ರಿಯ ಪತ್ರಕರ್ತ, ಸಾಹಿತಿ ರೇಮಂಡ್ ತಾಕೋಡೆ ಅವರ 22ನೇ ಕೃತಿ ‘ಬೊಳ್ಳಿಲು’ ಬಿಡುಗಡೆ ಸಮಾರಂಭ ಭಾನುವಾರ ಸಮಾಜ ಮಂದಿರದಲ್ಲಿ ನಡೆಯಿತು.

ಮೂಡುಬಿದಿರೆ: ಹಿರಿಯ ಪತ್ರಕರ್ತ, ಸಾಹಿತಿ ರೇಮಂಡ್ ತಾಕೋಡೆ ಅವರ 22ನೇ ಕೃತಿ ‘ಬೊಳ್ಳಿಲು’ ಬಿಡುಗಡೆ ಸಮಾರಂಭ ಭಾನುವಾರ ಸಮಾಜ ಮಂದಿರದಲ್ಲಿ ನಡೆಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ವಿವೇಕ್ ಆಳ್ವ ಕೃತಿ ಅನಾವರಣಗೊಳಿಸಿದರು. ಇಂದಿನ ಕೃತಕ ಬುದ್ಧಿಮತ್ತೆ ಯುಗದಲ್ಲಿ ಅನೇಕ ಕಾರ್ಯಗಳನ್ನು ಯಂತ್ರಗಳ ಸಹಾಯದಿಂದ ನೆರವೇರಿಸಬಹುದಾದರೂ, ಸಾಹಿತ್ಯ ಮತ್ತು ಕವನಗಳು ಮಾನವನ ಮನಸ್ಸಿನ ಆಳದ ಭಾವನೆಗಳಿಂದ ಉದ್ಭವಿಸುವ ಸೃಜನಶೀಲ ಪ್ರಕ್ರಿಯೆಗಳಾಗಿವೆ ಎಂದರು. 22 ಕೃತಿಗಳನ್ನು ಪ್ರಕಟಿಸಿರುವ ರೇಮಂಡ್ ಡಿಕುನಾ ಅವರ ‘ಪಿಂಗಾರ’ ಪತ್ರಿಕೆಗೆ 22 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹುಟ್ಟೂರ ಸನ್ಮಾನದೊಂದಿಗೆ ಗೌರವಿಸಲಾಯಿತು. ಸಂಗೀತಾ ಪ್ರಭು ಸನ್ಮಾನ ಪತ್ರ ವಾಚಿಸಿದರು.

ಗೀತಾ ಲಕ್ಷ್ಮೀಶ ಶೆಟ್ಟಿ ಕೃತಿ ಪರಿಚಯ ಮಾಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್, ತುಳು ಕೂಟ ಬೆದ್ರ ಸ್ಥಾಪಕಾಧ್ಯಕ್ಷ ಚಂದ್ರಹಾಸ ದೇವಾಡಿಗ, ಧನಕೀರ್ತಿ ಬಲಿಪ, ಪ್ರೆಸ್ ಕ್ಲಬ್ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್‌ ಸಾಲ್ಯಾನ್, ಜೆಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸುಧಾಕರ ಶೆಟ್ಟಿ, ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ., ರಿಕ್ಷಾ ಚಾಲಕರ-ಮಾಲೀಕರ ಸಂಘದ ಪ್ರತಿನಿಧಿ ರಾಜೇಶ್ ಸುವರ್ಣ ಇದ್ದರು.

ಹಿರಿಯ ಸಾಹಿತಿ ಸದಾನಂದ ನಾರಾವಿ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಸುರೇಶ್ ಕುಮಾರ ನೆಗಳಗುಳಿ, ಧನಂಜಯ ಮೂಡುಬಿದಿರೆ, ಗೀತಾ ಲಕ್ಷ್ಮೀಶ ಶೆಟ್ಟಿ, ಪದ್ಮನಾಭ ಮಿಜಾರು, ಅನಿತಾ ಶೆಟ್ಟಿ, ಎಂ. ರಾಘವೇಂದ್ರ ಭಂಡಾರ್ಕರ್, ರಾಮಕೃಷ್ಣ ಶಿರೂರು, ಸೌಮ್ಯ ಕುಲ್ವೆ, ಮಾನಸ ಪ್ರವೀಣ್ ಭಟ್ ಮಾಂಟ್ರಾಡಿ, ಶರಣ್ಯ ಬೆಳುವಾಯಿ, ಪೂರ್ಣಿಮಾ ಕೋಟ್ಯಾನ್, ಪ್ರಶಾಂತ್ ಆಚಾರ್ಯ ಎಡಪದವು, ಸವಿತಾ ಕರ್ಕೇರಾ ಕವನ ವಾಚಿಸಿದರು. ಸದಾನಂದ ನಾರಾವಿ ಅಧ್ಯಕ್ಷತೆ ವಹಿಸಿದ್ದರು.

ವಿನಯಚಂದ್ರ ನಿರೂಪಿಸಿದರು.ತುಳು ಕೂಟ ಮೂಡುಬಿದಿರೆ, ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮೂಡುಬಿದಿರೆ, ಜೇಸಿಐ ಮೂಡುಬಿದಿರೆ ತ್ರಿಭುವನ್, ತಾಕೋಡೆ ಅಭಿಮಾನಿ ಬಳಗ, ರಿಕ್ಷಾ ಚಾಲಕರ-ಮಾಲೀಕರ ಸಂಘ ಹಾಗೂ ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡುಬಿದಿರೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.