ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ

| Published : Jan 14 2024, 01:30 AM IST

ಸಾರಾಂಶ

ಚಿಕ್ಕೋಡಿ ಪಟ್ಟಣದ ಕಿವಡ ಮೈದಾನದಲ್ಲಿ ಜರುಗಿದ ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ವ್ಯಾಪ್ತಿಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಎಂಪಿ ಟೋಫ್ರಿ ಪುರುಷ ಹಾಗೂ ಮಹಿಳೆಯರ ಕಬ್ಬಡಿ ಫೈನಲ್ ಪಂದ್ಯಾವಳಿಗೆ ಚಾಲನೆಯಲ್ಲಿ ಹೇಳಿಕೆ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ನಮ್ಮ ದೇಶದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ನಮ್ಮ ಭಾರತ ಕ್ರೀಡೆ, ಸಂಸ್ಕ್ರತಿ, ಸಂಸ್ಕಾರ ಬಿಟ್ಟು ಕೊಟ್ಟಿಲ್ಲ. ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ನಮ್ಮ ಜೊಲ್ಲೆ ಗ್ರುಪ್‌ನ ಉದ್ದೇಶವಾಗಿದೆ ಎಂದು ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಪಟ್ಟಣದ ಕಿವಡ ಮೈದಾನದಲ್ಲಿ ಜರುಗಿದ ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ವ್ಯಾಪ್ತಿಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಎಂಪಿ ಟೋಫ್ರಿ ಪುರುಷ ಹಾಗೂ ಮಹಿಳೆಯರ ಕಬ್ಬಡಿ ಫೈನಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಣ್ಣಾಸಾಹೇಬ ಜೊಲ್ಲೆ ನೇತೃತ್ವದ ಭಾರತೀಯ ಸಂಸ್ಕೃತಿಯ ಅಪ್ಪಟ ಗ್ರಾಮೀಣ ದೇಶಿಯ ಕ್ರೀಡೆ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಬಹುಮಾನ ವಿತರಿಸಿ ಮಾತನಾಡಿ, ಪ್ರತಿವರ್ಷ ಎಂ.ಪಿ.ಟ್ರೋಪಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸುವುದರ ಜೊತೆಗೆ ಗಾಳಿಪಟ ಉತ್ಸವ, ಸಂಸ್ಕೃತಿಕ ಕಾರ್ಯಕ್ರಮಗಳನ್ನು ಜೊಲ್ಲೆ ಗ್ರುಪ್ ಆಯೋಜಿಸಿ ವೇದಿಕೆ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಖಡಕಲಾಟದ ಶಿವಬಸವ ಸ್ವಾಮೀಜಿ, ಆಶಾಜ್ಯೋತಿ ಬುದ್ಧಿ ಮಾಂಧ್ಯ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಬೀರೇಶ್ವರ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ, ಸಂಚಾಲಕ ಅಪ್ಪಾಸಾಹೇಬ್‌ ಜೊಲ್ಲೆ ಹಾಲಸಿಧ್ದನಾಥ, ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ವಿಶ್ವನಾಥ ಕಮತೆ, ದುಂಡಪ್ಪ ಭೆಂಡವಾಡೆ, ಸಿದ್ರಾಮ ಗಡದೆ, ರವಿ ಹಂಜಿ, ಪ್ರವೀನ ಕಾಂಬಳೆ, ಸಂಜಯ ಪಾಟೀಲ, ಸಂತೋಷ ಜೋಗಳೆ, ಕರ್ನಾಟಕ ರಾಜ್ಯ ಕಬ್ಬಡಿ ಅಸೋಸಿಯೇಷನ್‌ ರೇಫರಿ ಬೋರ್ಡನ್‌ ಎಂ.ಕೆ.ಶಿರಗುಪ್ಪೆ, ವಿಜಯ ರಾವುತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.21ನೇ ಶತಮಾನದಲ್ಲಿ ಕಂಪ್ಯೂಟರ್‌, ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಭಾರತದ ಸಂಸ್ಕೃತಿ ಕಬಡ್ಡಿಯಲ್ಲಿ ಇರುವ ದೇಶಭಕ್ತಿ ರುಚಿ ಬೇರೆ ಕ್ರೀಡೆಯಲ್ಲಿಲ್ಲ.

-ಶಶಿಕಲಾ ಜೊಲ್ಲೆ, ಮಾಜಿ ಸಚಿವೆ, ಶಾಸಕಿ.

-----------------------------ಎಂಪಿ ಟೋಫ್ರಿ: ಮಹಿಳೆಯರ ಚಿಂಚಲಿ ಜೈ ಮಹಾಕಾಳಿ ತಂಡ, ಪುರಷರ ಚಿಂಚಲಿ ಅಕಾಡೆಮಿ ಸ್ಪೋರ್ಟ್ಸ್ ಕ್ಲಬ್ ಪ್ರಥಮ

ಚಿಕ್ಕೋಡಿ: ಪಟ್ಟಣದ ಕಿವಡ ಮೈದಾನದಲ್ಲಿ ಜರುಗಿದ ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ವ್ಯಾಪ್ತಿಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಎಂಪಿ ಟೋಫ್ರಿ ಪುರುಷ ಹಾಗೂ ಮಹಿಳೆಯರ ಕಬ್ಬಡಿ ಪಂದ್ಯಾವಳಿಯ ಗ್ರ್ಯಾಂಡ್ ಪೀನಾಲೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಚಿಂಚಲಿ ಜೈ ಮಹಾಕಾಳಿ ತಂಡ ಪ್ರಥಮ ಸ್ಥಾನ ಪುರುಷರ ವಿಭಾಗದಲ್ಲಿ ಚಿಂಚಲಿ ಅಕಾಡೆಮಿ ಸ್ಪೋರ್ಟ್ಸ್ ಕ್ಲಬ್ ಪ್ರಥಮ ಸ್ಥಾನ ಪಡೆದು ₹51,000 ಹಾಗೂ ಟ್ರೋಫಿ ತನ್ನದಾಗಿಸಿಕೊಂಡು ಎಂಪಿ ಟ್ರೋಫಿಯ ಚಾಂಪಿಯನ್ಸ್‌ ಆಗಿ ಹೊರಹೊಮ್ಮಿದರು.

ಮಹಿಳಾ ವಿಭಾಗದಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಜಯಮಹಾಕಾಲಿ ಚಿಂಚಲಿ ಹಾಗೂ ಅಭಾಜಿ ಫೌಂಡೇಶನ್ ಭೀರಡಿ ನಡೆದ ಫೈನಲ್ ಪಂದ್ಯದಲ್ಲಿ ಜಯಮಹಾಕಾಲಿ ಚಿಂಚಲಿ ತಂಡವು ಅಭಾಜಿ ಫೌಂಡೇಶನ್ ಭೀರಡಿ ತಂಡವನ್ನು 14 ಅಂಕಗಳ ಅಂತರದಿಂದ ಮಣಿಸಿ ಚಿಂಚಲಿ ತಂಡವು ಪ್ರಥಮ ಸ್ಥಾನ ಪಡೆದು ₹51 ಸಾವಿರ ನಗದು ಟ್ರೋಫಿ ತನ್ನದಾಗಿಸಿಕೊಂಡಿತು. ಅಭಾಜಿ ಫೌಂಡೇಶನ್ ತಂಡವು ಎರಡನೇ ಸ್ಥಾನ ಪಡೆದುಕೊಂಡಿತು. ಈ ತಂಡಕ್ಕೆ ₹31 ಸಾವಿರ ನಗದು ಟ್ರೋಫಿ ನೀಡಲಾಯಿತು. ಮುಗಳಖೋಡದ ಸಿದ್ದರಾಮೇಶ್ವರ ತಂಡವು 3 ಸ್ಥಾನ ಪಡೆದುಕೊಂಡಿತು. ಈ ತಂಡಕ್ಕೆ ₹15 ಸಾವಿರ ನಗದು ಟ್ರೋಫಿ ನೀಡಿ ಗೌರವಿಸಲಾಯಿತು. ಪುರುಷ ಫೈನಲ್ ಪಂದ್ಯದಲ್ಲಿ ಅಕಾಡೆಮಿ ಚಿಂಚಲಿ ಹಾಗೂ ನ್ಯೂ ಸ್ಪೋರ್ಟ್ಸ್ ಮೇಖಳಿ ತಂಡದ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಅಕಾಡೆಮಿ ಚಿಂಚಲಿ ತಂಡವು ಮೇಖಲಿ ತಂಡವನ್ನು 10 ಅಂಕಗಳ ಅಂತರದಿಂದ ಮಣಿಸಿ ಪ್ರಥಮ ಸ್ಥಾನ ಪಡೆದುಕೊಂಡರು. ಪ್ರಥಮ ಸ್ಥಾನ ಪಡೆದ ಅಕಾಡೆಮಿ ಚಿಂಚಲಿ ತಂಡಕ್ಕೆ ₹51 ಸಾವಿರ ನಗದು ಟ್ರೋಫಿಯನ್ನು ನೀಡಲಾಯಿತು. 2ನೇ ಸ್ಥಾನ ಪಡೆದುಕೊಂಡ ನ್ಯೂ ಸ್ಪೋಟ್ಸ್‌ ಮೇಖಳಿ ತಂಡಕ್ಕೆ ₹31 ಸಾವಿರ ನಗದು ಟ್ರೋಫಿ ಹಾಗೂ ಮೂರನೇ ಸ್ಥಾನ ಪಡೆದುಕೊಂಡ ಜೈ ಹನುಮಾನ ಶಿಂಧಿಹಟ್ಟಿ ತಂಡಕ್ಕೆ ₹15 ಸಾವಿರ ನಗದು ಹಾಗೂ ಅಂತಿಮವಾಗಿ ನಾಲ್ಕನೇ ಸ್ಥಾನ ಪಡೆದ ಓಂ ಬಸವ ಸ್ಪೋರ್ಟ್ಸ್ ಕ್ಲಬ್ ಯರಗಟ್ಟಿ ತಂಡ ಪಡೆದುಕೊಂಡಿತು. ಈ ತಂಡಕ್ಕೆ ₹15 ಸಾವಿರ ನಗದು ಟ್ರೋಫಿ ನೀಡಿ ಗೌರವಿಸಲಾಯಿತು.