ಭವ್ಯ ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಉಳಿಸುವ ಶ್ರೇಷ್ಠ ರಾಯಭಾರಿಗಳು ನಮ್ಮ ಯುವ ಜನಾಂಗ ಆಗಬೇಕು ಎಂದು ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ನಿವೃತ್ತ ಮಹಾ ಪ್ರಬಂಧಕ ಕುಮಾರ್ ಬಿ.ಕೆ. ಹೇಳಿದರು.ಅವರು ಹಿಂದೂ ವಿದ್ಯಾದಾಯಿನಿ ಸಂಘಕ್ಕೆ ಒಳಪಟ್ಟ ವಿದ್ಯಾದಾಯಿನಿ ಹೈಸ್ಕೂಲು ಮತ್ತು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಆಯೋಜಿಸಿದ ‘ಭಾರತದ ಸಂತ ಪರಂಪರೆ’ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಮಂಗಳೂರು: ಭವ್ಯ ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಉಳಿಸುವ ಶ್ರೇಷ್ಠ ರಾಯಭಾರಿಗಳು ನಮ್ಮ ಯುವ ಜನಾಂಗ ಆಗಬೇಕು ಎಂದು ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ನಿವೃತ್ತ ಮಹಾ ಪ್ರಬಂಧಕ ಕುಮಾರ್ ಬಿ.ಕೆ. ಹೇಳಿದರು.ಅವರು ಹಿಂದೂ ವಿದ್ಯಾದಾಯಿನಿ ಸಂಘಕ್ಕೆ ಒಳಪಟ್ಟ ವಿದ್ಯಾದಾಯಿನಿ ಹೈಸ್ಕೂಲು ಮತ್ತು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಆಯೋಜಿಸಿದ ‘ಭಾರತದ ಸಂತ ಪರಂಪರೆ’ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಭಾರತ ಸಾಂಸ್ಕೃತಿಕವಾಗಿ ಪ್ರಪಂಚದ ಉಳಿದೆಲ್ಲ ರಾಷ್ಟ್ರಗಳಿಗಿಂತ ವಿಭಿನ್ನವಾದ ಮತ್ತು ಶ್ರೇಷ್ಠವಾದ ದೇಶ. ಈ ದೇಶದ ಇತಿಹಾಸದ ಬಗೆಗಿನ ಅರಿವಿನೊಂದಿಗೆ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನತೆ ತೊಡಗಿಸಿಕೊಳ್ಳಬೇಕು ಎಂದರು.

ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ.ಹರೀಶ ಆಚಾರ್ಯ ಉದ್ಘಾಟಿಸಿ ಮಾತನಾಡಿ, ಬದಲಾವಣೆ ಜಗದ ನಿಯಮ. ಎಲ್ಲ ಬದಲಾವಣೆಗಳನ್ನು ಸ್ವೀಕರಿಸುತ್ತಾ ಭಾರತದ ಶ್ರೇಷ್ಠ ಪರಂಪರೆಗೆ ಕೊಡುಗೆ ನೀಡಿದ ಎಲ್ಲ ಮಹನೀಯರ ಬಗ್ಗೆ ಅರಿತು, ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕೆಆರ್‌ಎಂಎಸ್‌ಎಸ್ ಅಧ್ಯಕ್ಷೆ ಡಾ.ಸುಧಾ ಶೆಟ್ಟಿ ಸ್ವಾಗತಿಸಿದರು. ವಿದ್ಯಾ ದಾಯಿನಿ ಹೈಸ್ಕೂಲ್‌ ಸಹಶಿಕ್ಷಕಿ ವಿದ್ಯಾಲಕ್ಷ್ಮಿ ಕೆ. ವಂದಿಸಿದರು. ವಿದ್ಯಾರ್ಥಿನಿ ಲಕ್ಷ್ಮಿ ಗಂಗಾ ನಿರೂಪಿಸಿದರು.