ಮಿಡ್ಲ್‌.. ಕಾಮನ್‌ ಪುಟಕ್ಕೆನೂತನ ಭವನ ನಿರ್ಮಾಣ, ಪ್ರಶಸ್ತಿಗಳ ಸ್ಥಾಪನೆ, ಬೈಲಾ ಪರಾಮರ್ಶೆಗೆ ಉಪ ಸಮಿತಿಗಳ ರಚನೆ

| Published : Jul 25 2025, 12:30 AM IST

ಮಿಡ್ಲ್‌.. ಕಾಮನ್‌ ಪುಟಕ್ಕೆನೂತನ ಭವನ ನಿರ್ಮಾಣ, ಪ್ರಶಸ್ತಿಗಳ ಸ್ಥಾಪನೆ, ಬೈಲಾ ಪರಾಮರ್ಶೆಗೆ ಉಪ ಸಮಿತಿಗಳ ರಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಲ್ಲರ ಒಳಗೊಳ್ಳುವಿಕೆಯಲ್ಲಿ ಈ ಮೇಲಿನ ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಉಪ ಸಮಿತಿ ರ

ಕನ್ನಡಪ್ರಭ ವಾರ್ತೆ ಮೈಸೂರುಶತಮಾನದ ಹಾದಿಯಲ್ಲಿರುವ ಪ್ರತಿಷ್ಠಿತ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮುಂದಿನ ಹೆಜ್ಜೆಗಳು, ಸಂಘದ ಅಭಿವೃದ್ಧಿ ಮತ್ತು ವೃತ್ತಿಪರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎಲ್ಲಾ ಪತ್ರಿಕೆಗಳ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಸಂಪಾದಕರು, ಮುಖ್ಯಸ್ಥರ ವಿಶೇಷ ಸಭೆ ಗುರುವಾರ ಪತ್ರಕರ್ತರ ಭವನದಲ್ಲಿ ನಡೆಸಿ ಅನೇಕ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.ಸಂಘದ ನೂತನ ಭವನ ನಿರ್ಮಾಣ, ಪತ್ರಕರ್ತರಿಗೆ ಆರೋಗ್ಯ ರಕ್ಷಣೆ, ಸಂಘದ ಬೈಲಾ ಪರಾಮರ್ಶೆ, ಪ್ರತಿಷ್ಠಿತ ಪ್ರಶಸ್ತಿಗಳ ಸ್ಥಾಪನೆ, ವೃತ್ತಿ ಕೌಶಲ್ಯ ವೃದ್ಧಿಗೆ ತಿಂಗಳ ಕಾರ್ಯಕ್ರಮ ಆಯೋಜನೆ, ಗ್ರಂಥಾಲಯದ ಪುನಾರಾರಂಭ ಸಂಬಂಧ ಎಲ್ಲಾ ಹಿರಿಯ ಪತ್ರಕರ್ತರು ಸಲಹೆ ನೀಡಿದರು.ಎಲ್ಲರ ಒಳಗೊಳ್ಳುವಿಕೆಯಲ್ಲಿ ಈ ಮೇಲಿನ ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಉಪ ಸಮಿತಿ ರಚಿಸಲು ನಿರ್ಧರಿಸಲಾಯಿತು.ಸಂಘದ ಅಧ್ಯಕ್ಷ ಕೆ. ದೀಪಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಅಂಶಿ ಪ್ರಸನ್ನಕುಮಾರ್, ಸಿ.ಕೆ. ಮಹೇಂದ್ರ, ಹಿರಿಯ ಪತ್ರಕರ್ತರಾದ ಕೆ. ನರಸಿಂಹಮೂರ್ತಿ, ಮಳಲಿ ನಟರಾಜಕುಮಾರ್, ಎ.ಸಿ. ಪ್ರಭಾಕರ್, ರವಿ ಕೋಟಿ, ಟಿ.ಆರ್‌. ಸತೀಶ್‌ ಕುಮಾರ್‌, ರಮೇಶ್ ಉತ್ತಪ್ಪ, ಎಚ್‌.ಎಂ. ಅರವಿಂದ್, ಎಂ.ಆರ್. ಸತ್ಯನಾರಾಯಣ, ಕೊಳ್ಳೇಗಾಲ ಮಹೇಶ್, ಉಮೇಶ್ ಭಟ್, ಪ್ರಗತಿ ಗೋಪಾಲಕೃಷ್ಣ, ರಾಮ್, ಕೆ.ಪಿ .ನಾಗರಾಜ್, ಜಿ. ಜಯಂತ್, ರಾಜ್ಯ ಸಂಘದ ನಿರ್ದೇಶಕ ಬಿ. ರಾಘವೇಂದ್ರ ಭಾಗವಹಿಸಿ ಉಪಯುಕ್ತ ಸಲಹೆ ನೀಡಿದರು. ಸಭೆಯ ಆರಂಭದಲ್ಲಿ ಜಿಎಸ್ಎುಸ್ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ ದ್ವಾರಕಾನಾಥ್ ಅವರು, ಪತ್ರಕರ್ತರಿಗೆ ಆರೋಗ್ಯ ಸೇವೆ ಕಲ್ಪಿಸಲು ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ರಿಯಾಯಿತಿ ದರದಲ್ಲಿ ಪತ್ರಕರ್ತರಿಗೆ ಆರೋಗ್ಯ ಸೇವೆ ಕಲ್ಪಿಸುವುದು ಮತ್ತು ಆರೋಗ್ಯ ವಿಮೆ ವ್ಯಾಪ್ತಿಗೆ ಪತ್ರಕರ್ತರನ್ನು ಒಳಪಡಿಸುವ ಬಗ್ಗೆ ವಿಷಯ ಮಂಡಿಸಿದರು.ಇದಕ್ಕು ಮೊದಲು ಸಭೆಯಲ್ಲಿ ಉಪಸ್ಥಿತರಿದ್ದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ , ಸಭೆಯ ಉದ್ದೇಶ ಮತ್ತು ಕಾರ್ಯಸೂಚಿಯನ್ನು ಮಂಡಿಸಿದರು.ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ ಮತ್ತು ಕೊಡುಗೆಗಳ ಕುರಿತು ಮಾಹಿತಿ ನೀಡಿದರು.ಸಭೆಯಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್. ಪ್ರಭುರಾಜನ್, ಎಂ. ಸುಬ್ರಹ್ಮಣ್ಯ, ಹಿರಿಯ ಪತ್ರಕರ್ತರಾದ ಕೆ.ಎನ್. ರವಿ, ಮಧುಸೂದನ್, ಕವಿತಾ, ವೀರೇಂದ್ರ ಪ್ರಸಾದ್, ಸತೀಶ್‌ ಕುಮಾರ್, ನಜೀರ್, ಸುನಿಲ್, ಸುವರ್ಣ, ಸೂರ್ಯ, ನಾಣಿ, ಕೆ.ಎನ್. ನಾಗಸುಂದರಪ್ಪ, ಕುಮಾರ್, ಕಿರಣ್, ರಾಘವೇಂದ್ರ ಸ್ವಾಮಿ, ಆನಂದ್, ಅಫ್ಸರ್ ಪಾಷ, ರಂಗಸ್ವಾಮಿ, ಘನವಂತ್, ಕುಮಾರ್ ಹಾಗೂ ಸಂಘದ ಉಪಾಧ್ಯಕ್ಷ ರವಿ ಪಾಂಡವಪುರ, ಕಾರ್ಯದರ್ಶಿ ಕೃಷ್ಣೋಜಿ ರಾವ್, ಆಡಳಿತ ಮಂಡಳಿ ಸದಸ್ಯರಾದ ರಾಜಣ್ಣ, ಸೋಮಶೇಖರ್ ಚಿಕ್ಕಮರಳ್ಳಿ, ಹನಗೋಡು ನಟರಾಜ್, ಹುಲ್ಲಹಳ್ಳಿ ಮೋಹನ್ ಮೊದಲಾದವರು ಪಾಲ್ಗೊಂಡಿದ್ದರು. ಸಂಘದಿಂದ ಕೃತಜ್ಞತೆಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ವೃತ್ತಿಪರತೆ ಹೆಚ್ಚಿಸುವ ನಿಟ್ಟಿನಲ್ಲಿ ಇಂದು ಕರೆಯಲಾಗಿದ್ದ ವಿಶೇಷ ಸಭೆಗೆ ಆಗಮಿಸಿ ಉಪಯುಕ್ತ ಸಲಹೆ ಮತ್ತು ಒಳಗೊಳ್ಳುವಿಕೆಯ ಭರವಸೆ ನೀಡಿದ ಮಾಧ್ಯಮ ಸಂಸ್ಥೆಗಳ ಎಲ್ಲ ಸಂಪಾದಕರು, ಮುಖ್ಯಸ್ಥರು, ಜಿಲ್ಲಾ ವರದಿಗಾರರು, ಛಾಯಾಗ್ರಾಹಕರಿಗೆ ಸಂಘದ ಅಧ್ಯಕ್ಷ ಕೆ.ದೀಪಕ್ ಮತ್ತು ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಕೃತಜ್ಞತೆ ಸಲ್ಲಿಸಿದ್ದಾರೆ.