ಮಗನ ತಿಥಿ ದಿನದಂದೆ ತಾಯಿ ಆತ್ಮಹತ್ಯೆ

| Published : Jul 26 2025, 12:00 AM IST

ಸಾರಾಂಶ

ಹಾರೋಹಳ್ಳಿ: ಮಗನ ಸಾವಿನಿಂದ ಮನನೊಂದ ತಾಯಿಯೊಬ್ಬರು ಮಗನ ಹನ್ನೊಂದನೇ ದಿನದ ತಿಥಿ ಕಾರ್ಯದಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಜನತಾ ಕಾಲೋನಿಯಲ್ಲಿ ನಡೆದಿದೆ.

ಹಾರೋಹಳ್ಳಿ: ಮಗನ ಸಾವಿನಿಂದ ಮನನೊಂದ ತಾಯಿಯೊಬ್ಬರು ಮಗನ ಹನ್ನೊಂದನೇ ದಿನದ ತಿಥಿ ಕಾರ್ಯದಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಜನತಾ ಕಾಲೋನಿಯಲ್ಲಿ ನಡೆದಿದೆ.

ಹಾರೋಹಳ್ಳಿ ಜನತಾ ಕಾಲೋನಿ ಹೊಂಬಮ್ಮ(55) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹೊಂಬಮ್ಮ ಪುತ್ರ ಎಚ್.ಎಸ್.ಮೋಹನ್‌ಕುಮಾರ್(26) ಹನ್ನೊಂದು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು.

ಆತನ ಅಂತ್ಯಕ್ರಿಯೆ ಮುಗಿದು ಮನೆಯಲ್ಲಿ ಹನ್ನೊಂದನೇ ದಿನದ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಅಂದಿನಿಂದ ಇಂದಿನವರೆಗೂ ಮಗ ಮೋಹನ್ ಐಎಎಸ್ ಪರೀಕ್ಷೆ ಬರೆದು, ಉನ್ನತ ಹುದ್ದೆಗೆ ತೆರಳುವ ಕನಸು ಕಾಣುತ್ತಿದ್ದ ತಾಯಿಗೆ ಮಗನ ಸಾವು ಆಘಾತವನ್ನುಂಟು ಮಾಡಿದೆ. ಆ ನೋವನ್ನು ತಾಳಲಾರದೆ ದುಃಖದಲ್ಲಿಯೇ ಕಾಲ ಕಳೆಯುತ್ತಿದ್ದರು.

ಮಗನ ಸಾವಿನಿಂದ ಮನನೊಂದು ಹೊಂಬಮ್ಮ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾರೋಹಳ್ಳಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

25ಕೆಆರ್ ಎಂಎನ್ 7,8 .ಜೆಪಿಜಿ

7. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಹೊಂಬಮ್ಮ.

8.ಆತ್ಮಹತ್ಯೆ ಮಾಡಿಕೊಂಡಿದ್ದ ಎಚ್.ಎಸ್.ಮೋಹನ್‌ಕುಮಾರ್