ಸಾರಾಂಶ
ಮೂಡುಬಿದಿರೆ ಸಮಾಜ ಮಂದಿರ ಸಭಾ ವತಿಯಿಂದ ಸಮಾಜ ಮಂದಿರದಲ್ಲಿ ಸೋಮವಾರ ಐದು ದಿನಗಳ 78 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಉದ್ಘಾಟನೆ ನೆರವೇರಿತು.
ಮೂಡುಬಿದಿರೆ: ದಸರಾ ಎನ್ನುವುದು ಕೆಡುಕನ್ನು ತೊರೆಯುವ, ಅಸುರೀ ಸಂಸ್ಕೃತಿಯಿಂದ ವಿಮುಖರಾಗುವ ಮತ್ತು ಒಳ್ಳೆಯದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಉತ್ಸವವಾಗಿದೆ. ಹೀಗೆ ಸಾಹಿತ್ಯ ಸಂಸ್ಕಾರಕ್ಕೆ ಒತ್ತು ನೀಡಿದಾಗ ವ್ಯಕ್ತಿಯ ಉನ್ನತಿಯ ಜತೆಗೆ ಸಾಮಾಜಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹೇಳಿದ್ದಾರೆ.
ಇಲ್ಲಿನ ಸಮಾಜ ಮಂದಿರ ಸಭಾ ವತಿಯಿಂದ ಸಮಾಜ ಮಂದಿರದಲ್ಲಿ ಸೋಮವಾರ ಆರಂಭಗೊಂಡ ಐದು ದಿನಗಳ 78 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜ ಮಂದಿರ ಪುರಸ್ಕಾರ: ಮೂಡುಬಿದಿರೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಉದ್ಯಮಿ, ಧಾರ್ಮಿಕ ನೇತಾರ ನಂದ ಕುಮಾರ್ ಆರ್. ಕುಡ್ವ ಅವರಿಗೆ 2025ರ ಸಮಾಜ ಮಂದಿರ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಮಾಜ ಮಂದಿರ ಸಭಾದ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ, ಜತೆ ಕಾರ್ಯದರ್ಶಿ ಕೆ. ಆರ್. ಪಂಡಿತ್, ಆಡಳಿತ ಮಂಡಳಿ ಸದಸ್ಯರಾದ ಸಿ.ಹೆಚ್. ಅಬ್ದುಲ್ ಗಫೂರ್, ಪ್ರತಾಪ್ ಕುಮಾರ್ ಜೈನ್, ಪಿ. ರಾಮ ಪ್ರಸಾದ್ ಭಟ್, . ಕೆ. ವೆಂಕಟೇಶ್ ಕಾಮತ್ , ಪಿ. ಜಯರಾಜ್ ಕಂಬಳಿ, ರಾಜೇಶ್ ಕೋಟೆಗಾರ್, ಎಂ.ಎಸ್. ಕೋಟ್ಯಾನ್ ಉಪಸ್ಥಿತರಿದ್ದರು.ದಸರಾ ಉತ್ಸವ ಸಂಚಾಲಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಎಚ್. ಸುರೇಶ್ ಪ್ರಭು ಸಮ್ಮಾನ ಪತ್ರ ವಾಚಿಸಿದರು. ದಸರಾ ಉತ್ಸವ ಸಂಚಾಲಕ, ಜತೆ ಕಾರ್ಯದರ್ಶಿ ಎಂ. ಗಣೇಶ್ ಕಾಮತ್ ವಂದಿಸಿದರು.