2 ಲಕ್ಷಕ್ಕೂ ಹೆಚ್ಚು ಸದಸ್ಯರು ಬಿಜೆಪಿಗೆ ನೋಂದಣಿ

| Published : Oct 23 2024, 01:48 AM IST

2 ಲಕ್ಷಕ್ಕೂ ಹೆಚ್ಚು ಸದಸ್ಯರು ಬಿಜೆಪಿಗೆ ನೋಂದಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರವರ ಸೂಚನೆ ಮೇರೆಗೆ ಸೆ.2 ರಿಂದ ದೇಶಾದ್ಯಂತ ಆರಂಭಗೊಂಡ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚು ಕಾರ್ಯಕರ್ತರು, ಸದಸ್ಯರನ್ನು ಹೊಂದಿದ ಪಕ್ಷವಾಗಿ ಹೊರಹೊಮ್ಮಿದೆ. ಜಿಲ್ಲೆಯಲ್ಲಿ 2,90,832 ಸದಸ್ಯರು ನೋಂದಣಿಯಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರವರ ಸೂಚನೆ ಮೇರೆಗೆ ಸೆ.2 ರಿಂದ ದೇಶಾದ್ಯಂತ ಆರಂಭಗೊಂಡ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚು ಕಾರ್ಯಕರ್ತರು, ಸದಸ್ಯರನ್ನು ಹೊಂದಿದ ಪಕ್ಷವಾಗಿ ಹೊರಹೊಮ್ಮಿದೆ. ಜಿಲ್ಲೆಯಲ್ಲಿ 2,90,832 ಸದಸ್ಯರು ನೋಂದಣಿಯಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.ನವನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 10 ಕೋಟಿ ಸದಸ್ಯರು ನೋಂದಣೆಯಾಗಿದ್ದು, ಇದರ ಪೈಕಿ ರಾಜ್ಯದಲ್ಲಿ 55 ರಿಂದ 60 ಲಕ್ಷ ಸದಸ್ಯರು ನೋಂದಣಿ ಮಾಡಿಕೊಂಡಿದ್ದು ಜಿಲ್ಲೆಯಲ್ಲಿ ಕೂಡು 2,90,832 ಸದಸ್ಯರು ನೋಂದಣಿಯಾಗಿದ್ದಾರೆ. ರಾಜ್ಯದಲ್ಲಿ ಬಾಗಲಕೋಟೆ ಜಿಲ್ಲೆಯ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿದ ಜಿಲ್ಲೆಯಾಗಿ 3ನೇ ಸ್ಥಾನದಲ್ಲಿದೆ. ಗಣೇಶ ಹಾಗೂ ನವರಾತ್ರಿ ಹಬ್ಬದ ಮಧ್ಯೆಯೂ ಕಾರ್ಯಕರ್ತರು ಕ್ರೀಯಾಶೀಲವಾಗಿ ಹೆಚ್ಚೆಚ್ಚು ಸದಸ್ಯರನ್ನು ಪಕ್ಷಕ್ಕೆ ನೋಂದಣಿ ಮಾಡಿದ್ದಾರೆ ಎಂದರು. ಬಿಜೆಪಿ ಸದಸ್ಯತ್ವ ನೋಂದಣಿ ಅಕ್ಟೋಬರ್ 30ರವರೆಗೆ ವಿಸ್ತರಣೆ: ಬಿಜೆಪಿ ಸದಸ್ಯತ್ವ ನೋಂದಣಿ ಅಕ್ಟೋಬರ್ 30 ರವರೆಗೆ ವಿಸ್ತರಣೆ ಮಾಡಲಾಗಿದ್ದು ಜಿಲ್ಲೆಗೆ 4,66,000 ಸದಸ್ಯರನ್ನು ನೋಂದಣಿ ಮಾಡುವ ಗುರಿಯನ್ನು ನೀಡಲಾಗಿದೆ. ಇದನ್ನು ನಿಶ್ಚಿತವಾಗಿ ತಲುಪುತ್ತೇವೆ. ಪ್ರತಿ ವಿಧಾನಸಭೆ ಮತಕ್ಷೇತ್ರದಲ್ಲಿ 500 ರಿಂದ 700 ವರೆಗೆ ಸಕ್ರೀಯ ಸದಸ್ಯರನ್ನು ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಯಾವುದೇ ವರ್ಗಕ್ಕೆ ಸೀಮಿತವಾಗದೇ ಎಲ್ಲರನ್ನು ಸಂಪರ್ಕಿಸಿ ಭಾರತೀಯ ಪಕ್ಷದ ಸದಸ್ಯತ್ವವನ್ನು ಪಡೆದುಕೊಳ್ಳಲು ಕಾರ್ಯಕರ್ತರು ಕೆಲಸ ಮಾಡುತ್ತಿದ್ದು ಇನ್ನೂ ಸಾಕಷ್ಟು ಸಂಖ್ಯೆಯ ಜನ ಸ್ವಯಂ ಪ್ರೇರಣೆಯಿಂದ ಸದಸ್ಯತ್ವ ಕೂಡ ಪಡೆದುಕೊಳ್ಳಲು ಮುಂದಾಗಿದ್ದಾರೆ. ರಾಜ್ಯದ ಬೀದರದಲ್ಲಿ ಶೇ.83, ಬೆಂಗಳೂರ ಉತ್ತರ ಜಿಲ್ಲೆಯಲ್ಲಿ ಶೇ.76, ಬಾಗಲಕೋಟೆ ಜಿಲ್ಲೆಯಲ್ಲಿ ಶೇ.62ರಷ್ಟು ಸದಸ್ಯರು ನೋಂದಣಿಯಾಗಿದ್ದು ರಾಜ್ಯದಲ್ಲಿ ಹೆಚ್ಚು ಸದಸ್ಯರ ನೋಂದಣಿಯಲ್ಲಿ ಜಿಲ್ಲೆಗೆ ಮೂರನೇ ಸ್ಥಾನವಿದೆ ಎಂದರು.ಬೀಳಗಿ ಹೆಚ್ಚು ಸದಸ್ಯರ ನೋಂದಣಿ: ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದಲ್ಲಿ 24,772, ತೇರದಾಳದಲ್ಲಿ 61,765, ಜಮಖಂಡಿ 46030, ಬೀಳಗಿ 67,073, ಬಾದಾಮಿ 25,691, ಬಾಗಲಕೋಟೆ 39,908, ಹುನಗುಂದ ಮತಕ್ಷೇತ್ರದಲ್ಲಿ 25,243 ಸದಸ್ಯರ ನೋಂದಣಿಯಾಗಿದ್ದಾರೆ. ಈ ಮೂಲಕ ಬೀಳಗಿ ಮತಕ್ಷೇತ್ರದಲ್ಲಿ ಹೆಚ್ಚು ಸದಸ್ಯರು ನೋಂದಣಿಯಾಗಿದ್ದಾರೆ ಎಂದರು. ಗೋಷ್ಠಿಯಲ್ಲಿ ಬಸವರಾಜ ಯಂಕಂಚಿ,ಸತ್ಯನಾರಾಯಣ ಹೇಮಾದ್ರಿ, ಈಶ್ವರಪ್ಪ ಆದಪ್ಪನವರ, ಶಂಕರ ಹುನ್ನೂರ,ನಾಗಪ್ಪ ಅಂಬಿ, ರಾಜಶೇಖರ ಮುದೇನೂರ, ಶಿವಾನಂದ ಸುರಪುರ, ಕಾಂಬಳೆ ಇದ್ದರು.