ಮಗನಿಂದಲೇ ತಾಯಿ ಬರ್ಬರ ಹತ್ಯೆ

| Published : Oct 17 2025, 01:00 AM IST

ಸಾರಾಂಶ

ರಾಮನಗರ: ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಮಗನೇ ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ರಾಮನಗರ: ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಮಗನೇ ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಗ್ರಾಮದ ಸರೋಜಮ್ಮ(60) ಕೊಲೆಯಾಗಿದ್ದು, ಈಕೆಯ ಪುತ್ರ ಅನಿಲ್ (42) ಕೃತ್ಯ ಎಸಗಿದವನು. ಆರೋಪಿ ಅನಿಲ್ ಮದ್ಯ ವ್ಯಸನಿಯಾಗಿದ್ದು, ಆಗಿಂದಾಗ್ಗೆ ಹಣಕ್ಕಾಗಿ ತಾಯಿ ಸರೋಜಮ್ಮ ಅವರನ್ನು ಪೀಡಿಸುತ್ತಿದ್ದನು. ಹಣ ನೀಡದಿದ್ದರೆ ಗಲಾಟೆ ಮಾಡುತ್ತಿದ್ದನು ಎನ್ನಲಾಗಿದೆ. ಮದ್ಯ ಸೇವನೆಗೆ ಅನಿಲ್ ತಾಯಿ ಬಳಿ ಹಣ ಕೇಳಿದ್ದಾನೆ. ಸರೋಜಮ್ಮ ಹಣ ಕೊಡಲು ನಿರಾಕರಿಸಿದಾಗ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಆನಂತರ ಮನೆ ಬಾಗಿಲು ಹಾಕಿ ಹೊರಗಡೆ ಮಚ್ಚು ಹಿಡಿದು ಕುಳಿತಿದ್ದಾನೆ. ಅನಿಲ್‌ನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.