ಸಾರಾಂಶ
ಶೃಂಗೇರಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಮಾಸಿಕ ಸಂತೆಗಳು ಇತ್ತಿಚಿನ ದಿನಗಳಲ್ಲಿ ಯಶಸ್ವಿಯಾಗುತ್ತಿವೆ. ಇದು ಮಹಿಳೆಯರ ಸ್ವಾವಲಂಬನೆ ಬದುಕಿಗೆ ಪೂರಕವಾಗಿದೆ ಎಂದು ಅಡ್ಡಗೆದ್ದೆ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷೆ ಶಾರದಾ ಹೇಳಿದರು.
ಅಡ್ಡಗೆದ್ದೆಯಲ್ಲಿ ಸಂಜೀವಿನಿ ಗ್ರಾಪಂ ಮಟ್ಟದ ಮಾಸಿಕ ಸಂತೆ ಮೇಳ, ವಸ್ತು ಪ್ರದರ್ಶನ,
ಕನ್ನಡಪ್ರಭ ವಾರ್ತೆ, ಶೃಂಗೇರಿಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಮಾಸಿಕ ಸಂತೆಗಳು ಇತ್ತಿಚಿನ ದಿನಗಳಲ್ಲಿ ಯಶಸ್ವಿಯಾಗುತ್ತಿವೆ. ಇದು ಮಹಿಳೆಯರ ಸ್ವಾವಲಂಬನೆ ಬದುಕಿಗೆ ಪೂರಕವಾಗಿದೆ ಎಂದು ಅಡ್ಡಗೆದ್ದೆ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷೆ ಶಾರದಾ ಹೇಳಿದರು.
ತಾಲೂಕಿನ ಅಡ್ಡಗೆದ್ದೆಯಲ್ಲಿ ಸಂಜೀವಿನಿ ಗ್ರಾಮಪಂಚಾಯಿತಿ ಮಟ್ಟದ ಮಾಸಿಕ ಸಂತೆ ಮೇಳ ಹಾಗೂ ವಸ್ತು ಪ್ರದರ್ಶನ, ಮಾರಾಟ ಉದ್ಘಾಟಿಸಿ ಮಾತನಾಡಿದರು. ಸ್ವಸಹಾಯ ಸಂಘದ ಮಹಿಳೆಯರು ತಾವು ಉತ್ಪಾದಿಸಿದ ಉತ್ಪನ್ನಗಳು, ಸಾವಯವ ಗೊಬ್ಬರ ಬಳಸಿ ಬೆಳೆದ ತರಕಾರಿ, ಹಣ್ಣು ಹಂಪಲುಗಳು, ಕರಕುಶಲ, ಕೈಗಾರಿಕೆ ವಸ್ತುಗಳು, ಸಾಂಬಾರು ಪದಾರ್ಥಗಳನ್ನು ಮಾರಾಟ ಮಾಡಲು ಮಾಸಿಕ ಸಂತೆಗಳು ಉತ್ತಮ ವೇದಿಕೆಗಳಾಗಿವೆ. ಇದರಿಂದ ಮಹಿಳೆಯರಿಗೆ ಧೈರ್ಯ, ಆರ್ಥಿಕ ವ್ಯವಹಾರ ತಿಳುವಳಿಕೆ ಬರುತ್ತದೆ.ಸ್ವಸಹಾಯ ಸಂಘದ ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ನಮ್ಮ ಒಕ್ಕೂಟದಿಂದ ನಿರಂತರ ಸಹಾಯ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಇಂತಹ ಸಂತೆ, ಮಾರುಕಟ್ಟೆಗಳನ್ನು ಪ್ರೋತ್ಸಾಹಿಸಿ, ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ, ಬೆಳೆದ ವಸ್ತುಗಳನ್ನು ಕೊಳ್ಳಬೇಕು. ಆರ್ಥಿಕವಾಗಿ ಅವರ ಕೃಷಿ, ಕೈಗಾರಿಕೆಗಳಿಗೆ ಪ್ರೋತ್ಸಾಹಿಸಿ ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹಂಚಲಿ, ಒಕ್ಕೂಟದ ಪದಾಧಿಕಾರಿ ಶೋಭಾ, ಶ್ವೇತಾ, ಗಾಯಿತ್ರಿ, ಗ್ರಾಪಂ ಸದಸ್ಯರಾದ ಸುಂದರೇಶ್, ತಾಲೂಕು ವ್ಯವಸ್ಥಾಪಕ ಆದರ್ಶ, ಚೈತ್ರ, ಪವಿತ್ರ ಮತ್ತಿತರರು ಉಪಸ್ಥಿತರಿದ್ದರು.28 ಶ್ರೀ ಚಿತ್ರ 24-
ಶೃಂಗೇರಿ ತಾಲೂಕಿನ ಅಡ್ಡಗೆದ್ದೆಯಲ್ಲಿ ನಡೆದ ಸಂಜೀವಿನಿ ಅಡ್ಡಗೆದ್ದೆ ಗ್ರಾಮಪಂಚಾಯಿತಿ ಮಟ್ಟದ ಮಾಸಿಕ ಸಂತೆ, ವಸ್ತುಪ್ರದರ್ಶನ, ಮಾರಾಟ ಮೇಳವನ್ನು ಶಾರದಾ ಉದ್ಘಾಟಿಸಿದರು.