ಮಾತೃಭಾಷೆ ಸಂಸ್ಕೃತಿಯ ಕೊಂಡಿ: ಎ.ವಿ.ಪುರಾಣಿಕ

| Published : Feb 29 2024, 02:04 AM IST

ಸಾರಾಂಶ

ಬಾಗಲಕೋಟೆಯ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜೀವನದ ಪ್ರತಿ ಹಂತದಲ್ಲೂ ಮಾತೃಬಾಷೆ ಸಂಸ್ಕೃತಿಕ ಕೊಂಡಿಯಾಗಿದೆ ಎಂದು ಪ್ರೊ.ಎ.ವಿ. ಪುರಾಣಿಕ ಹೇಳಿದರು.

ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯಲ್ಲಿ ಮಾತನಾಡಿದರು.

ಮಾತೃಭಾಷೆ ಅಸ್ತಿತ್ವ ಮತ್ತು ಸಂಸ್ಕೃತಿಯ ಉಳಿವು ಇದರ ಮುಖ್ಯ ಉದ್ದೇಶ . ಮಾತೃಭಾಷೆ ನಮ್ಮ ಸಂಸ್ಕೃತಿಯ ಕೊಂಡಿಯಾಗಿದೆ. ಮಾತೃಭಾಷೆಯ ಮೂಲಕ ಮಕ್ಕಳಿಗೆ ಸಹಜವಾಗಿ ಕಲಿಸುತ್ತ ಸಂಸ್ಕೃತಿ, ಪರಂಪರೆ ಉಳಿಸಿದ್ದಾರೆ. ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾರಂಭಿಕ ಶಿಕ್ಷಣ ಕೊಡಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜೆ. ಒಡೆಯರ್ ಮಾತನಾಡಿ, ಜಗತ್ತಿನ ಜ್ಞಾನ ಅರಿಯಲು ಅನ್ಯ ಭಾಷೆ ಕಲಿತರು ಮಾತೃಭಾಷೆಯ ಮೇಲೆ ಪ್ರೀತಿ ಹೊಂದಿರಬೇಕು. ಮಾತೃಭಾಷೆ ಗಟ್ಟಿಗೊಳಿಸುವ ಜವಾಬ್ದಾರಿ ಮುಂದಿನ ಪೀಳಿಗೆ ಮೇಲಿದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಐ. ನಂದಿಕೋಲ್ಮಠ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಎಸ್. ಕೆ. ಹಿರೇಮಠ ನಿರೂಪಿಸಿ ವಂದಿಸಿದರು. ಐಕ್ಯೂಎಸಿ ಸಂಯೋಜಕ ಪಿ.ಕೆ. ಚೌಗಲಾ ಹಾಗೂ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.