ಸಾರಾಂಶ
ಪೀಣ್ಯ ದಾಸರಹಳ್ಳಿ : ಅಂತಾರಾಷ್ಟೀಯ ಮಟ್ಟದಲ್ಲಿ ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಗ್ರೇಟರ್ ಬೆಂಗಳೂರು ಅವಶ್ಯ. ಆದರೆ ಮೇಯರ್ ಒಬ್ಬರೇ ಇರಲಿ ಎಂದು ಶಾಸಕ ಎಸ್.ಮುನಿರಾಜು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ರಾಜಗೋಪಾಲನಗರ ಬಾಲಾಜಿ ಅಪಾರ್ಟ್ಮೆಂಟ್, ಮುನೇಶ್ವರ ದೇವಸ್ಥಾನ ಹತ್ತಿರ, ಹೆಗ್ಗನಹಳ್ಳಿ ನಿಸರ್ಗ ಸ್ಕೂಲ್ ರಸ್ತೆ, ಓಂಶಕ್ತಿ ಹಾಗೂ ಬನಶಂಕರಿ ದೇವಸ್ಥಾನ, ಸುಂಕದಕಟ್ಟೆ ಸೊಲ್ಲಾಪುರದಮ್ಮ ದೇವಸ್ಥಾನದ ರಸ್ತೆಗಳ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿಗೆ ಎಲ್ಲಾ ಶಾಸಕರ ಸಹಕಾರವಿದೆ. ಆದರೆ, ನಾಲ್ಕೈದು ಮೇಯರ್‌ಗಳು ಬೇಡ ಒಬ್ಬರೇ ಇರಲಿ ಎನ್ನುವುದು ನಮ್ಮೆಲ್ಲರ ಅಭಿಪ್ರಾಯವಾಗಿದೆ. ನಾಲ್ಕೈದು ಮೇಯರ್‌ಗಳಾದರೆ ಒಬ್ಬಬ್ಬರದ್ದು, ಒಂದೊಂದು ತೀರ್ಮಾನವಾಗಿ ಸಮಸ್ಯೆಗಳು ಹೆಚ್ಚಾಗುತ್ತವೆ ಹೊರತು ಅಭಿವೃದ್ದಿಯಾಗುವುದಿಲ್ಲ. ದೆಹಲಿ, ಮಹಾರಾಷ್ಟ್ರದಲ್ಲಿ ಈ ಪ್ಲಾನ್ ಕಾರ್ಯಗತವಾಗದೇ ಹಿಂದೆ ತೆಗದುಕೊಳ್ಳಲಾಗಿದೆ ಎಂದರು.
ಮುಖಂಡರಾದ ಸಪ್ತಗಿರಿ ಆನಂದ್, ಕಾರ್ಯಕರ್ತರು, ಬಿಬಿಎಂಪಿ ಅಧಿಕಾರಿಗಳು, ಇಂಜಿನಿಯರ್, ಗುತ್ತಿಗೆದಾರರು ಇದ್ದರು.