ಸಾರಾಂಶ
40 ಸಾವಿರಕ್ಕೂ ಅಧಿಕ ಜನ ಸಮಾವೇಶಕ್ಕೆ ಬೃಹತ್ ಪ್ರಮಾಣದಲ್ಲಿ ಸೇರಿದ್ದರು. ಎಲ್ಲೆಡೆ ಯುವಕರು, ಪಕ್ಷದ ಧ್ವಜ ಹಿಡಿಕೊಂಡು ಸಮಾವೇಶ ಕಡೆ ಹೆಜ್ಜೆ ಹಾಕುತ್ತಿರುವುದು ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ ಕಾಂಗ್ರೆಸ್ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನಗರದ ಎಲ್ಲೆಡೆ ಕಾಂಗ್ರೆಸ್ ಬಾವುಟ, ನಾಯಕರ ಕಟೌಟ್ಗಳು ರಾರಾಜಿಸುತ್ತಿದ್ದವು.
ವಿಜಯಪುರ:ವಿಜಯಪುರ ಮೀಸಲು ಕ್ಷೇತ್ರದ ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಸಾರ್ವಜನಿಕ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು. ಬಿಸಿಲಿನ ಪ್ರತಾಪದ ಮಧ್ಯೆ ಕಾರ್ಯಕರ್ತರು ಹಾಗೂ ಜನರು ಉತ್ಸಾಹದಿಂದ ಸೇರಿದ್ದರು. ದಾಖಲೆ ಪ್ರಮಾಣದ ಬಿಸಿಲಿದ್ದರೂ ಲೆಕ್ಕಿಸದೇ ತಂಡೋಪತಂಡವಾಗಿ ಸಮಾವೇಶಕ್ಕೆ ಬಂದು ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಮಜ್ಜಿಗೆ ಹಾಗೂ ನೀರು ವಿತರಣೆ ಮಾಡುತ್ತಿದ್ದಾಗ, ಮಜ್ಜಿಗೆ ಹಾಗೂ ನೀರು ಪಡೆಯಲು ಜನರು ಮುಗಿ ಬಿದ್ದಿದ್ದರು. ಎರಡು-ಮೂರು ಕಡೆ ಮಜ್ಜಿಗೆ ವಿತರಣೆಗೆ ಟೆಂಟ್ ಹಾಕಿದ್ದು, ಬಿಸಿಲಿನ ಝಳಕ್ಕೆ ಮಜ್ಜಿಗೆಗೆ ಜನರು ಮುಗಿಬಿದ್ದಿದ್ದರು. ಹಾಗೇ, ನೀರಿಗಾಗಿಯೂ ಜನರು ಕಾರ್ಯಕ್ರಮದಲ್ಲಿ ಪರದಾಟ ನಡೆಸಿದರು.
40 ಸಾವಿರಕ್ಕೂ ಅಧಿಕ ಜನ ಸಮಾವೇಶಕ್ಕೆ ಬೃಹತ್ ಪ್ರಮಾಣದಲ್ಲಿ ಸೇರಿದ್ದರು. ಎಲ್ಲೆಡೆ ಯುವಕರು, ಪಕ್ಷದ ಧ್ವಜ ಹಿಡಿಕೊಂಡು ಸಮಾವೇಶ ಕಡೆ ಹೆಜ್ಜೆ ಹಾಕುತ್ತಿರುವುದು ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ ಕಾಂಗ್ರೆಸ್ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನಗರದ ಎಲ್ಲೆಡೆ ಕಾಂಗ್ರೆಸ್ ಬಾವುಟ, ನಾಯಕರ ಕಟೌಟ್ಗಳು ರಾರಾಜಿಸುತ್ತಿದ್ದವು. ಎಲ್ಲೆಡೆ ಕಾರ್ಯಕರ್ತರಿಂದ ಜಯ ಘೋಷಣೆಗಳು ಮೊಳಗುತ್ತಿದ್ದು, ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾದಂತೆ ಕಂಡು ಬಂತು. ಈ ಸಮಾವೇಶಕ್ಕೆ ಜನರು ಕುಳಿತುಕೊಳ್ಳಲು ಜರ್ಮನ್ ತಂತ್ರಜ್ಞಾನವುಳ್ಳ ಬೃಹತ್ ಪೆಂಡಾಲ್ ಹಾಕಲಾಗಿತ್ತು.