ಸಾರಾಂಶ
- ಶ್ರೀ ಜಿಹ್ವೇಶ್ಚರ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ - - - ದಾವಣಗೆರೆ: ಪ್ರಸ್ತುತ ಕೈಮಗ್ಗಕ್ಕೆ ಉತ್ತಮ ಬೇಡಿಕೆ ಇದ್ದು, ಸ್ವದೇಶಿ ಉತ್ಪನ್ನಗಳನ್ನು ಮಾರುಕಟ್ಟೆ ವಿಸ್ತರಿಸಲು ಹೆಚ್ಚು ಪ್ರಚಾರ ಮಾಡಬೇಕು. ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಅವರಿಗೆ ಇಳಕಲ್ ಸೀರೆಯನ್ನು ನೀಡಿದ್ದೇನೆ. ಕೈಮಗ್ಗಕ್ಕೆ ಉತ್ತೇಜನ ನೀಡುವ ಕುರಿತು ಸಾಕಷ್ಟು ಆಲೋಚನೆಗಳಿದ್ದು, ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ಮಹಿಳೆಯರಿಗೆ ತರಬೇತಿ ನೀಡಲು ಕ್ರಮ ವಹಿಸಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಸದ್ಯೋಜಾತ ಮಠದಲ್ಲಿ ಸ್ವಕುಳಸಾಳಿ ಸಮಾಜ, ನೇಕಾರ ಸಮಾಜದಿಂದ ಹಮ್ಮಿಕೊಂಡಿದ್ದ ಭಗವಾನ್ ಶ್ರೀ ಜಿಹ್ವೇಶ್ಚರ ಜಯಂತ್ಯುತ್ಸವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು. ಪ್ರಸ್ತುತ ಕೈಮಗಕ್ಕೆ ಉತ್ತಮ ಬೇಡಿಕೆ ಇದೆ. ಸ್ವದೇಶಿ ಉತ್ಪನ್ನಗಳನ್ನು ನಾವು ಪ್ರಚಾರ ಮಾಡಬೇಕು. ಕೈಮಗ್ಗಕ್ಕೆ ಉತ್ತೇಜನ ನೀಡುವ ಕುರಿತು ಸಾಕಷ್ಟು ಆಲೋಚನೆಗಳಿವೆ ಎಂದರು.ನೇಕಾರಿಕೆಯೇ ಸ್ವಕುಳಸಾಳಿ ಸಮಾಜದವರು ಮೂಲ ಕಸುಬಾಗಿದೆ. ನೇಕಾರರಿಗೆ ಅವರದ್ದೇ ಆದ ಸಮಸ್ಯೆಗಳು ಇವೆ. ಆದ್ದರಿಂದ ಸರ್ಕಾರದ ಬೆಂಬಲವೂ ಬೇಕಾಗಿದೆ. ನೇಕಾರ ಸಮಾಜದ ಧ್ವನಿಯಾಗಿ ರಾಷ್ಟ್ರಮಟ್ಟದಲ್ಲಿ ದನಿಯೆತ್ತಲು ತಯಾರಾಗಿದ್ದೇನೆ. ಸಮಾಜದ ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸವನ್ನು ಮಾಡುವ ಮೂಲಕ ತಂದೆ-ತಾಯಿಗೆ, ದಾವಣಗೆರೆ ಜಿಲ್ಲೆಗೆ ಹೆಸರು ತರಬೇಕು. ಸಮಾಜದಿಂದ ನಿವೇಶನಕ್ಕೆ ಬೇಡಿಕೆ ಇಟ್ಟಿದ್ದು, ಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಶ್ರೀ ಜಡೇಸಿದ್ದ ಶಿವಯೋಗೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿ ಶ್ರೇಷ್ಠವಾಗಿದೆ. ಭಾರತಿಯ ಸಂಸ್ಕೃತಿಯಲ್ಲಿ ಗುರು ಪರಂಪರೆ, ಅಧ್ಯಾತ್ಮ, ಭಕ್ತಿ ಅಡಗಿದೆ. ದೇಶದ ಪ್ರತಿಯೊಂದು ಹಬ್ಬದಲ್ಲೂ ಅಧ್ಯಾತ್ಮದ ತತ್ವ ಅಡಗಿದೆ. ಇದನ್ನು ಮರೆತ ಮನುಷ್ಯ ಪಾಶ್ವಿಮಾತ್ಯ ಸಂಸ್ಕೃತಿಗೆ ಅವಲಂಬನೆ ಆಗುತ್ತಿದ್ದಾರೆ. ಮಹಿಳೆಯರು ರಂಗೋಲಿ ಹಾಕುವುದರಿಂದ ಹಿಡಿದು ಕುಂಕುಮ ಹಚ್ಚುವ ಪದ್ಧತಿವರೆಗೂ ಬದಲಾಗುತ್ತಿದ್ದಾರೆ ಎಂದರು.ಸಮಾಜದ ಅಧ್ಯಕ್ಷ ಮೋಹನ್ ಪಿ. ಗಾಯಕವಾಡ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮಾಜಿ ಅಧ್ಯಕ್ಷ ಮಾಲತೇಶ ರಾವ್ ಜಾಧವ್, ಡಿ.ಕೆ. ಸಂಗಮೇಶ, ಧರ್ಮರಾಜ್ ವಿ.ಏಕಬೋಟೆ, ಗಣೇಶ ಕ್ಷೀರಸಾಗರೆ ಹಾಗೂ ಸಮಾಜ ಬಾಂಧವರು ಇದ್ದರು.
- - - -18ಕೆಡಿವಿಜಿ38ಃ:ದಾವಣಗೆರೆಯಲ್ಲಿ ಸ್ವಕುಳಸಾಳಿ ಸಮಾಜ, ನೇಕಾರ ಸಮಾಜದಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು.