ಸಾರಾಂಶ
ಕನ್ನಡಪ್ರಭ ವಾರ್ತೆ ಸಾಲಿಗ್ರಾಮಲೋಕಾಯುಕ್ತ ಡಿವೈಎಸ್ಪಿ ಮಾಲ್ತೇಶ್ ಮತ್ತು ಸಿಪಿಐ ಎ. ರವಿಕುಮಾರ್ ಅವರ ನೇತೃತ್ವದಲ್ಲಿ ಸಾಲಿಗ್ರಾಮ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆಯ ಸಭೆ ನಡೆಯಿತು.ಸಭೆಯಲ್ಲಿ ಸಾವರ್ಜನಿಕರು ದೂರು ಕೊಡಲು ನಾ ಮುಂದು ನೀ ಮುಂದು ಎಂದು ಮುಗಿಬಿದ್ದರು. ಕೊನೆಗೂ ಎಲ್ಲ ದೂರುದಾರರಿಗೂ ಟೋಕನ್ ಕೊಡುವ ಮೂಲಕ ಸಾಲಾಗಿ ಮನವಿ ಸ್ವೀಕರಿಸಲಾಯಿತು.ಅಧಿಕೃತವಾಗಿ 22 ದೂರುಗಳನ್ನು ನೋಂದಾವಣೆ ಮಾಡಿಕೊಂಡರೆ ಸುಮಾರು 20ಕ್ಕೂ ಹೆಚ್ಚು ದೂರುಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಮೂಲಕ ದೂರು ನೀಡಲು ಬಂದ ಸಾರ್ವಜನಿಕರ ಪ್ರಸಂಸೆಗೆ ಪಾತ್ರರಾದ ಲೋಕಾಯುಕ್ತರು, ಆ ದೂರುಗಳಲ್ಲಿ ಹತ್ತಕ್ಕೂ ಹೆಚ್ಚು ಗ್ರಾಪಂ ಪಿಡಿಒ ಮತ್ತು ಇಒ ಕುರಿತು ಆಗಿದ್ದು, ಉಳಿದ ಇನ್ನು ಹತ್ತು ದೂರುಗಳು ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಸಭೆ ಪ್ರಾರಂಭವಾಗುತ್ತಿದ್ದಂತೆ ಹೆಬ್ಬಾಳ ಗ್ರಾಪಂ ಸದಸ್ಯ ಎಚ್.ಎಸ್. ಜಲೇಂದ್ರ ಅಮೃತ್, ಗ್ರಾಪಂ ಯೋಜನೆ ಡಿಜಿಟಲ್ ಆಗುವ ವಸ್ತುಗಳ ಖರೀದಿಯಲ್ಲಿ ಪ್ರತಿ ಗ್ರಾಪಂಗೆ 24.75 ಲಕ್ಷದಂತೆ ಒಟ್ಟರು 7.92 ಕೋಟಿ ರು. ಗಳನ್ನು ಸರ್ಕಾರ ಗ್ರಾಪಂಗಳ ಅಭಿವೃದ್ಧಿಗೆ ನೀಡಿದರು. ಅದನ್ನು ಕಾನೂನು ಮತ್ತು ಕೆಟಿಪಿಪಿ ನಿಯಮ ಉಲ್ಲಂಘನೆ ಮಾಡಿ ಒಂದು ಕಂಪನಿಗೆ ಈ ಟೆಂಡರ್ ಪ್ರಕ್ರಿಯೆ ಮಾಡಿ ಸಾಮಗ್ರಿ ಖರೀದಿ ಮಾಡಿ ಅವ್ಯವಹಾರ ನಡೆದಿದೆ ಹಾಗೂ ಮುಂದುವರಿದ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ದೂರು ನೀಡಿದರು. ನಿರ್ಲಕ್ಷವಹಿಸಿದ ಅಧಿಕಾರಿಗಳ ವಿರುದ್ಧ ದೂರು32 ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಪಂ ಇಒಗೆ ಜಿಪಂ ಸಿಇಒ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಳ್ಳದೆ ತನಿಖೆ ಮಾಡದೆ ನಿರ್ಲಕ್ಷ ವಹಿಸಿದ್ದಾರೆ, ಆದ್ದರಿಂದ ಈ ಅಧಿಕಾರಿಗಳ ವಿರುದ್ಧನು ಕ್ರಮ ಕೈಗೊಂಡು ತನಿಖೆ ಮಾಡುವಂತೆ ಮನವಿ ನೀಡಿದ್ದಾರೆ.ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾಗಿರುವುದರಿಂದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಜನರನ್ನು ಕಚೇರಿಗೆ ಅಲಿಸದೆ ಅವರ ಕೆಲಸವನ್ನು ಮಾಡಿಕೊಡಿ ಎಂದು ಅಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ದೂರುಗಳಿದ್ದು, ಅವುಗಳನ್ನು ಬಗೆಹರಿಸಲಾಗದೆ ದೂರು ಕೊಡುವ ತನಕ ಸುಮ್ಮನಿದ್ದ ತಾಪಂ ಇಒ ಕುಲದೀಪ್ ವಿರುದ್ಧ ಬೇಸರ ವ್ಯಕ್ತಪಡಿಸುವ ಜೊತೆಗೆ ಮುಂದೆ ಇಂತಹ ಘಟನೆಗಳು ನಡೆದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರು.ದೂರುದಾರರಾದ ಅಪ್ಪಾಜಿ ಗೌಡ, ಎಸ್.ಎ. ರವೀಶ, ಸಾ.ರಾ. ಸತೀಶ ಚಂದ್ರು, ಭಾಗ್ಯಲಕ್ಷ್ಮಿ, ಜಲೇಂದ್ರ, ತ್ಯಾಗರಾಜ್, ಸೋಮಶೇಖರ, ಚಂದ್ರು, ಕಾಳೇಗೌಡ, ತಾಪಂ ಇಒ ಕುಲದೀಪ್, ಉಪ ತಹಸಿಲ್ದಾರ್ ತಿಮ್ಮಯ್ಯ, ಅರಣ್ಯ ಇಲಾಖೆಯ ವಲಯಾಧಿಕಾರಿ ಹರಿಪ್ರಸಾದ್, ಜಿಪಂ ಎಇಇ ವಿನೋತು, ಪಿಡಬ್ಲ್ಯೂಡಿ ಎಇಇ ಸುಮಿತ್ರ, ಸರ್ವೆ ಇಲಾಖೆಯ ಸುರೇಶ್, ಕೃಷಿ ಇಲಾಖೆಯ ಮಲ್ಲಿಕಾರ್ಜುನ್, ಲೋಕಾಯುಕ್ತ ಸಿಬ್ಬಂದಿಗಳಾದ ಮೋಹನ್ ಕುಮಾರ್, ಪ್ರಕಾಶ್, ಲೋಕೇಶ್, ರಾಜ್, ದಿನೇಶ್, ಲೋಕೇಶ್, ಶಶಿ ಅಧಿಕಾರಿಗಳು ಇದ್ದರು.