ಬಾಣಂತಿ ಸಾವು ಪ್ರಕರಣ: ಹದ್ದಿನಾಳ ಗ್ರಾಮಕ್ಕೆ ಶಾಸಕಿ ಕರೆಮ್ಮ ,ಸಾಂತ್ವನ

| Published : Jan 10 2025, 12:47 AM IST

ಸಾರಾಂಶ

ದೇವದುರ್ಗ: ತಾಲೂಕಿನ ಹದ್ದಿನಾಳ ಗ್ರಾಮದ ಬಾಣಂತಿ ಸರಸ್ವತಿ ನಿಂಗಣ್ಣ ಇತ್ತೀಚಿಗೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಮನೆಗೆ ಗುರುವಾರ ಭೇಟಿ ನೀಡಿ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ದೇವದುರ್ಗ

ತಾಲೂಕಿನ ಹದ್ದಿನಾಳ ಗ್ರಾಮದ ಬಾಣಂತಿ ಸರಸ್ವತಿ ನಿಂಗಣ್ಣ ಇತ್ತೀಚಿಗೆ ಸಾವನ್ನಪ್ಪಿದ ಹಿನ್ನಲೆಯಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಮನೆಗೆ ಗುರುವಾರ ಭೇಟಿ ನೀಡಿ ಸಾಂತ್ವನ ತಿಳಿಸಿದರು.

ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಶಾಸಕಿ, ಮೃತ ಬಾಣಂತಿ ಕುಟುಂಬಕ್ಕೆ ವಯಕ್ತಿಕ ಧನ ಸಹಾಯ ನೀಡಿದರು. ಸರಕಾರದಿಂದ ಹೆಚ್ಚಿನ ಪರಿಹಾರ ಒದಗಿಸುವ ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,ರಾಜ್ಯದಲ್ಲಿ ಇತ್ತೀಚಿಗೆ ಬಾಣಂತಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಕೂಡಲೇ ಸರಕಾರ ಆರೋಗ್ಯ ಇಲಾಖೆ ಮೂಲಕ ಸೂಕ್ತ ಕ್ರಮಕೈಗೊಳ್ಳಬೇಕು. ಹಾಗೂ ಬಾಣಂತಿ ಸಾವಿನಿಂದ ಅನಾಥವಾಗಿರುವ ಮಕ್ಕಳ ಆರೈಕೆಗೆ ಸರಕಾರ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ. ಜಿಲ್ಲಾ ಆರೋಗ್ಯ ಇಲಾಖೆ ಪ್ರತಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ,ಹೆರಿಗೆ ವ್ಯವಸ್ಥೆ, ಬಾಣಂತಿಯರ ಆರೋಗ್ಯ ತಪಾಸಣೆ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಭೀಮನಗೌಡ, ಮುಖಂಡರಾದ ಶರಣಗೌಡ ಸುಂಕೇಶ್ವರಹಾಳ, ತಿಮ್ಮರೆಡ್ಡಿ ನಾಯಕ, ರೇಣುಕಾ ಮಯೂರಸ್ವಾಮಿ, ಪರಮಾನಂದ, ಶಿವು ಸಾಹುಕಾರ, ರಂಗಯ್ಯ ಗೌಡ ಹಾಗೂ ಇತರರು ಇದ್ದರು.