ಸಾರಾಂಶ
ಮೂಡುಬಿದಿರೆ ಶಿವರಾಮ ಕಾರಂತ ಪ್ರತಿಷ್ಠಾನವು ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ನೀಡುತ್ತಾ ಬಂದಿರುವ ‘ಶಿವರಾಮ ಕಾರಂತ ಪ್ರಶಸ್ತಿ’ ಮತ್ತು ‘ಪುರಸ್ಕಾರ’ವನ್ನು ಪ್ರಕಟಿಸಿದೆ.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮೂಡುಬಿದಿರೆ ಶಿವರಾಮ ಕಾರಂತ ಪ್ರತಿಷ್ಠಾನವು ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ನೀಡುತ್ತಾ ಬಂದಿರುವ ‘ಶಿವರಾಮ ಕಾರಂತ ಪ್ರಶಸ್ತಿ’ ಮತ್ತು ‘ಪುರಸ್ಕಾರ’ವನ್ನು ಪ್ರಕಟಿಸಿದೆ.ಖ್ಯಾತ ಕವಿ, ಬರಹಗಾರ ಬೆಂಗಳೂರಿನ ಡಾ. ಚಿನ್ನಸ್ವಾಮಿ ಮೂಡ್ನಾಕೂಡು, ಖ್ಯಾತ ಜಾನಪದ ವಿದ್ವಾಂಸ, ಸೃಜನಶೀಲ ಲೇಖಕ ಮೈಸೂರಿನ ಪ್ರೊ. ಕೃಷ್ಣಮೂರ್ತಿ ಹನೂರ, ಕನ್ನಡದ ಕೀಲಿಮಣೆ ವಿನ್ಯಾಸ ಸಂಶೋಧಿಸಿ ಕನ್ನಡ ಭಾಷೆಗೆ ವಿಶಿಷ್ಟ ಕೊಡುಗೆ ನೀಡಿದ ಉಡುಪಿಯ ಕೆ.ಪಿ. ರಾವ್ ಮತ್ತು ಸಂಸ್ಕೃತಿಯನ್ನು ಕಟ್ಟುವ ಕಾಯಕದಲ್ಲಿ ಅರ್ಪಣಾ ಭಾವದಿಂದ ೭೫ ವರ್ಷಗಳಿಂದ ಬದ್ಧತೆಯ ಕೆಲಸ ಮಾಡುತ್ತಿರುವ ಹೆಗ್ಗೋಡಿನ ನಿನಾಸಂ ಸಂಸ್ಥೆಗೆ ಈ ವರ್ಷ ‘ಶಿವರಾಮ ಕಾರಂತ ಪ್ರಶಸ್ತಿ’ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ್ ಮಾವಿನಕುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವರಾಮ ಕಾರಂತ ಪುರಸ್ಕಾರ: ಕಳೆದ ಮೂರು ದಶಕಗಳಿಂದ ಕೃತಿಗಳನ್ನು ಆಧರಿಸಿ ನೀಡುತ್ತಾ ಬಂದಿರುವ ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಈ ವರ್ಷ ಎಚ್.ಆರ್. ಲೀಲಾವತಿ ಆತ್ಮಕಥನ ಹಾ‘ಡಾಗಿ ಹರಿದಾಳೆ, ಪ್ರೊಫೆಸರ್ ಎಚ್.ಟಿ. ಪೋತೆ ಅಂಬೇಡ್ಕರ್ ಮತ್ತು, ಡಾ. ಬಿ.ಜನಾರ್ದನ ಭಟ್ ವಿನೂತನ ಕಥನ ಕಾರಣ, ಡಾ. ನಿತ್ಯಾನಂದ ಬಿ. ಶೆಟ್ಟಿ (ಮಾರ್ಗಾನ್ವೇಷಣೆ) ಕೃತಿಗಳಿಗೆ ಲಭಿಸಿವೆ ಎಂದು ಶಿವರಾಮ ಕಾರಂತ ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.