ಮಂಕಿ ಪಟ್ಟಣ ಪಂಚಾಯಿತಿಗೆ ಮೊದಲ ಬಾರಿ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬಿಜೆಪಿ ಅಧಿಕಾರದ ಗದ್ದುಗೆ ಏರಲು ಯಶಸ್ವಿಯಾಗಿದೆ.

೨೦ ಸ್ಥಾನಗಳಲ್ಲಿ ಬಿಜೆಪಿಗೆ ೧೨, 2 ಅವಿರೋಧದೊಂದಿಗೆ ಕಾಂಗ್ರೆಸ್ಸಿಗೆ ೮ ಸ್ಥಾನ

ಕನ್ನಡಪ್ರಭ ವಾರ್ತೆ ಹೊನ್ನಾವರ

ಮಂಕಿ ಪಟ್ಟಣ ಪಂಚಾಯಿತಿಗೆ ಮೊದಲ ಬಾರಿ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬಿಜೆಪಿ ಅಧಿಕಾರದ ಗದ್ದುಗೆ ಏರಲು ಯಶಸ್ವಿಯಾಗಿದೆ. ಒಟ್ಟು ೨೦ ವಾರ್ಡ್‌ಗಳ ಪೈಕಿ 2 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರಿಂದ, ಉಳಿದ ೧೮ ವಾರ್ಡ್‌ಗಳಿಗೆ ಮತದಾನ ನಡೆದಿತ್ತು. ಒಟ್ಟು ೨೦ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ೧೨ ಸ್ಥಾನ ಪಡೆಯುವ ಮೂಲಕ ಪಟ್ಟಣ ಪಂಚಾಯಿತಿಯನ್ನು ತನ್ನ ತೆಕ್ಕೆಗೆ ಬಾಚಿಕೊಂಡಿದೆ. ಇನ್ನು ಕಾಂಗ್ರೆಸ್‌ ೮ ಸ್ಥಾನ ಪಡೆದಿದ್ದು, ಅದರಲ್ಲಿ ೨ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಳಗ್ಗೆ ೮ ಗಂಟೆಯಿಂದ ಪಟ್ಟಣದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಜಿಪಂ ಉಪಕಾರ್ಯದರ್ಶಿ ಅಲ್ಲಾಭಕ್ಷ್ ಹಾಗೂ ತಾಲೂಕಾ ತಹಶೀಲ್ದಾರ್ ಪ್ರವೀಣ ಕರಾಂಡೆ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಚುನಾವಣೆ ನಡೆದ ೧೮ ವಾರ್ಡ್‌ಗಳ ಮತ ಎಣಿಕೆಯಲ್ಲಿ, ಕಾಂಗ್ರೆಸ್‌ನ ೦೬ ಅಭ್ಯರ್ಥಿಗಳು ಮತ್ತು ಬಿಜೆಪಿಯ ೧೨ ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ಮಂಕಿ ಪಪಂನ ಒಟ್ಟು ೨೦ ವಾರ್ಡ್‌ನಲ್ಲಿ, ವಾರ್ಡ್ ಸಂಖ್ಯೆ ೦೪ (ನವಾಯತಕೇರಿ) ಮತ್ತು ೦೫ (ಕಟ್ಟೆ ಅಂಗಡಿ) ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.ಅಭ್ಯರ್ಥಿಗಳು ಪಡೆದ ಮತಗಳ ಮಾಹಿತಿ: ವಾರ್ಡ್ ನಂ: ೦೧ ಜ್ಯೋತಿ ಸತೀಶ ಖರ‍್ವಿ ಬಿಜೆಪಿ-೪೦೭ ಮತ, ಸುನಿತಾ ಗಣಪತಿ ಖರ‍್ವಿ ಕಾಂಗ್ರೆಸ್-೩೦೫ ಮತ.

ವಾರ್ಡ್ ನಂ: 02 ಗೋವಿಂದ ಸಣ್ಣು ಗೊಂಡ ಕಾಂಗ್ರೆಸ್-೨೩೭ ಮತ, ಮೀನಾಕ್ಷಿ ಕೃಷ್ಣ ಹಸ್ಲರ ಬಿಜೆಪಿ-೨೯೭ ಮತ. ವಾರ್ಡ್ ನಂ: ೦೩ ಆನಂದ ಗಣಪತಿ ನಾಯ್ಕ ಬಿಜೆಪಿ-೨೭೬ ಮತ, ದತ್ತಾತ್ರಯ(ಗುರು) ಮಾದೇವ ನಾಯ್ಕ ಕಾಂಗ್ರೆಸ್-೨೨೦ ಮತ. ವಾರ್ಡ್ ನಂ: ೦೪ ರೇಷ್ಮಾ ಸಾಲ್ಟನ್ ರ‍್ನಾಂಡಿಸ್ ಅವಿರೋಧ ಆಯ್ಕೆ (ಕಾಂಗ್ರೆಸ್). ವಾರ್ಡ್ ನಂ: ೦೫- ಕಟ್ಟೆ ಅಂಗಡಿ ಮಹ್ಮದ್ ಸಿದ್ದಿಕ್ ಹಸನ ಬಾಪು ಅವಿರೋಧ ಆಯ್ಕೆ (ಕಾಂಗ್ರೆಸ್). ವಾರ್ಡ್ ನಂ: ೦೬ ನೂರಮೊಹಲ್ಲಾ ಮಂಕಿ ಕಾಂಗ್ರೆಸ್ -೪೩೫ ಮತ, ಧರ್ಮ ಗಣಪತಿ ಖಾರ್ವಿ ಬಿಜೆಪಿ 33 ಮತ. ವಾರ್ಡ್ ನಂ: ೦೭ ಸವಿತಾ ಮಲ್ಲಯ್ಯ ನಾಯ್ಕ ಬಿಜೆಪಿ-೨೨೦ ಮತ, ಸುಮತಿ ಶ್ರೀಧರ ನಾಯ್ಕ ಕಾಂಗ್ರೆಸ್-೧೮೮ ಮತ. ವಾರ್ಡ್ ನಂ: ೦೮- ಪೀಟರ್ ರೊಡ್ರಗೀಸ್ ಸಾಂತಾ ಬಿಜೆಪಿ-೨೮೭ ಮತ, ಎಂ.ಆರ್. ಶರತಕುಮಾರ ಜೈನ್, ಕಾಂಗ್ರೆಸ್-೨೪೦ ಮತ. ವಾರ್ಡ್ ನಂ: ೦೯- ಗೀತಾ ರಮಾಕಾಂತ ಹರಿಕಂತ್ರ ಬಿಜೆಪಿ-೪೭೨ ಮತ, ರಮ್ಯಾ ಅರುಣ ಹರಿಕಂತ್ರ, ಕಾಂಗ್ರೆಸ್-೧೯೦ ಮತ. ವಾರ್ಡ್ ನಂ: ೧೦-ಆಶಾ ಗಜಾನನ ನಾಯ್ಕ ಬಿಜೆಪಿ-೧೩೨ ಮತ, ಗಜಾನನ ಬಾಲಯ್ಯ ನಾಯ್ಕ, ಕಾಂಗ್ರೆಸ್-೩೭೬ ಮತ. ವಾರ್ಡ್ ನಂ: ೧೧ ರಾಜು ಮಂಜುನಾಥ ನಾಯ್ಕ ಕಾಂಗ್ರೆಸ್-೨೪೮ ಮತ, ಸತೀಶ ದೇವಪ್ಪ ನಾಯ್ಕ ಬಿಜೆಪಿ-೨೮೨ ಮತ. ವಾರ್ಡ್ ನಂ: ೧೨ ಸಂಜೀವ ಗಂಗಾಧರ ನಾಯ್ಕ ಕಾಂಗ್ರೆಸ್-೨೭೨ ಮತ, ನಾಯ್ಕ ಸುಬ್ರಾಯ ಬಾಬಯ್ಯ ಬಿಜೆಪಿ-೨೩೩ ಮತ.

ವಾರ್ಡ್ ನಂ: ೧೩ ಪದ್ಮಾವತಿ ನಾಯ್ಕ ಕಾಂಗ್ರೆಸ್-೨೪೧ ಮತ, ರೇಖಾ ಗಿರೀಶ ನಾಯ್ಕ, ಬಿಜೆಪಿ-೫೪೮ ಮತ. ವಾರ್ಡ್ ನಂ: ೧೪ ಈಶ್ವರ ಗೌಡ ಬಿಜೆಪಿ-೨೨೩ ಮತ, ಭಾರತಿ ನಾಗೇಶ ಗೌಡ ಕಾಂಗ್ರೆಸ್-೧೭೭ ಮತ. ವಾರ್ಡ್ ನಂ: ೧೫ ಅಣ್ಣಪ್ಪ ಹನುಮಂತ ನಾಯ್ಕ ಕಾಂಗ್ರೆಸ್-೧೦೬ ಮತ, ರವಿ ಉಮೇಶ ನಾಯ್ಕ ಬಿಜೆಪಿ -೫೯೨ ಮತ.

ವಾರ್ಡ್ ನಂ: ೧೬ ಉಲ್ಲಾಸ ಅಂಗದ ನಾಯ್ಕ ಕಾಂಗ್ರೆಸ್-೧೫೫ ಮತ, ಮಹಾಬಲೇಶ್ವರ ನಾಯ್ಕ ಸ್ವತಂತ್ರ-೧೧೮ ಮತ.

ವಾರ್ಡ್ ನಂ: ೧೭ ಉಷಾ ಕೃಷ್ಣ ನಾಯ್ಕ ಕಾಂಗ್ರೆಸ್-೩೯೭ ಮತ, ವನಿತಾ ಮಹಾಬಲೇಶ್ವರ ನಾಯ್ಕ, ಬಿಜೆಪಿ-೨೮೯ ಮತ. ವಾರ್ಡ್ ನಂ: ೧೮ ಅಶ್ವಿನಿ ಉಲ್ಲಾಸ ನಾಯ್ಕ ಕಾಂಗ್ರೆಸ್-೨೪೮ ಮತ, ವಿಜಯಾ ಮೋಹನ ನಾಯ್ಕ ಬಿಜೆಪಿ-೩೮೮ ಮತ. ವಾರ್ಡ್ ನಂ: ೧೯ ವಿನಾಯಕ ಮೊಗೇರ(ಗುಡ್ಡಿ) ಕಾಂಗ್ರೆಸ್-೨೯೯ ಮತ, ಸುರೇಶ ವೆಂಕಟ್ರಮಣ ಮೊಗೇರ್ (ಸ್ವತಂತ್ರ)-೧೯೨ ಮತ. ವಾರ್ಡ್ ನಂ: ೨೦ ಸವಿತಾ ಹನುಮಂತ ನಾಯ್ಕ ಬಿಜೆಪಿ-೩೪೪ ಮತ, ಶಿಲ್ಪಾ ರವಿದಾಸ ನಾಯ್ಕ ಕಾಂಗ್ರೆಸ್-೨೭೭ ಮತ ಪಡೆದಿದ್ದಾರೆ.ಸಚಿವ ಮಂಕಾಳ ವೈದ್ಯಗೆ ಹಿನ್ನಡೆ?ಇನ್ನು ಈ ಚುನಾವಣೆಯನ್ನು ಪ್ರತಿಷ್ಠೆ ಎಂಬಂತೆ ತೆಗೆದುಕೊಂಡಿದ್ದ ಸಚಿವ ಮಂಕಾಳ ವೈದ್ಯಗೆ ಹಿನ್ನಡೆಯಾಗಿದೆ ಎಂದು ರಾಜಕೀಯ ಲೆಕ್ಕಾಚಾರ ನಡೆಸಲಾಗುತ್ತದೆ. ಅಧಿಕಾರದ ಬಲ ಮತ್ತು ಹಣ ಬಲದ ಮೂಲಕ ಚುನಾವಣೆಯನ್ನು ಎದುರಿಸಿದರೂ ಸಹ ಮತದಾರ ಇದ್ಯಾವುದಕ್ಕೂ ಮನ್ನಣೆ ನೀಡಿಲ್ಲ. ಇದು ಪ್ರಜಾಪ್ರಭುತ್ವದ ಗೆಲುವು ಎಂದು ಬಿಜೆಪಿಯವರು ಸಂಭ್ರಮಿಸುತ್ತಿದ್ದಾರೆ. ಅಲ್ಲದೆ ಮಾಜಿ ಸಚಿವ ಶಿವಾನಂದ ನಾಯ್ಕರ ತಂತ್ರಗಾರಿಕೆ ಇಲ್ಲಿ ಕೆಲಸ ಮಾಡಿದೆ ಎನ್ನಲಾಗುತ್ತಿದೆ.