ಸಾರಾಂಶ
- ಹಿರೇಕಲ್ಮಠದಲ್ಲಿ ಬಾಲಕಿಯರ ಹಾಸ್ಟೆಲ್ ಉದ್ಘಾಟಿಸಿ ಶಾಸಕ ಶಾಂತನಗೌಡ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕಾಂಗ್ರೆಸ್ ಸರ್ಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಕಲಿಕಾ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಗೆ ಅನುದಾನ ಕೊರತೆ ಆಗದಂತೆ ಸಾಕಷ್ಟು ಹಣ ಮಂಜೂರು ಮಾಡುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ಚಿ.ಕಡದಕಟ್ಟೆ ಗ್ರಾಮದ ಆಶ್ರಮ ಶಾಲಾ ಮಕ್ಕಳ ಹಾಸ್ಟೆಲ್ ಮೇಲ್ದರ್ಜೆಗೆ ಏರಿಸಿದ್ದು, ಇಲ್ಲಿಯ ಹಾಸ್ಟೆಲ್ ಅನ್ನು ಹಿರೇಕಲ್ಮಠದ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ 2ನೇ ವಿಭಾಗವನ್ನು ಶುಕ್ರವಾರ ಉದ್ಘಾಟಿಸಿ ಶಾಸಕರು ಮಾತನಾಡಿದರು.
ಈಗಾಗಲೇ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವತಿಯಿುಂದ 25 ಹಾಸ್ಟೆಲ್‌ಗಳಿವೆ. ಇದರ ಜೊತೆಗೆ 6 ಮೊರಾರ್ಜಿ ದೇಸಾಯಿ ಹಾಸ್ಟೆಲ್‌ಗಳು ಸೇರಿ ಸುಮಾರು 31 ಹಾಸ್ಟೆಲ್‌ಗಳಿವೆ. ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ ಸೇರಿದಂತೆ ಉತ್ತಮ ಮೂಲಸೌಕರ್ಯ ಇರುವುದು ಗಮನಿಸಿದ್ದೇನೆ. ಇದು ಸಂತೋಷದ ವಿಚಾರ ಎಂದು ಹೇಳಿದರು.ಶುಕ್ರವಾರ ಉದ್ಘಾಟನೆಗೊಂಡ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ 75 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಸಾಸ್ವೇಹಳ್ಳಿಯಲ್ಲಿ ಒಂದು ಹಾಸ್ಟೆಲ್ ಮಂಜೂರಾಗಿದ್ದು, ಮುಂದಿನ ವರ್ಷ ಆರಂಭಗೊಳ್ಳುವ ನಿರೀಕ್ಷೆ ಇದೆ. ಇನ್ನು ನ್ಯಾಮತಿಯಲ್ಲಿ ಅನೇಕ ಶಾಲಾ- ಕಾಲೇಜುಗಳಿದ್ದು, ಇಲ್ಲಿ ಕೂಡ ಬಾಲಕರ ಹಾಸ್ಟೆಲ್ ತೆರೆಯುವ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ಹಾಗೂ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆಯೂ ಸರ್ಕಾರದ ಹಂತದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೆ.ಎಚ್.ಗಾಯತ್ರಿ ಮಾತನಾಡಿ, ಆಂಧ್ರ ಮೂಲದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಆದರೆ, ಧರ್ಮದ ದೃಷ್ಠಿಯಲ್ಲಿ ಕನ್ನಡ ಭಾಷೆಯನ್ನು ಓದುವ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿದ್ದರೆ ಅಂತಹವರಿಗೆ ಹಾಸ್ಟೆಲ್‌ನಲ್ಲಿ ಅವಕಾಶ ಮಾಡಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಕೋಣಂದೂರು ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಂಗ್ರೆಸ್ ಯುವ ಮುಖಂಡ ಎ.ಜಿ. ಪ್ರಕಾಶ್, ರವೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಮೃತ್ಯುಂಜಯ ಸ್ವಾಮಿ, ಹಾಸ್ಟೆಲ್ ಮೇಲ್ವಿಚಾರಕರಾದ ರೂಪ, ಇಲಾಖೆಯ ಕುಮಾರ್ ಬಾರ್ಕಿ, ಶ್ರೀ ಮಠದ ವ್ಯವಸ್ಥಾಪಕ ಎಂ.ಪಿ.ಚನ್ನಬಸಯ್ಯ, ಇಲಾಖೆ ಸಿಬ್ಬಂದಿ ಇದ್ದರು.
- - -ಬಾಕ್ಸ್ * "ಅನ್ಯ ರಾಜ್ಯಗಳ ಮಕ್ಕಳಿಗೂ ಹಾಸ್ಟೆಲ್‌ನಲ್ಲಿ ಅವಕಾಶ ಮುಖ್ಯ " ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇತ್ತೀಚೆಗೆ ಪಕ್ಕದ ಆಂಧ್ರ ಪ್ರದೇಶದಿಂದ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ಮಠಕ್ಕೆ ವಿದ್ಯಾರ್ಜನೆಗಾಗಿ ಬರುತ್ತಿದ್ದಾರೆ. ಇವರು ವಿಶೇಷವಾಗಿ ಕನ್ಕಡ ಭಾಷೆಯನ್ನು ಐಚ್ಛಿಕವಾಗಿ ತೆಗೆದುಕೊಂಡು ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದಾರೆ. ಅಲ್ಲದೇ, ಕೆಲವಾರು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಹೋಗಿದ್ದಾರೆ. ಆದರೆ ಇಂತಹ ವಿದ್ಯಾರ್ಥಿಗಳಿಗೆ ಇವರ ಪೋಷಕರು ಬೇರೆ ರಾಜ್ಯದವರು ಎನ್ನುವ ಕಾರಣಕ್ಕೆ ಅವರಿಗೆ ಹಾಸ್ಟೆಲ್‌ಗಳಲ್ಲಿ ಅವಕಾಶ ಸಿಗುತ್ತಿಲ್ಲ. ಶಾಸಕರು ಈ ಬಗ್ಗೆ ಸರ್ಕಾರದ ಗಮನ ಸೆಳೆದು, ಇವರಿಗೂ ಅವಕಾಶ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
- - - -13ಎಚ್.ಎಲ್.ಐ1:ಹಿರೇಕಲ್ಮಠದ ಕಟ್ಟಡದಲ್ಲಿ ಬಾಲಕಿಯರ ಹಾಸ್ಟೆಲ್‌ನ 2ನೇ ವಿಭಾಗವನ್ನು ಶುಕ್ರವಾರ ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿ ಮಾತನಾಡಿದರು.