ಮೂಡುಬಿದಿರೆ: ರಾಣಿ ಅಬ್ಬಕ್ಕ ಪ್ರತಿಮೆ ಲೋಕಾರ್ಪಣೆ

| Published : Nov 02 2025, 04:00 AM IST

ಮೂಡುಬಿದಿರೆ: ರಾಣಿ ಅಬ್ಬಕ್ಕ ಪ್ರತಿಮೆ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಇಲ್ಲಿನ ಚೌಟರ ಅರಮನೆಯ ಎದುರು ನಿರ್ಮಿಸಲಾದ ಸುಮಾರು 6.5 ಅಡಿ ಎತ್ತರದ ವೀರರಾಣಿ ಅಬ್ಬಕ್ಕ ಪ್ರತಿಮೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಇಲ್ಲಿನ ಚೌಟರ ಅರಮನೆಯ ಎದುರು ನಿರ್ಮಿಸಲಾದ ಸುಮಾರು 6.5 ಅಡಿ ಎತ್ತರದ ವೀರರಾಣಿ ಅಬ್ಬಕ್ಕ ಪ್ರತಿಮೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಲೋಕಾರ್ಪಣೆಗೊಳಿಸಿದರು.

ಮಾಜಿ ಸಚಿವ ಕೆ.ಅಭಯಚಂದ್ರ, ಜೈನ ಮಠದ ಸ್ವಾಮೀಜಿ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ., ಸದಸ್ಯರಾದ ಪುರಂದರ ದೇವಾಡಿಗ, ಕೊರಗಪ್ಪ, ಇಕ್ಬಾಲ್ ಕರೀಂ, ಮಮತಾ ಅನಂದ್, ಶಕುಂತಳಾ ಹರೀಶ್, ಪುರಸಭಾ ಮಾಜಿ ಅಧ್ಯಕ್ಷೆ ಹರೀಣಾಕ್ಷಿ, ಶಿರ್ತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಗ್ನೇಸ್ ಡಿಸೋಜ, ಚೌಟರ ಅರಮನೆಯ ಕುಲದೀಪ್ ಎಂ., ಜವನೆರ್ ಬೆದ್ರದ ಸಂಸ್ಥಾಪಕ ಅಮರ್ ಕೋಟೆ, ಜಗದೀಶ್ ಅಧಿಕಾರಿ, ಸುದರ್ಶನ ಎಂ., ಹರ್ಷವರ್ಧನ ಪಡಿವಾಳ್, ಅಶ್ವಥ್ ಪಣಪಿಲ, ರುಕ್ಕಯ್ಯ ಪೂಜಾರಿ, ಪ್ರವೀಣ್ ಜೈನ್, ಸುರೇಶ್ ಅಂಚನ್ ಜಯಶ್ರೀ, ಅನೀಶ್ ಡಿಸೋಜ, ಭರತ್ ಶೆಟ್ಟಿ ಮತ್ತಿತರ ಪ್ರಮುಖರು, ಜವನೆರ್ ಬೆದ್ರ ಪದಾಧಿಕಾರಿಗಳು ಉಪಸ್ಥಿತರಿದ್ದರು.