ಸಾರಾಂಶ
ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಧನಾತ್ಮಕವಾದ ಚಿಂತನೆಗಳು ನಿಮ್ಮ ಆಲೋಚನೆಗಳನ್ನು ಬಲಗೊಳಿಸಿ ಸದೃಢ ರಾಷ್ಟ್ರವನ್ನು ಕಟ್ಟುವಂತಾಗಲಿ ಎಂದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಧೈರ್ಯ, ಛಲ, ಮಮತೆ, ಪ್ರೀತಿ, ತ್ಯಾಗ, ಸಹನೆ, ಕ್ಷಮೆ ಎಲ್ಲದರಲ್ಲೂ ದೇವತೆಯಾಗಿರುವ ಹೆಣ್ಣು ಸಮಾಜದಿಂದ ಗೌರವಿಸಲ್ಪಡಬೇಕಾದವಳು. ಲಿಂಗ ತಾರತಮ್ಯ ಧೋರಣೆ ನಿಲ್ಲಿಸಿ ಎಂಬ ಘೋಷವಾಕ್ಯದಿಂದ ಪ್ರಾರಂಭಗೊಂಡ ಈ ಸೇವಾಶಿಬಿರ ಹೆಣ್ಣನ್ನು ಗೌರವಿಸುವ ಪ್ರಕೃತಿ ಮಾತೆಯನ್ನು ಆರಾಧಿಸುವ ಸಂಸ್ಕೃತಿಯನ್ನು ನೂರ್ಮಡಿಗೊಳಿಸಿದೆ ಎಂದು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ರಶ್ಮಿತಾ ಜೈನ್ ಹೇಳಿದರು.ಅವರು ನಡ್ಯೋಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾರ್ಪಾಡಿಯಲ್ಲಿ ನಡೆದ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿತಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಧನಾತ್ಮಕವಾದ ಚಿಂತನೆಗಳು ನಿಮ್ಮ ಆಲೋಚನೆಗಳನ್ನು ಬಲಗೊಳಿಸಿ ಸದೃಢ ರಾಷ್ಟ್ರವನ್ನು ಕಟ್ಟುವಂತಾಗಲಿ ಎಂದರು.ವಕೀಲರಾದ ಬಾಹುಬಲಿ ಪ್ರಸಾದ್ ಮಾತನಾಡಿದರು. ನಡ್ಯೋಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸವಿತಾ ಸತೀಶ್, ಶಿಕ್ಷಕಿ ಜಾನೆಟ್ ಲೋಬೊ, ಸಲಹಾ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ, ಸ್ಥಳೀಯರಾದ ಪುರುಷೋತ್ತಮ ಶೆಟ್ಟಿ, ಪ್ರದೀಪ್ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತೇಶ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಶಿಬಿರಾಧಿಕಾರಿ ತೇಜಸ್ವಿ ಭಟ್, ವಿದ್ಯಾರ್ಥಿ ನಾಯಕರಾದ ಅಭಿನವ, ಅಪೇಕ್ಷಾ ಶೆಟ್ಟಿ ಉಪಸ್ಥಿತರಿದ್ದರು. ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. , ತೇಜಸ್ವಿ ಭಟ್ ವಂದಿಸಿದರು. ವಿನೊಲಿಯ ಪ್ರಿಯಾಂಕ ನಿರೂಪಿಸಿದರು.