ತಾಯಿ ಧೋರಣೆ ಇರಲಿ, ಮಲತಾಯಿ ಧೋರಣೆ ಸಲ್ಲದು

| Published : Jul 28 2024, 02:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ಧೋರಣೆಗಳಿಗೆ ಅಂಟಿಕೊಳ್ಳುವುದನ್ನು ಬಿಟ್ಟು, ದೇಶದ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು. ದೇಶಕ್ಕೆ ಗಂಡಾಂತರ ಬಂದಾಗ ಮಲತಾಯಿ ಧೋರಣೆ ಮಾಡೋದು ಸರಿಯಲ್ಲ. ಕೇಂದ್ರ ಸರ್ಕಾರ ತಾಯಿ ಧೋರಣೆ ಅನುಸರಿಸಬೇಕು. ಮಲತಾಯಿ ಧೋರಣೆ ಅನುಸರಿಸಬಾರದು ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ಧೋರಣೆಗಳಿಗೆ ಅಂಟಿಕೊಳ್ಳುವುದನ್ನು ಬಿಟ್ಟು, ದೇಶದ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು. ದೇಶಕ್ಕೆ ಗಂಡಾಂತರ ಬಂದಾಗ ಮಲತಾಯಿ ಧೋರಣೆ ಮಾಡೋದು ಸರಿಯಲ್ಲ. ಕೇಂದ್ರ ಸರ್ಕಾರ ತಾಯಿ ಧೋರಣೆ ಅನುಸರಿಸಬೇಕು. ಮಲತಾಯಿ ಧೋರಣೆ ಅನುಸರಿಸಬಾರದು ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಹಾರ ನೀಡದಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಈ ದೇಶದ ಪ್ರಧಾನಿಗೆ ತಾಯಿ ಹೃದಯ ಇರಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಹಾರ ಮತ್ತು ಆಂಧ್ರಪ್ರದೇಶ ಸರ್ಕಾರ ಉಳಿಸಿಕೊಳ್ಳಲು ಧಾರಾಳವಾಗಿ ಹಣ ಕೊಡಲಾಗುತ್ತಿದೆ ಎಂದ ಅವರು, ಇವತ್ತು ಭಯದ ವಾತಾವರಣದಲ್ಲಿ ಕೇಂದ್ರ ಸರ್ಕಾರ ನಡೆಯುತ್ತಿದೆ. ಯಾರು ಹೆದರಿಸುತ್ತಾರೆ ಅವರಿಗೆ ದುಡ್ಡು ಕೊಡೋದು, ಮಲತಾಯಿ ಧೋರಣೆ ಅನುಸರಿಸೋದು, ಒಳ್ಳೆಯದಲ್ಲ. ಮೋದಿ ಸಾಹೇಬ್ರು ದೇಶದ ಪ್ರಧಾನಿಗಳು. ಎಲ್ಲರನ್ನು ಸಮದೃಷ್ಟಿಯಿಂದ ಕಾಣುವಂತಹ ಪ್ರವೃತ್ತಿ ಬೆಳೆಯಬೇಕು. ಪ್ರಧಾನಿಯವರು ಮಲತಾಯಿ ಧೋರಣೆ ಮಾಡಲು ಹೋದರೆ, ಪಕ್ಷಕ್ಕೆ ಲಾಭವಾಗುತ್ತೋ ನಷ್ಟವಾಗುತ್ತೋ ಗೊತ್ತಿಲ್ಲ. ಆದರೆ ದೇಶದ ಬಗ್ಗೆ ಗಮನ ಹರಿಸಿದರೆ ಒಳ್ಳೆಯದಾಗಲಿದೆ ಎಂದರು.

ನಿಜಕ್ಕೂ ರಾಜ್ಯಕ್ಕೆ ನೀಡಬೇಕಾದ ಪರಿಹಾರವನ್ನು ಕೇಂದ್ರ ನೀಡಲಿಲ್ಲ. ಕೊನೆಗೆ ಸುಪ್ರೀಂ ಕೋರ್ಟ್‌ ಆದೇಶದಿಂದ ಪರಿಹಾರ ಪಡೆಯುವಂತಾಯಿತು. ಸುಪ್ರೀಂ ಆದೇಶ ಮಾಡದೇ ಹೋದರೆ ಬರ ಪರಿಹಾರ ಕೊಡುತ್ತಿರಲಿಲ್ಲ. ಈ ರೀತಿ ಕೇಂದ್ರ ಸರ್ಕಾರ ನಡೆಯೋದು ಸರಿಯಲ್ಲ ಎಂದು ಹೇಳಿದರು.