ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಮೂಡ್ಲಕಟ್ಟೆ ಐ.ಎಂ.ಜೆ. ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಟ್ರೈನಿಂಗ್ ಆ್ಯಂಡ್ ಪ್ಲೇಸ್ಮೆಂಟ್ ವಿಭಾಗವು ಬೆಂಗಳೂರಿನ ಕ್ರಿಯೇಟಿವ್ ಇಂಜಿನಿಯರ್ಸ್ ಸಹಯೋಗದೊಂದಿಗೆ ಟಾಟಾ ಎಲೆಕ್ಟ್ರಾನಿಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಏರ್ಪಡಿಸಿದ ಪೂಲ್ ಕ್ಯಾಂಪಸ್ ಸೆಲೆಕ್ಷನ್ ಯಶಸ್ವಿಯಾಗಿ ನಡೆಯಿತು.ಈ ಸಂದರ್ಶನದಲ್ಲಿ ಐ.ಎಂ.ಜೆ.ಐ.ಎಸ್.ಸಿ. ಮೂಡ್ಲಕಟ್ಟೆ ಮತ್ತು ವಿವಿಧ ಪದವಿ ಕಾಲೇಜಿನ ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧ ಹಂತಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಐ.ಎಂ.ಜೆ.ಐ.ಎಸ್.ಸಿ ಪದವಿ ಕಾಲೇಜಿನ 43 ವಿದ್ಯಾರ್ಥಿಗಳು, ಕೋಟೇಶ್ವರ ಸರ್ಕಾರಿ ಪದವಿ ಕಾಲೇಜಿನ 15 ವಿದ್ಯಾರ್ಥಿಗಳು, ಕೋಟ ಪಡುಕೆರೆ ಪದವಿ ಕಾಲೇಜಿನ 5 ವಿದ್ಯಾರ್ಥಿಗಳು, ಬಾರ್ಕೂರು ಪದವಿ ಕಾಲೇಜಿನ 7 ವಿದ್ಯಾರ್ಥಿಗಳು ಸೇರಿ ಒಟ್ಟು 70 ವಿದ್ಯಾರ್ಥಿಗಳು ಆಯ್ಕೆಗೊಂಡರು.
ಇದಕ್ಕೆ ಮೊದಲು ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂಪನಿಯ ರಿಕ್ರೂಟ್ಮೆಂಟ್ ಟೀಮ್ ಲೀಡರ್ ಹಾಲೇಶ್ ಹಿರೇಮಠ್, ‘ಪ್ಲೇಸ್ಮೆಂಟ್ ನ ವಿವಿಧ ಹಂತಗಳು, ಕಂಪನಿಯ ವಿಶೇಷತೆ, ಕಾರ್ಯವ್ಯಾಪ್ತಿ, ಲಭ್ಯವಿರುವ ಹುದ್ದೆಗಳು, ನೌಕರರಿಗೆ ಸಿಗುವ ಪ್ರಯೋಜನಗಳು ಮತ್ತು ಸವಲತ್ತುಗಳು ಹಾಗೂ ಕಂಪನಿಯ ಸಾಧನೆ’ಗಳನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ರಿಕ್ರೂಟ್ಮೆಂಟ್ ಮ್ಯಾನೇಜರ್ ಮಹೇಶ್, ಮ್ಯಾನೇಜರ್ ಶ್ರೀನಿವಾಸ್ ಉಪಸ್ಥಿತರಿದ್ದರು. ಕಾಲೇಜು ಕ್ಯಾಂಪಸ್ ಆಯ್ಕೆಗೆ ವಿಶೇಷ ಆದ್ಯತೆಯನ್ನು ನೀಡುತ್ತಿದ್ದು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರತಿಭಾ ಎಂ. ಪಟೇಲ್ ಅವರು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ಪ್ಲೇಸ್ಮೆಂಟ್ ಆಫೀಸರ್ ಜಯಶೀಲ್ ಕುಮಾರ್, ಸಹ ಸಂಯೋಜಕಿ ರಾಜೇಶ್ವರಿ ಆರ್. ಶೆಟ್ಟಿ ಇದ್ದರು.ಕಂಪನಿಯ ಮುಖ್ಯಸ್ಥರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಿಗೆ ಕಂಪನಿಯ ಮುಖ್ಯಸ್ಥರು ಸ್ಮರಣಿಕೆ ನೀಡಿ ಗೌರವಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಕು. ರಕ್ಷಿತಾ ಆರ್. ಅಡಿಗ ನಿರೂಪಿಸಿದರು.