ಮೂಡ್ಲಕಟ್ಟೆ ಐಎಂಜೆ ಕಾಲೇಜು: ಯಕ್ಷಗಾನ ಹೆಜ್ಜೆ- ಕಿರು ನೋಟ ಕಾರ್ಯಕ್ರಮ

| Published : Mar 09 2024, 01:32 AM IST

ಮೂಡ್ಲಕಟ್ಟೆ ಐಎಂಜೆ ಕಾಲೇಜು: ಯಕ್ಷಗಾನ ಹೆಜ್ಜೆ- ಕಿರು ನೋಟ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್‌ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುಷ್ಮಾ ಅಡಿಗ ಅವರು ಯಕ್ಷಗಾನದ ಗೆಜ್ಜೆಗಳನ್ನು ಅನಾವರಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಮೂಡ್ಲಕಟ್ಟೆಯ ಐ.ಎಂ.ಜೆ. ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಸಂಸ್ಥೆಯ ಲಲಿತ ಕಲಾ ಸಂಘ ಮತ್ತು ಓದುಗರ ಸಂಘಗಳ ಜಂಟಿ ಆಶ್ರಯದಲ್ಲಿ ‘ಯಕ್ಷಗಾನ ಹೆಜ್ಜೆ– ಕಿರುನೋಟ’ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್‌ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುಷ್ಮಾ ಅಡಿಗ ಅವರು ಯಕ್ಷಗಾನದ ಗೆಜ್ಜೆಗಳನ್ನು ಅನಾವರಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಯಕ್ಷಗಾನ ಕರಾವಳಿಯಲ್ಲಿ ಶ್ರೇಷ್ಠ ಕಲೆ. ಇದು ಕೇವಲ ಮನೋರಂಜನಾ ಕಲೆಯಾಗಿರದೆ ಆರಾಧನಾ ಕಲೆಯೂ ಆಗಿದೆ. ಯಕ್ಷಗಾನದ ಜೀವಾಳವೇ ಭಾಗವತಿಕೆ. ಇಲ್ಲಿ ಪಾತ್ರಗಳಿಗೆ ತಕ್ಕಂತೆ ವೇಷ ಭೂಷಣಗಳು ಇರುತ್ತವೆ. ಹಿಂದೆ ಕಾವ್ಯ ಪ್ರಕಾರಗಳಲ್ಲಿ ಇದ್ದಂತಹ ಪೌರಾಣಿಕ ವಿಚಾರಗಳು ಸಾಮಾನ್ಯ ಜನರಿಗೆ ಅರ್ಥವಾಗದ ಕಾರಣ ಅದರ ಪ್ರಚಾರಕ್ಕಾಗಿ ಯಕ್ಷಗಾನ ಹುಟ್ಟಿಕೊಂಡಿತು ಎಂದು ಯಕ್ಷಗಾನದ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್, ವಿದ್ಯಾರ್ಥಿಗಳಿಗೆ ಈ ಸಾಂಪ್ರದಾಯಿಕ ಯಕ್ಷಗಾನ ಕಲೆಯ ಮಹತ್ವದ ಕುರಿತು ತಿಳಿಸಿದರು. ಉಪ ಪ್ರಾಂಶುಪಾಲ ಪ್ರೊ. ಜಯಶೀಲ್ ಕುಮಾರ್, ಲಲಿತ ಕಲಾಸಂಘದ ಸಂಯೋಜಕಿ ಪ್ರೊ. ಸುಮನ, ಓದುಗರ ಸಂಘದ ಸಂಯೋಜಕಿ ಪ್ರೊ. ಪಾವನ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಯಕ್ಷಗಾನ ಕಲಾವಿದೆಯೂ ಆಗಿರುವ ಬಿಸಿಎ ವಿದ್ಯಾರ್ಥಿನಿ ಸನ್ನಿಧಿ ಪಿ.ವೈ., ಯಕ್ಷಗಾನದ ಹೆಜ್ಜೆಗಳ ಪ್ರಾತ್ಯಕ್ಷಿಕೆ ನೀಡಿ, ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸಿದರು.ಯಕ್ಷಗಾನದ ಕುರಿತಾದ ಲೇಖನವನ್ನು ವೈಭವಿ ಮತ್ತು ಸನ್ನಿಧಿ ಪಿ.ವೈ. ವಾಚಿಸಿದರು. ಭಾನುಮತಿ ಪ್ರಾರ್ಥನೆಗೈದರು. ಕಾರ್ಯಕ್ರಮವನ್ನು ಬಿಸಿಎ ವಿಭಾಗದ ವಿದ್ಯಾರ್ಥಿನಿ ರಶಿತಾ ಶೆಟ್ಟಿ ನಿರೂಪಿಸಿ, ವಂದಿಸಿದರು.