ಸಾರಾಂಶ
ಸಂಕ್ರಾಂತಿ ಹಬ್ಬದ ದಿನವೇ ಬುತ್ತಿ ಕಟ್ಟಿಕೊಂಡು ಮಗಳ ಮನೆಗೆ ಬಂದಿದ್ದ ಅತ್ತೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಬೆಳಗಾವಿಯ ರೈತ ಗಲ್ಲಿಯಲ್ಲಿ ಮಂಗಳವಾರ ನಡೆದಿದೆ. ಬೆಳಗಾವಿ ಕಲ್ಯಾಣ ನಗರದ ನಿವಾಸಿ ರೇಣುಕಾ ಶ್ರೀಧರ ಪಂಚಮುಖಿ (43) ಹತ್ಯೆಗೀಡಾದ ಮಹಿಳೆ. ಪ್ರಕರಣ ಸಂಬಂಧ ಅಳಿಯ ಶಂಭು ದತ್ತಾ ಬಿರ್ಜೆ (24), ಆತನ ತಾಯಿ ಸುಜಾತಾ ಬಿರ್ಜೆ ಹಾಗೂ ತಂದೆ ದತ್ತಾ ಬಿರ್ಜೆ ಅವರನ್ನು ಪೊಲೀಸರು ಬಂದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಸಂಕ್ರಾಂತಿ ಹಬ್ಬದ ದಿನವೇ ಬುತ್ತಿ ಕಟ್ಟಿಕೊಂಡು ಮಗಳ ಮನೆಗೆ ಬಂದಿದ್ದ ಅತ್ತೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಬೆಳಗಾವಿಯ ರೈತ ಗಲ್ಲಿಯಲ್ಲಿ ಮಂಗಳವಾರ ನಡೆದಿದೆ. ಬೆಳಗಾವಿ ಕಲ್ಯಾಣ ನಗರದ ನಿವಾಸಿ ರೇಣುಕಾ ಶ್ರೀಧರ ಪಂಚಮುಖಿ (43) ಹತ್ಯೆಗೀಡಾದ ಮಹಿಳೆ. ಪ್ರಕರಣ ಸಂಬಂಧ ಅಳಿಯ ಶಂಭು ದತ್ತಾ ಬಿರ್ಜೆ (24), ಆತನ ತಾಯಿ ಸುಜಾತಾ ಬಿರ್ಜೆ ಹಾಗೂ ತಂದೆ ದತ್ತಾ ಬಿರ್ಜೆ ಅವರನ್ನು ಪೊಲೀಸರು ಬಂದಿದ್ದಾರೆ.ಆಗಿದ್ದೇನು?:
ಶುಭಂ ಬಿರ್ಜೆ ಮತ್ತು ಛಾಯಾ 7 ತಿಂಗಳ ಹಿಂದೆ ರಿಜಿಸ್ಟ್ರಾರ್ ವಿವಾಹವಾಗಿದ್ದಾರೆ. ಇಬ್ಬರು ಮಲಪ್ರಭಾ ನಗರದ ರೈತ ಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಗಳಿಗೆ ಸಂಕ್ರಾಂತಿ ಹಬ್ಬದೂಟ ಕೊಡುವುದಕ್ಕೆ ಅವರ ತಾಯಿ ರೇಣುಕಾ ಮನೆಗೆ ಬಂದಿದ್ದರು. ಇದೇ ವೇಳೆ ಮಗಳ ಗಂಡನೇ ಅತ್ತೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆ ತರಹೇವಾರಿ ಅಡುಗೆ ಮಾಡಿಕೊಂಡು ಮಗಳಿಗೆ ಹಬ್ಬದ ಊಟವನ್ನು ಕೊಡುವುದಕ್ಕೆಂದು ರೇಣುಕಾ ಪಡಮುಖೆ ಅವರು ದೊಡ್ಡ ಊಟದ ಬುತ್ತಿಯನ್ನು ಸಿದ್ಧಪಡಿಸಿಕೊಂಡು 11 ಗಂಟೆಯ ಸುಮಾರಿಗೆ ಮಗಳ ಮನೆಗೆ ಬಂದಿದ್ದಾರೆ. ಆದರೆ, ಅತ್ತೆಗೆ ನೀವೇಕೆ ನಮ್ಮ ಮನೆಗೆ ಬರುತ್ತೀರಿ ಎಂದು ತಗಾದೆ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿ ಅತ್ತೆಯ ತೊಡೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಗಲಾಟೆಯಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರೇಣುಕಾ ಅವರನ್ನು ಕೂಡಲೇ ಸ್ಥಳೀಯರು ಸೇರಿಕೊಂಡು ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ತೀವ್ರ ರಕ್ತಸ್ತಾವ ಉಂಟಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ರೇಣುಕಾ ಅವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜತೆಗೆ, ರೇಣುಕಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಬೀಮ್ಸ್ ಶವಗಾರಕ್ಕೆ ರವಾನಿಸಲಾಗಿದೆ. ಬೆಳಗಾವಿ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;Resize=(128,128))
;Resize=(128,128))