ಸಾರಾಂಶ
ಶಿವಮೊಗ್ಗ: ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ನಿಖರ ಮಾಹಿತಿ ತಿಳಿಯಲು ಶಿಕ್ಷಣ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದು, ಕಳೆದ ಎರಡು ವರ್ಷದಲ್ಲಿ 300ಕ್ಕೂ ಹೆಚ್ಚು ಮಕ್ಕಳು ಶಾಲೆಯನ್ನು ಅರ್ಧಕ್ಕೆ ಬಿಟ್ಟಿರುವುದು ಶಿಕ್ಷಣ ಇಲಾಖೆಯಿಂದ ನವೆಂಬರ್ ತಿಂಗಳಲ್ಲಿ ನಡೆದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳಲ್ಲಿ ಶಿಕ್ಷಣ ಇಲಾಖೆ ಆನ್‌ಲೈನ್ ಮೂಲಕ ಇಂಥ ವಿವರವನ್ನು ಕೆಲೆ ಹಾಕಿದೆ.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಒಟ್ಟು 336 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದು, 2022ರಲ್ಲಿ ಸಾಲಿನಲ್ಲಿ 173 ವಿದ್ಯಾರ್ಥಿಗಳು ಶಾಲೆಯನ್ನು ಬಿಟ್ಟಿದ್ದರೆ, 2023ರಲ್ಲಿ 163 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಜಿಲ್ಲೆಯ 7 ತಾಲೂಕುಗಳ ಪೈಕಿ ಸಾಗರ ತಾಲೂಕಿನಲ್ಲಿ ಅತ್ಯಧಿಕ ಮಕ್ಕಳು (81) ಶಾಲೆಯಿಂದ ಹೊರಗುಳಿದಿದ್ದಾರೆ.ನಂತರ ಸ್ಥಾನದಲ್ಲಿ ಭದ್ರಾವತಿ (75), ಶಿವಮೊಗ್ಗ (58), ಶಿಕಾರಿಪುರದಲ್ಲಿ (37), ಹೊಸನಗರದ (30), ತೀರ್ಥಹಳ್ಳಿ (32) ಹಾಗೂ ಸೊರಬ (23) ವಿದ್ಯಾರ್ಥಿಗಳು ಡ್ರಾಪೌಟ್ ಆಗಿದ್ದಾರೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಏನು ಕಾರಣ? ಕೆಲಸ, ವಲಸೆ, ಕಲಿಕೆ ನಿರಾಸಕ್ತಿ, ಗುಳೆ, ಪೋಷಕರಿಗೆ ಇಚ್ಛಾಶಕ್ತಿ ಇಲ್ಲದಿರುವುದು ಮೊದಲಾದ ಕಾರಣಗಳಿಂದ ಮಕ್ಕಳು ಶಾಲೆ ತೊರೆದಿದ್ದಾರೆ. ಸಮೀಕ್ಷೆಯಿಂದ ಪತ್ತೆಯಾಗಿರುವ ಹೊರಗೆ ಉಳಿದಿರುವ ಮಕ್ಕಳನ್ನು ಶಾಲೆಗೆ ಸೇರಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಣ ಇಲಾಖೆ ಯೋಜನೆ ರೂಪಿಸಿಕೊಳ್ಳುತ್ತಿದೆ.ಶಾಲೆ ಬಿಟ್ಟ ಮಕ್ಕಳ ಪತ್ತೆ: ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಇಲಾಖೆ ಕಾರ್ಯ ಯೋಜನೆ ರೂಪಿಸಲಾಗುತ್ತಿದೆ. ಬ್ಲಾಕ್, ಕ್ಲಸ್ಟರ್‌ವಾರು ಮಕ್ಕಳ ಪಟ್ಟಿ ತಯಾರಿಸಿದ್ದು, ಊರುಗಳಲ್ಲಿ ಆಂದೋಲನ, ಅಭಿಯಾನ ನಡೆಸಲಾಗುವುದು. ಶಾಲೆಬಿಟ್ಟ ಮಕ್ಕಳನ್ನು ಪತ್ತೆ ಹಚ್ಚಿ, ಅವರ ಮನೆಗಳಿಗೆ ಭೇಟಿ ನೀಡಿ ಅವರನ್ನು ಮತ್ತೆ ಶಾಲೆಗೆ ಕರೆತರುವ ಪ್ರಯತ್ನ ಮಾಡಲಾಗುತ್ತದೆ ಎಂದು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಹೇಳಿದರು. ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಶಾಲೆಯಿಂದ ಹೊರಗಳಿದ ಮಕ್ಕಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಕಾರಣ ಕಳೆದ ಬಾರಿ 1-8ನೇ ತರಗತಿ ಮಕ್ಕಳಿಗೆ ಸರ್ವಶಿಕ್ಷಣ ಅಭಿಯಾನದ ಅಡಿ ಸಮೀಕ್ಷೆ ಮಾಡಲಾಗಿತ್ತು. ಈ ಬಾರಿ ಸಮಗ್ರ ಶಿಕ್ಷಣ ಅಭಿಯಾನವಾಗಿ ಬದಲಾಯಿಸಿ 1-10ನೇ ತರಗತಿ ಮಕ್ಕಳಿಗೆ ಸಮೀಕ್ಷೆಗೆ ಒಳಪಡಿಸಲಾಗಿದೆ. ಸಮೀಕ್ಷೆ ಕೈಗೊಳ್ಳುವಾಗ ಈ ಬಾರಿ ಎರಡು ವರ್ಷ ಹೆಚ್ಚು ಮಾಡಿದ್ದರಿಂದ ಡ್ರಾಪೌಟ್ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
---------ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಬಾರಿ ಶಾಲೆ ಬಿಟ್ಟ ಮಕ್ಕಳ ಪೈಕಿ 100ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ಕರೆತರಲಾಗಿದೆ. ಪೋಷಕರು ಉದ್ಯೋಗಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋಗಿರುತ್ತಾರೆ. ಅಂತಹವರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವ ಸನ್ನಿವೇಶ ಇರುತ್ತದೆ. ಇಂತಹ ಮಕ್ಕಳ ಸಂಖ್ಯೆ ಹೆಚ್ಚಿದೆ. ಅಂತಹ ಮಕ್ಕಳನ್ನು ಪತ್ತೆ ಹಚ್ಚಿ ಹತ್ತಿರ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುವುದು.
ಸಿ.ಆರ್.ಪರಮೇಶ್ವರಪ್ಪ , ಡಿಡಿಪಿಐ---------
ಬಾಕ್ಸ್ತಾಲೂಕು ಬಾಲಕರು ಬಾಲಕಿಯರು ಒಟ್ಟು
ಭದ್ರಾವತಿ 34+5= 39ಹೊಸನಗರ 6+4= 10
ಸಾಗರ 39+12= 51ಶಿಕಾರಿಪುರ 13+ 3= 16
ಶಿವಮೊಗ್ಗ 21+ 14= 35ಸೊರಬ 5+5= 10
ತೀರ್ಥಹಳ್ಳಿ 10+2= 12ಒಟ್ಟು 128 45 173
------------2023-24
ತಾಲೂಕು ಬಾಲಕರು ಬಾಲಕಿಯರು ಒಟ್ಟುಭದ್ರಾವತಿ 30+6= 36
ಹೊಸನಗರ 16+4=20ಸಾಗರ 19+11=30
ಶಿಕಾರಿಪುರ 17+4= 21ಶಿವಮೊಗ್ಗ 21+2= 23
ಸೊರಬ 11+2=13ತೀರ್ಥಹಳ್ಳಿ 13+7= 20
ಒಟ್ಟು 127 36 163;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))