ಸಾರಾಂಶ
ಮಂಗಳೂರು ಮುಕ್ಕ ಶ್ರೀನಿವಾಸ ಯುನಿವರ್ಸಿಟಿ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸಾಯನ್ಸ್ ಇವರ ವತಿಯಿಂದ ಛಾಯಾ ಗ್ರಾಹಕರಿಗಾಗಿ "ಲೆನ್ಸ್ ಹಿಂದೆ ನೋಟ " ಎಂಬ ಕಾರ್ಯಾಗಾರವನ್ನು ಉಡುಪಿ ಜಗನ್ನಾಥ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಂದು ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಆರು ತಿಂಗಳಿಗೊಮ್ಮೆ ಬಿಪಿ, ಶುಗರ್ ಪರೀಕ್ಷಿಸಿ ನಿಯಮಿತ ಆಹಾರ ಸೇವನೆ, ವ್ಯಾಯಾಮಗಳನ್ನು ಅಳವಡಿಸಿಕೊಂಡರೆ ಮಾನಸಿಕ ನೆಮ್ಮದಿ ಪಡೆದು, ಮಾನಸಿಕ ಒತ್ತಡಗಳಿಂದ ಹೊರಬರಲು ಸಾಧ್ಯ ಎಂದು ಉಡುಪಿ ಡಾ.ಎ.ವಿ. ಬಾಳಿಗ ಆಸ್ಪತ್ರೆಯ ಆಪ್ತಸಮಾಲೋಚಕಿ ಪದ್ಮಾ ರಾಘವೇಂದ್ರ ಹೇಳಿದರುಅವರು ಮಂಗಳೂರು ಮುಕ್ಕ ಶ್ರೀನಿವಾಸ ಯುನಿವರ್ಸಿಟಿ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸಾಯನ್ಸ್ ಇವರ ವತಿಯಿಂದ ಛಾಯಾ ಗ್ರಾಹಕರಿಗಾಗಿ "ಲೆನ್ಸ್ ಹಿಂದೆ ನೋಟ " ಎಂಬ ಉಡುಪಿ ಜಗನ್ನಾಥ ಸಭಾಭವನದಲ್ಲಿ ಹಮ್ಮಿಕೊಂಡ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. ಉಡುಪಿ ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ನಿಯೋಜಿತ ಅಧ್ಯಕ್ಷ ದಿವಾಕರ್ ಹಿರಿಯಡ್ಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನರ್ಸಿಂಗ್ ಸೈನ್ಸ್ ಇನ್ಸ್ಟಿಟ್ಯೂಟ್‌ನ ಸಹಾಯಕ ಉಪನ್ಯಾಸಕಿ ಪೂರ್ಣಿಮ ಸಿ. ಇವರು ಒತ್ತಡ ನಿರ್ಮೂಲನ ಚಟುವಟಿ ಕೆಗಳ ಬಗ್ಗೆ ಮಾಹಿತಿ ನೀಡಿ, ಛಾಯಾಗ್ರಾಹಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿದರು. ಇನ್ನೋರ್ವ ಸಹಾಯಕ ಉಪನ್ಯಾಸಕಿ ಜೀವಿತಾ ವಾಮನ್ ಹಾಸ್ಯ ವ್ಯಾಯಾಮ ಹಾಗು ಧ್ಯಾನದ ಬಗ್ಗೆ ಪ್ರಾತ್ಯಕ್ಷಕಿಯ ಮೂಲಕ ಮಾಹಿತಿ ನೀಡಿದರು. ನರ್ಸಿಂಗ್ ಸೈನ್ಸ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳು ಮದ್ಯಪಾನ, ಆತ್ಮಹತ್ಯೆ ತಡೆ, ಮೊಬೈಲ್ ವ್ಯಸನ ತಡೆ ಹಾಗು ಒತ್ತಡ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಮೈಮ್ ಶೋ ಕಾರ್ಯಕ್ರಮ ಅಭಿನಯನದ ಮೂಲಕ ಅದ್ಭುತವಾಗಿ ಮೂಡಿ ಬಂತು. ಸಂತೋಷ್ ಕೊರಂಗ್ರಪಾಡಿ ಸ್ವಾಗತಿಸಿ, ಸುಕೇಶ್ ಅಮೀನ್ ವಂದಿಸಿದರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು. ವಾಮನ್ ಪಡುಕೆರೆ ಪ್ರಸ್ತಾವನೆಗೈದರು. ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಪ್ರಾರ್ಥಿಸಿದರು.