ಸಾರಾಂಶ
ಮಗಳನ್ನು ಕೊಂದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ನರ್ಸ್ ಕ್ವಾರ್ಟಸ್‌ನಲ್ಲಿ ನಡೆದಿದೆ. ಮೆಗ್ಗಾನ್ ಬೋಧನಾಸ್ಪತ್ರೆಯ ಲ್ಯಾಬ್‌ನ ಟೆಕ್ನಿಷಿಯನ್ ರಾಮಣ್ಣ ಎಂಬುವರ ಪತ್ನಿ ಶೃತಿ(38) ತನ್ನ 12 ವರ್ಷದ ಮಗಳು ಪೂರ್ವಿಕಾಳ ತಲೆಗೆ ಹಲ್ಲೆ ಮಾಡಿ ಕೊಂದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
- ಮಾಯಕೊಂಡ ಮೂಲದ ರಾಮಣ್ಣ ಮನೆಯಲ್ಲಿ ಘಟನೆ
- - - ಶಿವಮೊಗ್ಗ: ಮಗಳನ್ನು ಕೊಂದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ನರ್ಸ್ ಕ್ವಾರ್ಟಸ್‌ನಲ್ಲಿ ನಡೆದಿದೆ. ಮೆಗ್ಗಾನ್ ಬೋಧನಾಸ್ಪತ್ರೆಯ ಲ್ಯಾಬ್‌ನ ಟೆಕ್ನಿಷಿಯನ್ ರಾಮಣ್ಣ ಎಂಬುವರ ಪತ್ನಿ ಶೃತಿ(38) ತನ್ನ 12 ವರ್ಷದ ಮಗಳು ಪೂರ್ವಿಕಾಳ ತಲೆಗೆ ಹಲ್ಲೆ ಮಾಡಿ ಕೊಂದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತಳ ಪತಿ ರಾಮಣ್ಣ ಕಳೆದ ರಾತ್ರಿ ನೈಟ್ ಡ್ಯೂಟಿಗೆಂದು ಆಸ್ಪತ್ರೆ ಹೋಗಿದ್ದರು. ಡ್ಯೂಟಿ ಮುಗಿಸಿಕೊಂಡು ಬಂದಾಗ ಮನೆಯ ಬಾಗಿಲು ತೆಗೆಯದೇ ಇದ್ದುದರಿಂದ ಹಿಂಬಾಗಿಲು ಒಡೆದು ಒಳಗೆ ಪ್ರವೇಶಿಸಿದ್ದು, ಘಟನೆ ಬೆಳಕಿಗೆ ಬಂದಿದೆ.ಪೂರ್ವಿಕಾಳ ತಲೆಗೆ ಹರಿತವಾದ ಆಯುಧದಿಂದ ಹೊಡೆದಿದ್ದರಿಂದ ತಲೆಯ ಚಿಪ್ಪಿನ ಅರ್ಧ ಭಾಗ ಹಾರಿ ಹೋಗಿದೆ. ಬಾಲಕಿ ಮಲಗಿದ್ದ ವೇಳೆ ಶೃತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಮಗಳನ್ನು ಕೊಂದ ನಂತರ ತನ್ನ ತಪ್ಪಿನ ಅರಿವಾಗಿ ಶೃತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.ರಾಮಣ್ಣ ಮೂಲತಃ ದಾವಣಗೆರೆ ಜಿಲ್ಲೆಯ ಮಾಯಕೊಂಡ ತಾಲೂಕಿನ ನರಗನಹಳ್ಳಿ ನಿವಾಸಿ. ರಾಮಣ್ಣ ತನ್ನ ಸ್ವಂತ ಅಕ್ಕನ ಮಗಳನ್ನೇ ಮದುವೆಯಾಗಿದ್ದರು. ಮೃತ ಶೃತಿಯ ತಂದೆ, ತಾಯಿ ಸೇರಿದಂತೆ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನಾ ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ಮರ್ಡರ್ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.