ಸಾರಾಂಶ
- ಶೀಗುವಾನಿಯಲ್ಲಿ ಶಾಂತಿ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ಮಾಸಿಕ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಹಿಳೆಯರಿಂದಲೇ ಬಹುತೇಕ ಕುಟುಂಬಗಳು ನೆಮ್ಮದಿ ಜೀವನ ನಡೆಸುತ್ತಿದೆ ಎಂದು ಧ.ಗ್ರಾ.ಯೋಜನೆ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಭಾಗ್ಯ ನಂಜುಂಡಸ್ವಾಮಿ ತಿಳಿಸಿದರು.ಶುಕ್ರವಾರ ಶೀಗುವಾನಿಯಲ್ಲಿ ಶಾಂತಿ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಜವಾಬ್ದಾರಿಯುತವಾಗಿರುತ್ತದೆ. ಮಹಿಳೆಯರು ಕುಟುಂಬವನ್ನು ನಿರ್ವಹಿಸಿದಷ್ಟೇ ಚಾತುರ್ಯದಿಂದ ಸಮಾಜವನ್ನು ಸಹ ಮುನ್ನಡೆಸುವ ಸಾಮಾರ್ಥ್ಯ ಹೊಂದಿದ್ದಾಳೆ. ಇದನ್ನು ಅರ್ಥ ಮಾಡಿಕೊಂಡು ಕುಟುಂಬದ ಸದಸ್ಯರು ಮಹಿಳೆಯರನ್ನು ಪ್ರೋತ್ಸಾಹಿಸಬೇಕು. ದುಂದು ವೆಚ್ಚ ಮಾಡದೆ ಅದೇ ಹಣವನ್ನು ಕುಟುಂಬದ ಉಪಯೋಗಕ್ಕೆ ಬಳಸಿದರೆ ಅರ್ಥಿಕ ಸಮತೋಲನ ಕಾಯ್ದುಕೊಳ್ಳಬಹುದು. ಅಗತ್ಯ ಬಿದ್ದರೆ ಮಾತ್ರ ಸಾಲ ಮಾಡಬೇಕು. ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳದ ಬಗ್ಗೆ ಬರುತ್ತಿರುವ ವದಂತಿಗಳ ಬಗ್ಗೆ ಯಾರೂ ಕಿವಿಕೊಡಬಾರದು ಎಂದರು. ಸಭೆ ಅಧ್ಯಕ್ಷತೆಯನ್ನು ನಿತ್ಯಜ್ಯೋತಿ ಸಂಘದ ಸದಸ್ಯೆ ಸರಸ್ವತಿ ವಹಿಸಿದ್ದರು. ಸಭೆಯಲ್ಲಿ ಸಂಘದ ಸಂಯೋಜಕಿ ಪ್ರತಿಮಾ, ಸೇವಾ ಪ್ರತಿನಿಧಿ ಅಶ್ವಿನಿ ಇದ್ದರು. ಉಷಾ ಭಕ್ತಿ ಗೀತೆ ಹಾಡಿದರು. ಸದಸ್ಯರು ಸಾಮೂಹಿಕವಾಗಿ ಧೈರ್ಯಗೀತೆ ಹಾಡಿದರು. ಸುನೀತಾ ಕಾರ್ಯಕ್ರಮ ನಿರೂಪಿಸಿದರು. 8 ಜ್ಞಾನ ವಿಕಾಸ ಸದಸ್ಯರು ಪಾಲ್ಗೊಂಡಿದ್ದರು.