ಲಿ ಮಂಗನಕಾಯಿಲೆ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ವಾರ ಖಾಂಡ್ಯ ಹೋಬಳಿಯ ಜೇನುಗದ್ದೆ ಬಳಿ ಪಾಜಿಟಿವ್ ಪ್ರಕರಣ ಪತ್ತೆಯಾಗಿದ್ದರೆ, ಇದೀಗ ಎನ್.ಆರ್.ಪುರ ತಾಲೂಕಿನ ಮೇಲ್ಪಾಲ್ ಗ್ರಾಮದಲ್ಲಿ ಪತ್ತೆಯಾಗಿದೆ. ಹೀಗಾಗಿ ದಿನೇ ದಿನೇ ಆತಂಕ ಹೆಚ್ಚು ಮಾಡುತ್ತಿದೆ.ಉಲ್ಬಣಕ್ಕೆ ಸಕಾಲ:ಮಂಗನ ಕಾಯಿಲೆ ಪ್ರಕರಣಗಳ ಉಲ್ಬಣಕ್ಕೆ ಇದೊಂದು ಸಕಾಲ. ಜನವರಿ ಮಾಹೆಯಿಂದ ಮೇ ತಿಂಗಳವರೆಗೆ ಕೆಎಫ್‌ಡಿ ಪಾಜಿಟಿವ್ ಪ್ರಕರಣಗಳು ಹೆಚ್ಚುತ್ತಾ ಹೋಗುತ್ತದೆ. ಕಾರಣ, ಈ ಅವಧಿಯಲ್ಲಿ ಮಳೆ ಬರುವುದಿಲ್ಲ. ಮಳೆ ಬಂದರೆ ಈ ಸಂಖ್ಯೆ ಇಳಿಮುಖವಾಗುತ್ತದೆ. ಮಂಗನಕಾಯಿಲೆಗೆ ಕಾರಣವಾಗಿರುವ ಉಣ್ಣೆಗಳ ಸಂಖ್ಯೆ ಕ್ಷೀಣಿಸುತ್ತದೆ.
ಅದ್ದರಿಂದ ಆರೋಗ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.ಹಾಟ್ ಸ್ಪಾಟ್ ಗುರುತು:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಎಫ್‌ಡಿ ಮೊದಲ ಪ್ರಕರಣ ಪತ್ತೆಯಾಗುತ್ತಿದ್ದಂತೆ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಹಾಟ್ ಸ್ಪಾಟ್ ಗಳನ್ನು ಗುರುತಿಸಿದೆ. ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕಿನ ಕೆಲಭಾಗಗಳು ಹಾಗೂ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಭಾಗವನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.ಕಳೆದ ವರ್ಷ ಜಿಲ್ಲೆಯಲ್ಲಿ ಎಲ್ಲೆಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿತ್ತೋ ಆ ಗ್ರಾಮಗಳು ಹಾಗೂ ಆ ಗ್ರಾಮಗಳಿಗೆ ಹೊಂದಿ ಕೊಂಡತೆ ಇರುವ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗಳಿಗೆ ತೆರಳಿ ಕೆಎಫ್‌ಡಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆ ಗುರುತಿಸಿರುವ ಹಾಟ್ ಸ್ಪಾಟ್ ವ್ಯಾಪ್ತಿಯಲ್ಲಿ ಯಾರಿಗಾದರೂ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಅವರನ್ನು ಕೆಎಫ್‌ಡಿ ತಪಾಸಣೆ ಗೊಳಪಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಕೆಎಫ್‌ಡಿಯನ್ನು ಸಮರ್ಥವಾಗಿ ಎದುರಿಸಲು ಆರೋಗ್ಯ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಂಡಿದೆ.----
ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು- ಕಾಡಿಗೆ ಹೋಗುವಾಗ ಸುರಕ್ಷತೆಗಾಗಿ ಮೈ ತುಂಬಾ ಬಟ್ಟೆ ಧರಿಸಬೇಕು- ಕಾಡು, ತೋಟಗಳಿಗೆ ಕೆಲಸಕ್ಕೆ ಹೋಗುವಾಗ ದಿಪಾ (ಡಿಇಪಿಎ) ಉಣ್ಣೇ ವಿಕರ್ಷಕ ತೈಲ ಲೇಪಿಸಿಕೊಳ್ಳಬೇಕು- ಕಾಡು, ತೋಟಗಳಿಂದ ಬಂದ ನಂತರ ಬಿಸಿ ನೀರು ಸ್ನಾನ ಮಾಡಬೇಕು. ಧರಿಸಿದ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ನೆನೆಸಿ ನಂತರ ಸೋಪು ಬಳಸಿ ತೊಳೆಯಬೇಕು- ಕಾಡಿನಿಂದ ಮನೆಗಳಿಗೆ ಉಣ್ಣೆಗಳು ಬರದಂತೆ ತಡೆಗಟ್ಟಲು ಸುರಕ್ಷತಾ ಕ್ರಮಗಳನ್ನು ವಹಿಸಿ ದನಕರುಗಳ ಮೈ ಮೇಲಿಂದ ಉಣ್ಣೆಗಳನ್ನು ತೆಗೆಯಬೇಕು. ಉಣ್ಣೆ ನಿವಾರಕ ತೈಲ ಲೇಪಿಸಬೇಕು- ಉಣ್ಣೆ ನಿವಾರಕ ಔಷಧವನ್ನು ದನದ ಕೊಟ್ಟಿಗೆಯ ಒಳಗೆ ಮತ್ತು ಸುತ್ತಮುತ್ತಲೂ ಸಿಂಪಡಿಬೇಕು---ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಉಣ್ಣೆಗಳನ್ನು ಸಂಗ್ರಹಿಸಲಾಗುವುದು. ಮಂಗ ಸತ್ತಿರುವುದು ಬೆಳಕಿಗೆ ಬಂದರೆ ಅದರ ಕೆಲವು ಅಂಗಾಂಗಳನ್ನು ತೆಗೆದು ವೈರಾಣು ಪರೀಕ್ಷೆ ಮಾಡಲಾಗುವುದು. ಆದರೆ, ಈವರೆಗೆ ಜಿಲ್ಲೆಯ ಯಾವುದೇ ಭಾಗದಲ್ಲೂ ಮಂಗ ಸತ್ತಿಲ್ಲ. ಈ ವರ್ಷದಲ್ಲಿ ಈವರೆಗೆ 80 ಮಂದಿಗಳ ರಕ್ತ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ ಇಬ್ಬರಲ್ಲಿ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ.
ಈವರೆಗೆ 50 ಸಾವಿರ ಬಾಟಲಿ ಆಯಿಲ್ (ದಿಪಾ) ಹಂಚಲಾಗಿದೆ. ನಮ್ಮಲ್ಲಿ 25 ಸಾವಿರ ಬಾಟಲಿ ಆಯಿಲ್ ಸ್ಟಾಕ್ ಇದೆ. ಇನ್ನು 30 ಸಾವಿರ ಬಾಟಲಿ ಆಯಿಲ್ ತರಿಸಿಕೊಳ್ಳಲಾಗುವುದು.ಡಾ. ಕೆ. ಭರತ್ ಕುಮಾರ್ಜಿಲ್ಲಾ ವಿಚಕ್ಷಣಾಧಿಕಾರಿಪೋಟೋ ಫೈಲ್ ನೇಮ್ 19 ಕೆಸಿಕೆಎಂ 1
--ಪೋಟೋ ಫೈಲ್ ನೇಮ್ 19 ಕೆಸಿಕೆಎಂ 2ಮಂಗನ ಕಾಯಿಲೆ ಹರಡುವಿಕೆಗೆ ಕಾರಣವಾಗಿರುವ ಉಣ್ಣೆಗಳ ನಿಯಂತ್ರಣಕ್ಕೆ ಬಳಸುವ ದಿಪಾ ಆಯಿಲ್.