ಸ್ಮಾರಕಗಳು ಸಾಂಸ್ಕೃತಿಕ, ಪರಂಪರೆಯ ಪ್ರತೀಕ: ಬಜರಂಗಬಲಿ

| Published : Oct 30 2025, 02:15 AM IST

ಸ್ಮಾರಕಗಳು ಸಾಂಸ್ಕೃತಿಕ, ಪರಂಪರೆಯ ಪ್ರತೀಕ: ಬಜರಂಗಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಕೇವಲ ಓದಿನತ್ತ ಗಮನಿಸದೆ ಕಣ್ಣಿದ್ದವರೊಮ್ಮೆ ಕನಕಗಿರಿ ನೋಡು

ಕನಕಗಿರಿ: ಸ್ಮಾರಕಗಳು ಸಾಂಸ್ಕೃತಿಕ ಪ್ರತೀಕವಾಗಿದ್ದು, ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸಪ್ರದ ಕಾಲೇಜಿನ ಪ್ರಾಚಾರ್ಯ ಡಾ.ಬಜರಂಗ ಬಲಿ ಹೇಳಿದರು.

ಅವರು ಪಟ್ಟಣದ ಪದವಿ ಕಾಲೇಜಿನಿಂದ ಇತಿಹಾಸ ವಿಭಾಗ, ಎನ್ಎಸ್ಎಸ್ ಘಟಕ ಹಾಗೂ ಅಜೀಂ ಪ್ರೇಮ್‌ಜೀ ಫೌಂಡೇಶನ್ ಸಹಭಾಗಿತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ಮಾರಕಗಳ ಸ್ವಚ್ಛತೆ ಅರಿವು ಜಾಥಾಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಓದಿನತ್ತ ಗಮನಿಸದೆ ಕಣ್ಣಿದ್ದವರೊಮ್ಮೆ ಕನಕಗಿರಿ ನೋಡು ಎಂಬ ಜನವಾಣಿಗೆ ಅರ್ಥ ಸಿಗಬೇಕಾದರೆ ವಿದ್ಯಾರ್ಥಿಗಳು ಐತಿಹಾಸಿಕ, ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಸ್ವಚ್ಛತೆ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸಿದಾಗ ಅವುಗಳ ಸಂರಕ್ಷಣೆ ಸಾಧ್ಯ ಎಂದರು.

ಸ್ಮಾರಕ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷವಾಕ್ಯದೊಂದಿಗೆ ಮೆರವಣಿಗೆ ಜಾಥಾವು ಕಾಲೇಜಿನಿಂದ ಆರಂಭವಾಗಿ ವೆಂಕಟಪತಿ ಬಾವಿ ವರೆಗೆ ನಡೆಯಿತು.

ಈ ವೇಳೆ ಸಹಾಯಕ ಪ್ರಾಧ್ಯಾಪಕರಾದ ರಕ್ಷಿತ್, ಡಾ.ವಿರೇಶ ಕೆಂಗಲ್, ಲಲಿತಾ ಕಿನ್ನಾಳ, ನಫೀಸ್ ಬಾನು, ಸಂಗಮೇಶ ಹನುಮನಾಳ, ಬೋಧಕೇತರ ಸಿಬ್ಬಂದಿ ಜ್ಯೋತಿ, ಅತಿಥಿ ಉಪನ್ಯಾಸಕರಾದ ಗೋಪಾಲರೆಡ್ಡಿ ಮಾದಿನಾಳ, ಬಾಳಪ್ಪ, ಮಂಜುನಾಥ, ಮಾರುತಿ, ಸೋಮಶೇಖರ, ಎಸ್.ಕೆ ಖಾದ್ರಿ, ಬಸವರಾಜ, ರವಿಕುಮಾರ, ಶಾಂತ, ಡಾ. ವೀರೇಶ, ಸಿದ್ದಪ್ಪ, ಮಾದಿನಾಳಪ್ಪ, ದೇವೇಂದ್ರಪ್ಪ, ಸುಪ್ರಿಯಾ, ಸಾನಿಯಾ, ಗೋಪಾಲ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.