ಕೆಎಸ್‌ಆರ್‌ಟಿಸಿ-ನೀರಿನ ಟ್ಯಾಂಕರ್ ಡಿಕ್ಕಿ 20ಕ್ಕೂ ಹೆಚ್ಚು ಜನ ಗಾಯಾಳು

| Published : Jan 25 2024, 02:04 AM IST

ಕೆಎಸ್‌ಆರ್‌ಟಿಸಿ-ನೀರಿನ ಟ್ಯಾಂಕರ್ ಡಿಕ್ಕಿ 20ಕ್ಕೂ ಹೆಚ್ಚು ಜನ ಗಾಯಾಳು
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು-ಬೀದರ್ ರಾಷ್ಟ್ರೀಯ ಹೆದ್ದಾರಿ 150(ಎ)ಯ ಬಿ.ಜಿ.ಕೆರೆ ಬಳಿ ಕೆಎಸ್‌ಆರ್‌ಟಿಸಿ ಮತ್ತು ನೀರಿನ ಟ್ಯಾಂಕರ್ ಡಿಕ್ಕಿಯಾಗಿ 20ಕ್ಕೂ ಹೆಚ್ಚು ಜನಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳುಗಳನ್ನು ಸಾರ್ವಕನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಚಳ್ಳಕೆರೆ: ಬೆಂಗಳೂರು-ಬೀದರ್ ರಾಷ್ಟ್ರೀಯ ಹೆದ್ದಾರಿ 150(ಎ)ಯ ಬಿ.ಜಿ.ಕೆರೆ ಬಳಿ ಕೆಎಸ್‌ಆರ್‌ಟಿಸಿ ಮತ್ತು ನೀರಿನ ಟ್ಯಾಂಕರ್ ಡಿಕ್ಕಿಯಾಗಿ 20ಕ್ಕೂ ಹೆಚ್ಚು ಜನಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳುಗಳನ್ನು ಸಾರ್ವಕನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬುಧವಾರ ಮಧ್ಯಾಹ್ನ ಸುಮಾರು 3.30ರ ಸಮಯದಲ್ಲಿ ಕುಷ್ಟಗಿಯಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಬಸ್ ಬಿ.ಜಿ.ಕೆರೆ ಬಳಿ ರಸ್ತೆಬದಿ ಗಿಡಗಳಿಗೆ ನೀರು ಹಾಕುತ್ತಿದ್ದ ನೀರಿನ ಟ್ಯಾಂಕರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ನೀರಿನ ಟ್ಯಾಂಕರ್ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡು ಬಹುತೇಕರಿಗೆ ಕೈ, ಕಾಲು ಮತ್ತು ಎದೆಗೆ ಪೆಟ್ಟುಬಿದಿದೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕ ಪರಶುರಾಮ್(೩೫) ಡಿಕ್ಕಿ ರಭಸಕ್ಕೆ ಬಲಗಾಲಿಗೆ ಪೆಟ್ಟಾಗಿದ್ದು, ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಎಚ್ಚರಗೊಂಡಿದ್ದಾನೆ. ಕೂಡಲೇ ಆತನನ್ನು ಸೇರಿ ಸುಮಾರು ೧೫ಕ್ಕೂ ಹೆಚ್ಚು ಜನರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಸವಿತಾ(೩೮), ಚಂದ್ರಶೇಖರ್(೭೩), ತಿಲೋತ್ತಮೆ(೭೧), ಶಾಂತಮ್ಮ(೫೫), ಲಲಿತಾ ಕುಮಾರಿ(೬೦), ಲಕ್ಷ್ಮಿ (೩೮), ಸುಭದ್ರಮ್ಮ(೩೮), ಮಂಜುಶ್ರೀ(೩೩), ಈಶ್ವರಪ್ಪ (೬೫), ನೇತ್ರಾವತಿ (೪೩), ಧನ್ಯಶ್ರೀ (೭), ಅಮೃತ (೩೩), ನೀಲಮ್ಮ (೪೫), ರಘು (೨೪), ಯಶೋಧಮ್ಮ (೪೭), ಇಬ್ರಾಮ್ (೨೨), ಸೈಯಾದ್ ಇಮಾಮ್ (೨೧) ಸಣ್ಣಮರಿಸ್ವಾಮಿ (೩೫), ನಾಗರಾಜ (೬೦), ಕರಿಯಮ್ಮ (೭೦) ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.