ಎಕ್ಸಲೆಂಟ್ ಸಿಬಿಎಸ್‌ಇ ಶಾಲೆ ಮೂಡುಬಿದಿರೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ಎಲ್.ಕೆ.ಜಿ. ಯಿಂದ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು.

ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ಸಿಬಿಎಸ್‌ಇ ಶಾಲೆ ಮೂಡುಬಿದಿರೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ಎಲ್.ಕೆ.ಜಿ. ಯಿಂದ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು.ಮುಖ್ಯ ಅತಿಥಿ, ಮೂಡುಬಿದಿರೆ ಪುರಸಭೆ ಸದಸ್ಯ ಜೋಸಿ ಮಿನೇಜಸ್‌ ಮಾತನಾಡಿ, ಪಾಲಕರು ಗೆಲವಿನಲ್ಲೂ ಸೋಲಿನಲ್ಲೂ ಮಕ್ಕಳನ್ನು ಹೋಲಿಕೆ ಮಾಡಬೇಡಿ. ಅವರು ಇಂದು ಮೈದಾನದಲ್ಲಿ ಧೈರ್ಯವಾಗಿ ಪಾಲ್ಗೊಂಡಿರುವುದೇ ದೊಡ್ಡ ಗೆಲುವು ಎಂದರು.

ಕ್ರೀಡೆ ಎನ್ನುವುದು ಗೆಲುವು ಸೋಲುಗಳಿಗಿಂತಲೂ ಹೆಚ್ಚು ಶಿಸ್ತು ಪರಿಶ್ರಮ ಮತ್ತು ಸಹಕಾರ ಮನೋಭಾವವನ್ನು ಕಲಿಸುವ ಅತ್ಯುತ್ತಮ ಗುರು ಎಂದು ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ತಿಳಿಸಿದರು.ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಗೆಲ್ಲುವುದು ಮುಖ್ಯವಲ್ಲ. ಪಾಲ್ಗೊಳ್ಳುವುದೇ ಕ್ರೀಡಾ ಸ್ಫೂರ್ತಿ ಈ ಮನೋಭಾವವೇ ವಿದ್ಯಾರ್ಥಿಗಳ ಬದುಕಿನ ಗೆಲುವು ನಿಶ್ಚಿತಗೊಳಿಸುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳ ಸಾಮೂಹಿಕ ಪಥ ಸಂಚಲನದ ಜೊತೆಗೆ ಆಕರ್ಷಕ ಡ್ರಿಲ್ ಶೋ ಕ್ರೀಡಾಕೂಲದ ಮೆರುಗು ಹೆಚ್ಚಿಸಿತು. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವೈವಿಧ್ಯಮಯ ಕ್ರೀಡೆಗಳನ್ನು ಆಯೋಜಿಸಲಾಯಿತು. ಮುಖ್ಯ ಅತಿಥಿ ಮೂಡಬಿದರೆ ಪುರಸಭೆ ಸದಸ್ಯ ಜೋಸಿ ಮಿನೇಜಸ್, ಆಡಳಿತ ನಿರ್ದೇಶಕ ಡಾ. ಬಿ. ಪಿ ಸಂಪತ್ ಕುಮಾರ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಶ್ರೀಪಸಾದ್, ಕ್ರೀಡಾ ನಾಯಕ ನವನೀತ್ ಉಪಸ್ಥಿತರಿದ್ದರು. ಶಿಕ್ಷಕಿ ಕುಮಾರಿ, ಪ್ರಾಂಶುಪಾಲ ಅನುಷ ನಿರೂಪಿಸಿದರು. ಪ್ರಸಾದ್ ಸ್ವಾಗತಿಸಿದರು. ಸಿಬಿಎಸ್‌ಇ ಶಾಲೆಯ ಸಂಯೋಜಕಿ ವಿಮಲ ವಂದಿಸಿದರು.