ಮೂಡುಬಿದಿರೆ: ಪೊಲೀಸರಿಂದ ಪೇಟೆಯಲ್ಲಿ ಪಥ ಸಂಚಲನ

| Published : Mar 30 2024, 12:53 AM IST

ಸಾರಾಂಶ

ಪೊಲೀಸ್ ಉಪ ನಿರೀಕ್ಷಕರಾದ ನಂಜಾ ನಾಯ್ಕ್, ಮಂಜುನಾಥ್ ಬೋರ್ಕರ್ ಮತ್ತು ಸಿಬ್ಬಂದಿ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 20 ಮಂದಿ ಸಿಬ್ಬಂದಿ ಸಹಿತ 50 ಮಂದಿ ಈ ಪಥ ಸಂಚಲನದಲ್ಲಿ ಪಾಲ್ಗೊಂಡರು.

ಮೂಡುಬಿದಿರೆ: ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಮೂಡುಬಿದಿರೆಯ ಪೊಲೀಸ್ ಸಿಬ್ಬದಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯವರು ಶುಕ್ರವಾರ ಪಥಸಂಚಲ ನಡೆಸಿದರು.

ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 242 ಬೆಟಾಲಿಯನ್ ಸಿಆರ್ ಪಿ ಕೆ.ಎ.ಮಹಾಧಿಕ್ ನೇತೃತ್ವದಲ್ಲಿ ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿಯಿಂದ ಆರಂಭಗೊಂಡು ಮೂಡುಬಿದಿರೆ ಪೇಟೆ ಮೂಲಕ ಕನ್ನಡ ಭವನದವರೆಗೆ ಪಥ ಸಂಚಲನ ನಡೆಯಿತು. ಪೊಲೀಸ್ ಉಪ ನಿರೀಕ್ಷಕರಾದ ನಂಜಾ ನಾಯ್ಕ್, ಮಂಜುನಾಥ್ ಬೋರ್ಕರ್ ಮತ್ತು ಸಿಬ್ಬಂದಿ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 20 ಮಂದಿ ಸಿಬ್ಬಂದಿ ಸಹಿತ 50 ಮಂದಿ ಈ ಪಥ ಸಂಚಲನದಲ್ಲಿ ಪಾಲ್ಗೊಂಡರು.