ಸಾರಾಂಶ
ತರೀಕೆರೆವೃಕ್ಷಮಾತೆ ಸಾಲುಮರ ತಿಮ್ಮಕ್ಕ ಗಿಡಮರಗಳನ್ನು ಬೆಳೆಸುವ ಮೂಲಕ ಕೋಟ್ಯಂತರ ಜನರಿಗೆ ಉತ್ತಮ ಪರಿಸರ ನೀಡಿದ್ದಾರೆ. ಮರಗಳನ್ನು ಮಕ್ಕಳಂತೆ ಬೆಳೆಸಿದ್ದಾರೆ ಎಂದು ಪುರಸಭೆ ಅಧ್ಯಕ್ಷ ವಸಂತಕುಮಾರ್ ಹೇಳಿದರು.
ವೃಕ್ಷಮಾತೆ ಸಾಲುಮರ ತಿಮ್ಮಕ್ಕನವರ ನಿಧನಕ್ಕೆ ಸಂತಾಪ ಸೂಚಕ ಸಭೆ
ಕನ್ನಡಪ್ರಭ ವಾರ್ತೆ, ತರೀಕೆರೆವೃಕ್ಷಮಾತೆ ಸಾಲುಮರ ತಿಮ್ಮಕ್ಕ ಗಿಡಮರಗಳನ್ನು ಬೆಳೆಸುವ ಮೂಲಕ ಕೋಟ್ಯಂತರ ಜನರಿಗೆ ಉತ್ತಮ ಪರಿಸರ ನೀಡಿದ್ದಾರೆ. ಮರಗಳನ್ನು ಮಕ್ಕಳಂತೆ ಬೆಳೆಸಿದ್ದಾರೆ ಎಂದು ಪುರಸಭೆ ಅಧ್ಯಕ್ಷ ವಸಂತಕುಮಾರ್ ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಪುರಸಭೆ ಆವರಣದಲ್ಲಿ ವೃಕ್ಷದ ಬಳಿ ವೃಕ್ಷಮಾತೆ ಸಾಲುಮರ ತಿಮ್ಮಕ್ಕನವರ ನಿಧನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿ ಆವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದರು. ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ, ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಸಾಲುಮರ ತಿಮ್ಮಕ್ಕ ಅವರ ಬದುಕು ಸಾರ್ಥಕ. ಜಾಗತೀಕರಣದ ಇಂದಿನ ದಿನಗಳಲ್ಲಿ ತಿಮ್ಮಕ್ಕನಂತವರು ನಮ್ಮ ಪರಂಪರೆ ಉಳಿಸಿದ್ದಾರೆ. ಪರಿಸರ ರಕ್ಷಣೆಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ.ಅವರ ನಿಧನ ಪರಿಸರ ಮತ್ತು ಪ್ರಕೃತಿಗೆ ನಷ್ಟವಾಗಿದೆ ಎಂದು ಹೇಳಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ವೃಕ್ಷಮಾತೆ ತಿಮ್ಮಕ್ಕ ಮರಗಳನ್ನು ಮಕ್ಕಳಂತೆ ಬೆಳೆಸಿ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ತಮ್ಮ ಜೀವನವನ್ನು ಗಂಧದ ರೀತಿಯಲ್ಲಿ ತೇಯ್ದು ಸಮಾಜಕ್ಕೆ ಸುಗಂಧ ಹಂಚಿದ್ದಾರೆ ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ ತಿಮ್ಮಕ್ಕ ಅವರು 8000 ವೃಕ್ಷಗಳನ್ನು ಬೆಳೆಸಿ ಪರಿಸರ ರಕ್ಷಣೆ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಯಕದ ಮೂಲಕ ವೃಕ್ಷಸೇವೆ ಮಾಡಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು ಸರಳ ಜೀವನ ನಡೆಸಿದರು ಎಂದು ಹೇಳಿದರು.ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಮಾತನಾಡಿ ಸಾಲುಮರ ತಿಮ್ಮಕ್ಕಸಾಧಾರಣ ಕುಟುಂಬದಲ್ಲಿ ಜನಿಸಿ ಸರಳವಾಗಿ ಬದುಕಿದ್ದರೂ ಪರಿಸರ ಕಾಳಜಿ ಹೊಂದಿದ್ದರು ಎಂದರು. ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ಸಾಲುಮರದ ತಿಮ್ಮಕ್ಕ ನಿಧನದಿಂದ ಪ್ರಕೃತಿಗೆ ಅಪಾರ ನಷ್ಟ ಉಂಟಾಗಿದೆ. ಆಲದ ಮರಗಳನ್ನು ಬೆಳಿಸಿದ ಸಾಲುಮರ ತಿಮ್ಮಕ್ಕ ಅಜರಾಮರವಾಗಿರುತ್ತಾರೆ. ಪುರಸಭೆಯಿಂದ ಉದ್ಯಾನವನಕ್ಕೆ ಸಾಲುಮರ ತಿಮ್ಮಕ್ಕ ಅವರ ಹೆಸರು ನಾಮಕರಣ ಮಾಡಬೇಕು ಎಂದು ಮನವಿ ಮಾಡಿದರು. ಗ್ಲೋಬಲ್ ಸೋಷಿಯಲ್ ಅಂಡ್ ವೆಲ್ ಫೇರ್ ಪೌಂಡೇಶನ್ ರಾಜ್ಯಾಧ್ಚಕ್ಷ ಇಮ್ರಾನ್ ಅಹಮದ್ ಬೇಗ್ ಮಾತನಾಡಿ ಸಾಲುಮರ ತಿಮ್ಮಕ್ಕ ಪ್ರಕೃತಿ ರಕ್ಷಣೆಗೆ ಬದುಕಿನ ಸಮಭಾಗ ನೀಡಿ, ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ. ಅವರು ಬೆಳೆಸಿದ ಗಿಡಮರಗಳಿಂದ ಎಷ್ಟೋ ಕೋಟಿ ಜನರಿಗೆ ನೆರವಾಗಿದ್ದಾರೆ ಎಂದರು. ರಂಗನೇಹಳ್ಳಿ ಎಚ್.ಬಿ.ಶ್ರೀಕಂಠಮೂರ್ತಿ, ಪುರಸಭೆ ಸದಸ್ಯ ರಂಗನಾಥ್, ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಶ, ಟಿ.ಜಿ.ಸದಾನಂದ, ಮದುಸೂದನ ಕಕ್ರಿ, .ಪುರಸಭೆ ವ್ಯವಸ್ಥಾಪಕ ವಿಜಯಕುಮಾರ್ ಮಾತನಾಡಿದರು. ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಮಂಜುನಾಥ್, ಸೈಯದ್ ಮುಹೀಬ್ , ಅನಿತಾ, ಪುರಸಭೆ ನೌಕರರು ಭಾಗವಹಿಸಿದ್ದರು.--
15ಕೆಟಿಆರ್.ಕೆ.3ಃತರೀಕೆರೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ವೃಕ್ಷಮಾತೆ ಸಾಲುಮರ ತಿಮ್ಮಕ್ಕ ಸಂತಾಪ ಸೂಚಕ ಸಭೆಯಲ್ಲಿ ಪುರಸಭೆ ಅಧ್ಯಕ್ಷ ವಸಂತಕುಮಾರ್, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ ಮತ್ತಿತರರು ಭಾಗವಹಿಸಿದ್ದರು.
;Resize=(128,128))
;Resize=(128,128))