ಎಸ್ಸೆಸ್ಸೆಲ್ಸಿ ಮುಗಿಸಿ 27 ವರ್ಷದ ಬಳಿಕ ಪುತ್ರಿಯೊಂದಿಗೆ ತಾಯಿಯೂ ಪಿಯುಸಿ ಪಾಸ್‌ !

| N/A | Published : Apr 11 2025, 12:35 AM IST / Updated: Apr 11 2025, 01:24 PM IST

ಎಸ್ಸೆಸ್ಸೆಲ್ಸಿ ಮುಗಿಸಿ 27 ವರ್ಷದ ಬಳಿಕ ಪುತ್ರಿಯೊಂದಿಗೆ ತಾಯಿಯೂ ಪಿಯುಸಿ ಪಾಸ್‌ !
Share this Article
  • FB
  • TW
  • Linkdin
  • Email

ಸಾರಾಂಶ

ರವಿಕಲಾ (42). ಪುತ್ರಿ ತ್ರಿಶಾ, ಪುತ್ತೂರು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು, 584 ಅಂಕಗಳನ್ನು ಪಡೆದು ವಿಶೇಷ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ತಾಯಿ ರವಿಕಲಾ ಅವರು ಆರ್ಟ್ಸ್ ತೆಗೆದುಕೊಂಡು ಖಾಸಗಿಯಾಗಿ ಪರೀಕ್ಷೆ ಬರೆದು 275 ಅಂಕಗಳನ್ನು ಪಡೆದು ಪಾಸ್ ಆಗಿದ್ದಾರೆ.

  ಬಂಟ್ವಾಳ : ಪುತ್ರಿಯೊಂದಿಗೆ ತಾಯಿಯೂ ಉತ್ತೀರ್ಣರಾದ ವಿಶೇಷವೊಂದು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ನಡೆದಿದೆ.ಪುತ್ರಿ ತ್ರಿಶಾರೊಂದಿಗೆ ಪಿಯುಸಿ ಉತ್ತೀರ್ಣರಾದ ತಾಯಿಯ ಹೆಸರು ರವಿಕಲಾ (42). ಪುತ್ರಿ ತ್ರಿಶಾ, ಪುತ್ತೂರು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು, 584 ಅಂಕಗಳನ್ನು ಪಡೆದು ವಿಶೇಷ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. 

ತಾಯಿ ರವಿಕಲಾ ಅವರು ಆರ್ಟ್ಸ್ ತೆಗೆದುಕೊಂಡು ಖಾಸಗಿಯಾಗಿ ಪರೀಕ್ಷೆ ಬರೆದು 275 ಅಂಕಗಳನ್ನು ಪಡೆದು ಪಾಸ್ ಆಗಿದ್ದಾರೆ.

ರವಿಕಲಾ ಖಾಸಗಿಯಾಗಿ ಪರೀಕ್ಷೆ ಬರೆದಿರುವುದರಿಂದ ಸಾಮಾನ್ಯ ವಿದ್ಯಾರ್ಥಿಗಳಂತೆ ಇಂಟರ್ನಲ್ ಅಂಕಗಳು ಇಲ್ಲದೆ ಇರುವುದರಿಂದ ಬರೀ 480 ಅಂಕಗಳಲ್ಲಿ ಪರೀಕ್ಷೆ ನಡೆಯುತ್ತದೆ.1998ರಲ್ಲಿ ಎಸೆಸೆಲ್ಸಿ ಪೂರೈಸಿರುವ ರವಿಕಲಾ ಪರೀಕ್ಷೆಯಲ್ಲಿ 403 ಅಂಕಗಳನ್ನು ಪಡೆದಿದ್ದರು. ಬಳಿಕ ಶಿಕ್ಷಣ ಮುಂದುವರಿಸಲಾಗಲಿಲ್ಲ. ಕಳೆದ ಹಲವು ವರ್ಷಗಳಿಂದ ಅವರು ತಾರಿಪಡ್ಡು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದರು. 

ಮುಂದೆ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ-ಯುಕೆಜಿ ಆಗುತ್ತದೆ. ಆದ್ದರಿಂದ ಕಾರ್ಯಕರ್ತೆಯರು ಪಿಯುಸಿ ಉತ್ತೀರ್ಣರಾಗಿರಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದರು.

ಹೀಗಾದಲ್ಲಿ ಮುಂದಕ್ಕೆ ಕೆಲಸಕ್ಕೆ ತೊಂದರೆ ಆಗಬಹುದು ಎಂದು ಹೆದರಿ ರವಿಕಲಾ ಪಿಯುಸಿ ಪರೀಕ್ಷೆ ಬರೆಯುವ ಮನಸ್ಸು ಮಾಡಿದ್ದರು. ಬರೋಬ್ಬರಿ 27 ವರ್ಷಗಳ ಬಳಿಕ ಮೊದಲ ಪ್ರಯತ್ನದಲ್ಲೇ ಪಿಯುಸಿ ಉತ್ತೀರ್ಣರಾಗಿದ್ದಾರೆ. ಪತಿ, ಮಕ್ಕಳು, ನಾದಿನಿ, ಇಲಾಖೆಯವರ ಸಹಕಾರದಿಂದ ತಯಾರಿ ನಡೆಸಿ ಪರೀಕ್ಷೆ ಬರೆದು ಪಾಸ್ ಆಗಿರುವ ಸಂತೋಷವಿದೆ. ಕೆಲಸದ ಒತ್ತಡದ ನಡುವೆಯೂ ಓದಿ ರವಿಕಲಾ ಅವರು ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ಇವರ ಸಾಧನೆಗೆ ಭೇಷ್ ಎನ್ನಲೇಬೇಕು.