ಮೂಡುಬಿದಿರೆ: ಬೆದ್ರ ಗೂಡುದೀಪ, ರಂಗೋಲಿ ಸ್ಪರ್ಧೆ ವಿಜೇತರು

| Published : Oct 30 2024, 12:31 AM IST

ಸಾರಾಂಶ

ವಿವಿಧ ಕಡೆಗಳಲ್ಲಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದಿರುವ ಬಾಲಪ್ರತಿಭೆ ಆಧ್ಯಾ ವಿ. ಕೋಟ್ಯಾನ್ ಅಲಂಗಾರು ಅವರನ್ನು ಕಾರ್ಯತ್ರಮದಲ್ಲಿ ಸನ್ಮಾನಿಸಲಾಯಿತು.

ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮೂಡುಬಿದಿರೆ ಘಟಕದ ಜಂಟಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ 3ನೇ ವರ್ಷದ ಬೆದ್ರ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆ- 2024 ಸಮಾಜ ಮಂದಿರದ ಆವರಣದಲ್ಲಿ ನಡೆಯಿತು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜ ಮಂದಿರ ಮತ್ತು ಯುವವಾಹಿನಿ ಘಟಕವು ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿ ಉತ್ತಮ ಸಂದೇಶವನ್ನು ನೀಡುತ್ತಿದೆ ಎಂದು ಶುಭಹಾರೈಸಿದರು.

ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್‌ನ ಇಲೆಕ್ಟ್ರಾನಿಕ್ಸ್ ಆಂಡ್‌ ಕಮ್ಯುನಿಕೇಶನ್ ವಿಭಾಗದ ಉಪನ್ಯಾಸಕ ಡಾ.ಎಸ್.ಪಿ. ಗುರುದಾಸ್ ದೀಪಾವಳಿಯ ಸಂದೇಶ ನೀಡಿದರು.

ಯುವವಾಹಿನಿ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೆ ಹಬ್ಬಗಳನ್ನು ಆಚರಿಸುವ ಸಂದರ್ಭದಲ್ಲಿ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಮುಂಚಿತವಾಗಿ ಹಬ್ಬದ ತಯಾರಿ ನಡೆಯುತ್ತಿತ್ತು. ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ದೀಪಾವಳಿಯ ಸಂದೇಶಗಳನ್ನು ನೀಡಲಾಗುತ್ತಿದೆ. ಯುವವಾಹಿನಿ ಘಟಕವು ಈ ಬಾರಿ ವಿವಿಧ ರೀತಿಯ 48 ಕಾರ್ಯಕ್ರಮಗಳನ್ನು ಸಂಘಟಿಸಿದೆ ಎಂದರು.

ಸನ್ಮಾನ: ವಿವಿಧ ಕಡೆಗಳಲ್ಲಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದಿರುವ ಬಾಲಪ್ರತಿಭೆ ಆಧ್ಯಾ ವಿ. ಕೋಟ್ಯಾನ್ ಅಲಂಗಾರು ಅವರನ್ನು ಕಾರ್ಯತ್ರಮದಲ್ಲಿ ಸನ್ಮಾನಿಸಲಾಯಿತು.

ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್‌ನ ಅಧ್ಯಕ್ಷ ಪೂರ್ಣಚಂದ್ರ ಜೈನ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಬಿಂದಿಯ ಶರತ್ ಡಿ.ಶೆಟ್ಟಿ, ಪವರ್ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ವಿನಯ ಕುಮಾರ್, ಉದ್ಯಮಿ ನಾಗರಾಜ ಹೆಗ್ಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸಮಾಜ ಮಂದಿರ ಸಭಾದ ಜೊತೆ ಕಾರ್ಯದರ್ಶಿ ಎಂ. ಗಣೇಶ್ ಕಾಮತ್ ಸ್ವಾಗತಿಸಿದರು. ಯುವವಾಹಿನಿ ಘಟಕದ ಮಾಜಿ ಅದ್ಯಕ್ಷ ನವಾನಂದ ವಿಜೇತರ ವಿವರ ನೀಡಿದರು. ಪ್ರೊ. ಹರೀಶ್ ಕಾಪಿಕಾಡ್ ಗುರುರಾಜ್ ಅವರನ್ನು ಪರಿಚಯಿಸಿದರು. ಸಂಪತ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ವಂದಿಸಿದರು. ಗೂಡುದೀಪ ಸ್ಪರ್ಧೆಯ ಫಲಿತಾಂಶ: ಸಾಂಪ್ರದಾಯಿಕ ವಿಭಾಗದಲ್ಲಿ ರಕ್ಷಿತ್ ಕುಮಾರ್ ಮಂಗಳೂರು (ಪ್ರಥಮ), ಆದಿತ್ಯ ಗುರುಪುರ (ದ್ವಿತೀಯ), ಸುಚಂದ್ರ ಕುಮಾರ್ (ತೃತೀಯ).

ಆಧುನಿಕ ವಿಭಾಗದಲ್ಲಿ ವಿಠ್ಠಲ್ ಭಟ್ ಕಾರ್‌ಸ್ಟ್ರೀಟ್ ಮಂಗಳೂರು (ಪ್ರಥಮ), ಜಗದೀಶ್ ಅಮೀನ್ ಸುಂಕದಕಟ್ಟೆ ಮಂಗಳೂರು (ದ್ವಿತೀಯ), ಬೋಜ ಮಾರ್ನಾಡ್ (ತೃತೀಯ). ಮಾದರಿ ವಿಭಾಗದಲ್ಲಿ ರಂಜಿತ್ ಮತ್ತು ಅನಿರುದ್ಧ್ ಬಸವನಕಜೆ ಮೂಡುಬಿದಿರೆ (ಪ್ರಥಮ), ಕಿಶೋರ್ ಪಡುಮಾರ್ನಾಡು ( ದ್ವಿತೀಯ) ಹಾಗೂ ಯತೀಶ್ ಆಚಾರ್ಯ ಮಾಸ್ತಿಕಟ್ಟೆ ತೃತೀಯ. ರಂಗೋಲಿ ಸ್ಪರ್ಧೆಯಲ್ಲಿ ಶ್ರಾವ್ಯ ಎಸ್. ಆಚಾರ್ಯ, ಜೈನ್ ಪಿ.ಯು.ಕಾಲೇಜು ಮೂಡುಬಿದಿರೆ (ಪ್ರಥಮ), ಕೋಕಿಲ ಮಹಾವೀರ ಕಾಲೇಜು (ದ್ವಿತೀಯ) ಮತ್ತು ವಿದ್ಯಾಶ್ರೀ ಸುರೇಶ್ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಮಹಾವೀರ ಕಾಲೇಜಿನ ಸೌಮ್ಯ, ಶ್ರೇಯ ಮತ್ತು ಅನುಷಾ ನಾಯಕ್‌ ಸಮಾಧಾನಕರ ಬಹುಮಾನ ಪಡೆದರು.