ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಲ್ಲಬೆಟ್ಟು-ಕರಿಂಜೆ-ಮಾರೂರು ವತಿಯಿಂದ ಕಲ್ಲಬೆಟ್ಟುವಿನಲ್ಲಿ ನಡೆಯುವ ಗಣೇಶೋತ್ಸವವು ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಸ್ವಂತ ಕಟ್ಟಡ ಶ್ರೀ ಗಣೇಶ ಸೇವಾ ಧಾಮ ನಿರ್ಮಾಣಕ್ಕೆ ಸೆ. 13ರಂದು ಬೆಳಿಗ್ಗೆ 10.10ಕ್ಕೆ ಶಿಲಾನ್ಯಾಸ ನಡೆಯಲಿದೆ ಎಂದು ಶ್ರೀ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಲ್ಲಬೆಟ್ಟು-ಕರಿಂಜೆ-ಮಾರೂರು ವತಿಯಿಂದ ಕಲ್ಲಬೆಟ್ಟುವಿನಲ್ಲಿ ನಡೆಯುವ ಗಣೇಶೋತ್ಸವವು ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಸ್ವಂತ ಕಟ್ಟಡ ಶ್ರೀ ಗಣೇಶ ಸೇವಾ ಧಾಮ ನಿರ್ಮಾಣಕ್ಕೆ ಸೆ. 13ರಂದು ಬೆಳಿಗ್ಗೆ 10.10ಕ್ಕೆ ಶಿಲಾನ್ಯಾಸ ನಡೆಯಲಿದೆ ಎಂದು ಶ್ರೀ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತನಂದ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಜಿ. ಕೆ. ಭಟ್ ವೇದಿಕೆಯಲ್ಲಿ ನಡೆಯುವ ರಜತ ಸಂಭ್ರಮ ಸಭಾ ಕಾರ್ಯಕ್ರಮವನ್ನು ಮಂಗಳೂರು ಎಸ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್ ಶುಭಾಶಂಸನೆಗೈಯಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಶುಭನುಡಿಯನ್ನಾಡಲಿದ್ದಾರೆ.
ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರಿಗೆ ಗೌರವ ಸಮ್ಮಾನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಜೀವಂದರ್ ಕುಮಾರ್, ಸುಕುಮಾರ್ ಶೆಟ್ಟಿ, ಕುಲದೀಪ ಎಂ., ಯುವರಾಜ್ ಜೈನ್, ಚಂದ್ರಶೇಖರ್ ರಾಜೇ ಅರಸ್, ತಿಮ್ಮಯ್ಯ ಬಿ. ಶೆಟ್ಟಿ, ನಾರಾಯಣ ಪಿ.ಎಂ., ಕೆ. ಶ್ರೀಪತಿ ಭಟ್ ಹಾಗೂ ಪದ್ಮಯ್ಯ ಬಿ. ಸುವರ್ಣ ಭಾಗವಹಿಸಲಿದ್ದಾರೆ.2008ರಿಂದ ಸಾಮಾಜಿಕ ಸೇವಾ ಚಟುವಟಿಕೆ ನಡೆಸುತ್ತಿರುವ ಟ್ರಸ್ಟ್, ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ‘ಶ್ರೀ ಗಣೇಶ ಸೇವಾ ಧಾಮ’ ನಿರ್ಮಿಸಲು ನೀಲನಕ್ಷೆ ತಯಾರಿಸಿದೆ ಎಂದು ಎಂ. ಬಾಹುಬಲಿ ಪ್ರಸಾದ್ ತಿಳಿಸಿದರು.
ಕಾರ್ಯದರ್ಶಿ ಸುಧೀರ್ ಪೈ, ಖಜಾಂಜಿ ರೋಹನ್ ಬಂಗೇರ, ರಾಜೇಶ್ ಬೈಲೂರು ಹಾಗೂ ದಿನೇಶ್ ಆಚಾರ್ಯ ಸುದ್ದಿಗೋಷ್ಠಿಯಲ್ಲಿದ್ದರು.