ಕೋಟಿಪುರದಲ್ಲಿ ಮಂಗನ ಶವ ಪತ್ತೆ: ಮೆರವಣಿಗೆ ನಡೆಸಿ, ಹೂಳಿದ ಗ್ರಾಮಸ್ಥರು!

| Published : Jan 14 2024, 01:32 AM IST

ಕೋಟಿಪುರದಲ್ಲಿ ಮಂಗನ ಶವ ಪತ್ತೆ: ಮೆರವಣಿಗೆ ನಡೆಸಿ, ಹೂಳಿದ ಗ್ರಾಮಸ್ಥರು!
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ತಾಲೂಕಿನ ಕೋಟಿಪುರಲ್ಲಿ ಶನಿವಾರ ಮಂಗವೊಂದು ಮೃತಪಟ್ಟ ಹಿನ್ನೆಲೆ ಪೂಜಿಸಿ, ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಿ, ವಿಧಿವಿಧಾನದಂತೆ ನೆಲದಲ್ಲಿ ಹೂಳಿ, ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ, ಈ ಬಗ್ಗೆ ಅರಣ್ಯ ಇಲಾಖೆ, ಪಶುವೈದ್ಯ ಇಲಾಖೆಗೆ ಮಾಹಿತಿಯೇ ನೀಡಿಲ್ಲ. ಕೆಲ ಗ್ರಾಮಗಳಲ್ಲಿ ಮಂಗನಕಾಯಿಲೆ ಹಾವಳಿ ಇದ್ದಾಗ್ಯೂ, ಕೋತಿಯ ಶವಪರೀಕ್ಷೆ ನಡೆಸಲು ಇಲಾಖೆ ಗಮನಕ್ಕೆ ತಾರದೇ ಅಂತ್ಯಸಂಸ್ಕಾರ ನಡೆಸಲಾಗಿದೆ.

ಸೊರಬ: ತಾಲೂಕಿನ ಕೋಟಿಪುರ ಗ್ರಾಮದಲ್ಲಿ ಮಂಗ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿರಬಹುದು ಎಂದು ಊಹಿಸಲಾಗಿದೆ. ಶನಿವಾರ ಬೆಳಗ್ಗೆ ಕೋಟಿಪುರದ ಜಡೆ ಗ್ರಾಮ ರಸ್ತೆಯ ಶ್ರೀ ರೇಣುಕಾ ಫ್ಯೂಯಲ್ಸ್ ಸಮೀಪ ಮಂಗನ ಕಳೆಬರಹವನ್ನು ಕುಬಟೂರು ಗ್ರಾಮದ ನಾಗರಾಜ ಕಂಡು, ಸಾರ್ವಜನಿಕರಿಗೆ ಮಾಹಿತಿ ತಿಳಿಸಿದ್ದಾರೆ. ಅನಂತರ ಗ್ರಾಮಸ್ಥರೆಲ್ಲ ಒಟ್ಟುಗೂಡಿ ಕೋತಿಯ ಮೃತದೇಹಕ್ಕೆ ಪೂಜೆ ನೆರವೇರಿಸಿ, ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಿದ್ದಾರೆ. ಬಳಿಕ ಗ್ರಾಮದಲ್ಲಿ ಹೂತುಹಾಕುವ ಮೂಲಕ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಜಡೆ ಗ್ರಾಮ ರಸ್ತೆಯಲ್ಲಿ ಕಂಡುಬಂದ ಮಂಗನ ಶವವನ್ನು ಗ್ರಾಮಸ್ಥರು ಮೆರವಣಿಗೆ ಮಾಡಿ, ಹೂಳಿದ್ದಾರೆ. ಈ ಬಗ್ಗೆ ರಕ್ಷಣಾ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿಯೇ ಇಲ್ಲ. ಮಂಗನ ಕಾಯಿಲೆ ಹಾವಳಿ ಹಿನ್ನೆಲೆ ಮಂಗನ ಸಾವು, ಮೆರವಣಿಗೆ ಮಾಹಿತಿ ಬಗ್ಗೆ ಮಾಹಿತಿ ನೀಡುವಂತೆ ಕನ್ನಡಪ್ರಭ ಆನವಟ್ಟಿ ಆರ್‌ಎಫ್‌ಒಗೆ ಕೇಳಿದೆ. ಆಗ ಈ ಬಗ್ಗೆ ಗೊತ್ತಿಲ್ಲ ಎನ್ನುವ ಉತ್ತರ ಇಲಾಖೆಯವರು ನೀಡಿದರು.

ಮಲೆನಾಡು ಭಾಗದ ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ತಾಲೂಕಿನಲ್ಲಿ ಬೇಸಿಗೆ ದಿನಗಳಲ್ಲಿ ಕಾಣಿಸುವ ಕ್ಯಾಸನೂರು ಮಂಗನ ಕಾಯಿಲೆಯಿಂದ ಮಂಗ ಮರಣ ಹೊಂದಿರಬಹುದೇ ಎನ್ನುವ ಅನುಮಾನ ಸಹ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ತಕ್ಷಣ ಎಚ್ಚೆತ್ತು ಕಾರ್ಯೋಮುಖರಾಗಿ ಹೂತಿರುವ ಮಂಗನ ಕಳೆಬರ ಪರೀಕ್ಷೆಗೊಳಪಡಿಸಬೇಕು ಎಂದು ಪರಿಸರಪ್ರೇಮಿ ಇ.ಎಚ್. ಮಂಜುನಾಥ ಒತ್ತಾಯಿಸಿದ್ದಾರೆ.

- - - ಟಾಪ್‌ ಕೋಟ್

ಶನಿವಾರ ಬೆಳಗ್ಗೆ ಮಂಗ ಮರಣ ಹೊಂದಿರುವ ಬಗ್ಗೆ ತಮಗೆ ಮಾಹಿತಿ ಲಭ್ಯವಿಲ್ಲ. ಸಂಜೆ ಸಾರ್ವಜನಿಕರಿಂದ ಮಾಹಿತಿ ಪಡೆದಿದ್ದು, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಲ್ಲಿ ಕರೆಂಟ್‌ ಹೊಡೆದು ಮಂಗ ಮೃತಪಟ್ಟ ಘಟನೆ ಸಂಭವಿಸಿರಬಹುದು. ಈ ಬಗ್ಗೆ ತನಿಖೆ ನಡೆಸಲಾಗುವುದು. ಹೂತು ಹಾಕಿರುವ ಮೃತದೇಹವನ್ನು ಹೊರತೆಗೆದು ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು

- ಪರಶುರಾಮ, ಆರ್‌ಎಫ್‌ಒ, ಆನವಟ್ಟಿ

- - - -13ಕೆಪಿಸೊರಬ04: